ಅಮೃತಹಳ್ಳಿ ಸ್ಪಾದಲ್ಲಿ ಲೇಡಿ ಗ್ಯಾಂಗ್‌ನಿಂದ ಅಟ್ಯಾಕ್ – ಬಂಧಿತ ಆರೋಪಿ ಕಾವ್ಯಳಿಗಿದೆ ರೌಡಿಸಂ ಲಿಂಕ್

Public TV
2 Min Read
Bengaluru Amruthahalli Spa Attack Kavya And Nisha

ಬೆಂಗಳೂರು: ಅಮೃತಹಳ್ಳಿ (Amruthahalli) ಸ್ಪಾದಲ್ಲಿ (Spa) ಯುವತಿಯರಿಂದ ವ್ಯಕ್ತಿಯ ಮೇಲೆ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತ ಆರೋಪಿ ಕಾವ್ಯಳಿಗೆ ರೌಡಿಸಂ (Rowdisam) ಲಿಂಕ್ ಇರುವುದು ಪೊಲೀಸರ ತನಿಖೆಯಲ್ಲಿ ಬಯಲಾಗಿದೆ.

ಆರೋಪಿ ಕಾವ್ಯ ರೌಡಿಶೀಟರ್ ಮುನಿಕೃಷ್ಣ ಅಲಿಯಾಸ್ ಅಮೃತಹಳ್ಳಿ ಕಪ್ಪೆ ಎಂಬಾತನ ಪ್ರಿಯತಮೆಯಾಗಿದ್ದು, ಆತನ ಹೆಸರಿನಲ್ಲಿ ಫೈನಾನ್ಸ್ ನಡೆಸುತ್ತಿದ್ದಳು. ಸದ್ಯ ರೌಡಿಶೀಟರ್ ಮುನಿಕೃಷ್ಣ ಗೂಂಡಾ ಕಾಯ್ದೆಯಡಿ ಬಂಧನವಾಗಿ ಗುಲ್ಬರ್ಗ ಜೈಲಿನಲ್ಲಿದ್ದಾನೆ. ಆದರೂ ಕೂಡ ಕಾವ್ಯ ಪ್ರಿಯತಮನ ಹೆಸರಿನಲ್ಲಿ ಫೈನಾನ್ಸ್ ಮಾಡಿ ರೌಡಿಸಂ ಮಾಡುತ್ತಿದ್ದಳು. ಇದನ್ನೂ ಓದಿ: ಸಲೂನ್‌ಗೆ ನುಗ್ಗಿ ಲೇಡಿ ರೌಡಿ ಗ್ಯಾಂಗ್‌ನಿಂದ ದಾಂಧಲೆ – ಮೂವರು ಅರೆಸ್ಟ್‌

ಸ್ಪಾದಲ್ಲಿ ವ್ಯಕ್ತಿ ಮೇಲೆ ಹಲ್ಲೆ ಕೇಸಲ್ಲೂ ಕಾವ್ಯಳಿಗೆ ವ್ಯಕ್ತಿ ಜೊತೆ ಯಾವುದೇ ಸಂಬಂಧವಿರಲಿಲ್ಲ. ಆದರೂ ನಿಶಾ ಜೊತೆಗೆ ಹೋಗಿ ಕಾವ್ಯ ಆತನ ಮೇಲೆ ಹಲ್ಲೆ ಮಾಡಿದ್ದಳು. ಅಲ್ಲದೇ ಕೈಯಲ್ಲಿ ಸಿಗರೆಟ್ ಹಿಡಿದು ಅವಾಜ್ ಕೂಡ ಹಾಕಿದ್ದಳು. ಸದ್ಯ ಪ್ರಿಯತಮ ಮುನಿಕೃಷ್ಣ ಕಪ್ಪೆ ಜೈಲಲ್ಲಿದ್ದು, ಪ್ರಿಯತಮನ ಹೆಸರಲ್ಲಿ ಹವಾ ಮೈಂಟೇನ್ ಮಾಡುತ್ತಿದ್ದ ಕಾವ್ಯ ಕೂಡ ಜೈಲುಪಾಲಾಗಿದ್ದಾಳೆ. ಇದನ್ನೂ ಓದಿ: ಹಾಸನದಲ್ಲಿ ಮುಂದುವರಿದ ಮಳೆ – ಹೇಮಾವತಿ ಜಲಾಶಯಕ್ಕೆ 7,992 ಕ್ಯೂಸೆಕ್ ಒಳಹರಿವು

Bengaluru

ಪ್ರಕರಣ ಏನು?
ಸಂಜು ಅನ್ನೋ 40 ವರ್ಷದ ವ್ಯಕ್ತಿ, ಕೊಡಿಗೆಹಳ್ಳಿ ಸಮೀಪದ ಸಾರಾ ಸ್ಪಾನಲ್ಲಿ ಕೆಲಸ ಮಾಡ್ತಿದ್ದ. ಅಲ್ಲಿ ಅನೈತಿಕ ಚಟುವಟಿಕೆಗಳು ನಡೆಯುತ್ತಿದ್ದರಿಂದ ಅಲ್ಲಿ ಕೆಲಸ ಬಿಟ್ಟು ಸ್ವಂತ ಸಲೂನ್ ಮಾಡಿಕೊಂಡಿದ್ದ. ಇದರಿಂದ ಕೋಪಗೊಂಡ ಸಾರಾ ಸ್ಪಾ ಓನರ್ ನಿಶಾ, ಗ್ಯಾಂಗ್ ಕಟ್ಟಿಕೊಂಡು ಬಂದು, ಸಂಜು ನಡೆಸ್ತಿದ್ದ ಸಲೂನ್‌ಗೆ ನುಗ್ಗಿ ಧಾಂಧಲೆ ನಡೆಸಿದ್ದಾರೆ. 10-15 ನಿಮಿಷಗಳ ಕಾಲ ಮನಸೋಇಚ್ಛೆ ಥಳಿಸಿ ಸಲೂನ್‌ನಿಂದ ನೀಲಿ ಬಣ್ಣದ ಕಾರಿನಲ್ಲಿ ಎತ್ತಾಕ್ಕೊಂಡು ಕಿಡ್ನ್ಯಾಪ್ ಮಾಡಿದ್ದಾರೆ ಎಂದು ಅಮೃತಹಳ್ಳಿ ಪೊಲೀಸ್ ಠಾಣೆಯಲ್ಲಿ ಸಂಜು ದೂರು ನೀಡಿದ್ದಾರೆ. ಇದನ್ನೂ ಓದಿ: ಮೊಂಟೆಪದವು ಗುಡ್ಡಕುಸಿತಕ್ಕೆ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ – ಪಿಡಿಓ ಇತರ ಅಧಿಕಾರಿಗಳ ವಿರುದ್ಧ ದೂರು

ಸಾರಾ ಸ್ಪಾ ಓನರ್ ನಿಶಾ, ಸ್ನೇಹಿತೆ ಕಾವ್ಯ, ಮೊಹಮ್ಮದ್ ಹಾಗೂ ಅಪರಿಚಿತರಿಬ್ಬರ ಮೇಲೆ ದೂರು ದಾಖಲಾಗಿದೆ. ದಾಸರಹಳ್ಳಿ ಮುಖ್ಯರಸ್ತೆ ಮೂಲಕ ಜಕ್ಕೂರು ಕಡೆ ಕರೆದುಕೊಂಡು ಹೋಗಿ, ಡ್ರ‍್ಯಾಗನ್, ಬಿಯರ್ ಬಾಟಲ್ ನಿಂದ ಹಲ್ಲೆ ಮಾಡಿದ್ದಾರೆಂದು ಆರೋಪಿಸಿದ್ದಾರೆ. ಸಲೂನ್‌ಗೆ ನುಗ್ಗಿ ಹಲ್ಲೆ ಮಾಡಿರುವ ದೃಶ್ಯಗಳನ್ನ ಸಂಜು ಪತ್ನಿ ಮೊಬೈಲ್‌ನಲ್ಲಿ ಸಿಸಿಟಿವಿ ದೃಶ್ಯಗಳನ್ನ ನೋಡಿ ಅಮೃತಹಳ್ಳಿ ಪೊಲೀಸ್ ಠಾಣೆಗೆ ಬಂದು ಮಾಹಿತಿ ನೀಡಿದ್ದಾರೆ. ಕಿಡ್ನ್ಯಾಪ್ ಮಾಡಿದ ಗ್ಯಾಂಗ್‌ನಲ್ಲಿದ್ದ ಓರ್ವರನ್ನ ಪೊಲೀಸರು ಗುರ್ತಿಸಿ, ಫೋನ್ ಮಾಡಿ ಎಚ್ಚರಿಕೆ ನೀಡಿದ್ದಾರೆ. ಆ ಬಳಿಕ ಠಾಣೆಯ ಮುಂದೆ ಸಂಜುನನ್ನ ಬಿಟ್ಟೋಗಿದ್ದಾರೆ. ಕಣ್ಣು, ಕಿವಿ, ತಲೆ, ಹೊಟ್ಟೆ ಭಾಗಕ್ಕೆ ಗಾಯಗಳಾಗಿದ್ದು, ಯಲಹಂಕ ಸರ್ಕಾರಿ ಆಸ್ಪತ್ರೆಯಲ್ಲಿ ಸಂಜು ಚಿಕಿತ್ಸೆ ಪಡೆದು ಪೊಲೀಸರಿಗೆ ದೂರು ನೀಡಿದ್ದಾರೆ. ಅವಾಚ್ಯ ಶಬ್ದಗಳಿಂದ ಬೈದು ಪೆಟ್ರೋಲ್ ಸುರಿದು ಸುಟ್ಟಾಕ್ತಿನಿ ಎಂದು ಜೀವ ಬೆದರಿಕೆ ಹಾಕಿದ್ದಾರೆಂದು ದೂರಿನಲ್ಲಿ ತಿಳಿಸಿದ್ದಾರೆ. ಇದನ್ನೂ ಓದಿ: ಕೊಡಗು | ಪೊನ್ನಂಪೇಟೆ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿ ಆತ್ಮಹತ್ಯೆ

ರೌಡಿ ಪಟಾಲಂ ವಿರುದ್ಧ ಅಮೃತಹಳ್ಳಿ ಠಾಣೆಯ ಪೊಲೀಸರು ದೂರು ದಾಖಲಿಸಿಕೊಂಡಿದ್ದು, ಮೂವರನ್ನು ಬಂಧಿಸಿದ್ದಾರೆ. ಇದನ್ನೂ ಓದಿ: ಬೆಂಗಳೂರಿನಲ್ಲಿ 150ರ ಗಡಿ ದಾಟಿದ ಕೋವಿಡ್ ಆಕ್ಟೀವ್ ಕೇಸ್

Share This Article