– ವಿಡಿಯೋ ಮೂಲಕ ಸ್ಲೀಪರ್ ಸೆಲ್‌ಗಳಿಗೆ ಕರೆ ನೀಡಿದ ಘೋರಿ
– ಭಾರತ ಸರ್ಕಾರವನ್ನು ಅಲುಗಾಡಿಸಲು ದಾಳಿ ನಡೆಸಿ
ನವದೆಹಲಿ: ಭಾರತಾದ್ಯಂತ ರೈಲುಗಳ ಮೇಲೆ ದಾಳಿ ನಡೆಸುವಂತೆ ಸ್ಲೀಪರ್ ಸೆಲ್‌ಗಳಿಗೆ ರಾಮೇಶ್ವರಂ ಕೆಫೆ ಸ್ಫೋಟ (Rameshwaram Cafe Blast Case) ಪ್ರಕರಣದ ಸೂತ್ರಧಾರ ಪಾಕಿಸ್ತಾನದಲ್ಲಿರುವ ಉಗ್ರ ಫರ್ಹಾತುಲ್ಲಾ ಘೋರಿ (Farhatullah Ghori) ಕರೆ ನೀಡಿದ್ದಾನೆ.
Advertisement
ಪ್ರಸ್ತುತ ಪಾಕಿಸ್ತಾನದಲ್ಲಿ ನೆಲೆಸಿರುವ ಜಿಹಾದಿ ಘೋರಿ ಭಾರತದಲ್ಲಿನ ರೈಲ್ವೆ ಸಂಪರ್ಕವನ್ನು ಹಳಿತಪ್ಪಿಸಲು ಸ್ಲೀಪರ್ ಸೆಲ್‌ಗಳಿಗೆ ವಿಡಿಯೋ ಮೂಲಕ ಕರೆ ಕೊಟ್ಟಿದ್ದಾನೆ. ಪ್ರೆಶರ್ ಕುಕ್ಕರ್ ಬಳಸಿ ಬಾಂಬ್ ಸ್ಫೋಟಿಸುವ ವಿವಿಧ ವಿಧಾನಗಳನ್ನು ಈ ವೀಡಿಯೊದಲ್ಲಿ ವಿವರಿಸಿದ್ದಾನೆ ಎಂದು ಗುಪ್ತಚರ ಮೂಲಗಳನ್ನು ಆಧಾರಿಸಿ ಮಾಧ್ಯಮವೊಂದು ವರದಿ ಮಾಡಿದೆ.ಇದನ್ನೂ ಓದಿ: ರಣ್‌ವೀರ್ ಸಿಂಗ್ ಜೊತೆ ಹೆಜ್ಜೆ ಹಾಕಲಿದ್ದಾರೆ ನಾಗಚೈತನ್ಯ ಭಾವಿ ಪತ್ನಿ
Advertisement
Advertisement
ಭಾರತ ಸರ್ಕಾರವು ಜಾರಿ ನಿರ್ದೇಶನಾಲಯ ಹಾಗೂ ರಾಷ್ಟ್ರೀಯ ಗುಪ್ತಚರ ಸಂಸ್ಥೆ (National Intelligence Agency) ಮೂಲಕ ಸ್ಲೀಪರ್ ಸೆಲ್‌ಗಳ ಆಸ್ತಿಯನ್ನು ದುರ್ಬಲಗೊಳಿಸುತ್ತಿದೆ. ಹೀಗಾಗಿ ರೈಲುಗಳು ಅಲ್ಲದೇ ಭಾರತದ ಪೆಟ್ರೋಲಿಯಂ ಪೈಪ್‌ಲೈನ್‌ಗಳನ್ನು ನಾಶ ಮಾಡಬೇಕು. ಈ ಮೂಲಕ ಭಾರತ ಸರ್ಕಾರವನ್ನು ಅಲುಗಾಡಿಸಬೇಕು ಎಂದು ಹೇಳಿದ್ದಾನೆ.
Advertisement
ಮೂರು ವಾರಗಳ ಹಿಂದೆ ಟೆಲಿಗ್ರಾಮ್‌ನಲ್ಲಿ ಈ ವೀಡಿಯೊವನ್ನು ಬಿಡುಗಡೆ ಮಾಡಲಾಗಿದೆ ಎಂದು ಗುಪ್ತಚರ ಸಂಸ್ಥೆಗಳ ಮೂಲಗಳು ತಿಳಿಸಿವೆ.
ಪಾಕಿಸ್ತಾನದ ಗುಪ್ತಚರ ಸಂಸ್ಥೆ ಇಂಟರ್-ಸರ್ವೀಸಸ್ ಇಂಟೆಲಿಜೆನ್ಸ್ (INS) ಬೆಂಬಲದೊಂದಿಗೆ ಸ್ಲೀಪರ್ ಸೆಲ್ ಮೂಲಕ ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಸ್ಫೋಟಿಸಿದ್ದ ವಿಚಾರ ತನಿಖೆಯಿಂದ ಬೆಳಕಿಗೆ ಬಂದಿತ್ತು.ಇದನ್ನೂ ಓದಿ: ಸಮಂತಾ ನನ್ನ ಫ್ರೆಂಡ್ ಎಂದ ಉರ್ಫಿ ಜಾವೇದ್
ಫರ್ಹತುಲ್ಲಾ ಘೋರಿ ಯಾರು?
ಅಬು ಸೂಫಿಯಾನ್, ಸರ್ದಾರ್ ಸಾಹಬ್ ಮತ್ತು ಫಾರೂ ಎಂದೂ ಕರೆಯಲ್ಪಡುವ ಫರ್ಹತುಲ್ಲಾ ಘೋರಿ, 2002 ರಲ್ಲಿ ಗುಜರಾತ್‌ನ ಅಕ್ಷರಧಾಮ ದೇವಾಲಯದ ಮೇಲೆ ದಾಳಿ ನಡೆಸಿದ್ದ. ಆ ದಾಳಿಯಲ್ಲಿ 30 ಕ್ಕೂ ಹೆಚ್ಚು ಜನರು ಸಾವನ್ನಪ್ಪಿ, 80 ಜನರು ಗಾಯಗೊಂಡಿದ್ದರು. ಜೊತೆಗೆ 2005 ರಲ್ಲಿ ಹೈದರಾಬಾದ್‌ನ ಟಾಸ್ಕ್ ಫೋರ್ಸ್ ಕಚೇರಿ ಮೇಲೆ ನಡೆದ ದಾಳಿಯಲ್ಲಿಯೂ ಈತನ ಕೈವಾಡ ಇರುವುದು ದೃಢಪಟ್ಟಿತ್ತು.
ಮಾ.1 ರಂದು ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ ಪ್ರಕರಣದಲ್ಲಿ 10 ಜನರು ಗಾಯಗೊಂಡಿದ್ದರು. ಮಾರ್ಚ್ 3 ರಂದು ಪ್ರಕರಣವನ್ನು ಕೈಗೆತ್ತಿಕೊಂಡ ರಾಷ್ಟ್ರೀಯ ತನಿಖಾ ದಳ (NIA) ಒಂದು ತಿಂಗಳ ನಂತರ ಎಪ್ರಿಲ್ 12 ರಂದು ಇಬ್ಬರು ಪ್ರಮುಖ ಆರೋಪಿಗಳಾದ ಅಬ್ದುಲ್ ಮಥೀನ್ ಅಹ್ಮದ್ ತಾಹಾ ಮತ್ತು ಮುಸ್ಸಾವಿರ್ ಹುಸೇನ್ ಶಾಜಿಬ್‌ಅನ್ನು ಪಶ್ಚಿಮ ಬಂಗಾಳದಲ್ಲಿ ಬಂಧಿಸಿತ್ತು. ಫರ್ಹತುಲ್ಲಾ ಘೋರಿ ಮತ್ತು ಅವರ ಅಳಿಯ ಶಾಹಿದ್ ಫೈಸಲ್ ದಕ್ಷಿಣ ಭಾರತದಲ್ಲಿ ಸ್ಲೀಪರ್ ಸೆಲ್‌ಗಳ ಪ್ರಬಲ ಸಂಪರ್ಕ ಹೊಂದಿದ್ದಾರೆ.ಇದನ್ನೂ ಓದಿ: ಕೊಯ್ನಾ ಜಲಾಶಯ ಸಂಪೂರ್ಣ ಭರ್ತಿ – ಕೃಷ್ಣಾ ನದಿ ತೀರದಲ್ಲಿ ಪ್ರವಾಹ ಭೀತಿ
ಕಳೆದ ವರ್ಷ ದೆಹಲಿ ಮತ್ತು ಉತ್ತರ ಪ್ರದೇಶದಿಂದ ಮೂವರು ಮೋಸ್ಟ್ ವಾಂಟೆಡ್ ಭಯೋತ್ಪಾದಕರನ್ನು ದೆಹಲಿ ಪೊಲೀಸರು (Delhi Police) ಬಂಧಿಸಿದ್ದರು. ತನಿಖೆಯ ವೇಳೆ ಘೋರಿ ಭಯೋತ್ಪಾದಕರ ಹ್ಯಾಂಡ್ಲರ್ ಆಗಿರುವ ವಿಚಾರ ಬೆಳಕಿಗೆ ಬಂದಿತ್ತು.