ಬಳ್ಳಾರಿ: ಅಕ್ರಮ ಜೂಜಾಟ (Gambling) ಬಯಲು ಮಾಡಿದ ವ್ಯಕ್ತಿ ಮೇಲೆಯೇ ಪೊಲೀಸರು ಅಟ್ರಾಸಿಟಿ ಕೇಸ್ (Atrocity Case) ದಾಖಲಿಸಿರುವ ಘಟನೆ ಬಳ್ಳಾರಿಯ (Ballari) ಕಂಪ್ಲಿಯಲ್ಲಿ (Kampli) ಬೆಳಕಿಗೆ ಬಂದಿದೆ. ಕಂಪ್ಲಿ ಪೊಲೀಸರ ನಡೆಗೆ ಆಕ್ರೋಶ ವ್ಯಕ್ತವಾಗಿದೆ.
ಕಳೆದ ವಾರ ಕಂಪ್ಲಿಯಲ್ಲಿ ಮಟ್ಕಾ ನಡೆಯುವ ಐದು ಸ್ಥಳಗಳಿಗೆ ಹೋಗಿ ನಾರಾಯಣಸ್ವಾಮಿ ಎಂಬವರು ವೀಡಿಯೋ ಮಾಡಿ, ಧಂದೆಯ ಕರಾಳ ಮುಖ ಬಯಲು ಮಾಡಿದ್ದರು. ಆದರೆ ಮಟ್ಕಾ ದಂಧೆ ಬಯಲಿಗೆಳೆದ ನಾರಾಯಣಸ್ವಾಮಿ ಮೇಲೆಯೇ ಮಟ್ಕಾ ಬರೆಸುತ್ತಿದ್ದ ಆರೋಪಿ ಜಂಬಣ್ಣ ಎನ್ನುವಾತ ಅಟ್ರಾಸಿಟಿ ಕೇಸ್ ಹಾಕಿದ್ದಾನೆ. ಮಟ್ಕಾ ದಂಧೆಕೋರ ಜಂಬಣ್ಣನಿಂದಲೇ ನಾರಾಯಣಸ್ವಾಮಿ ವಿರುದ್ಧ ಕಂಪ್ಲಿ ಪೊಲೀಸ್ ಠಾಣೆಯಲ್ಲಿ ಅಟ್ರಾಸಿಟಿ ಕೇಸ್ ದಾಖಲಾಗಿದೆ. ಇದನ್ನೂ ಓದಿ: ಸಿಎಂ ಕುರ್ಚಿಯಲ್ಲಿ ಕುಳಿತು ನ್ಯಾಯ ಕೊಡುವುದು ಮುಖ್ಯ: ಬಿ.ವೈ.ವಿಜಯೇಂದ್ರ ಅಭಿಪ್ರಾಯ
ಇದೇ ಮಟ್ಕಾ ದಂಧೆಕೋರ ಜಂಬಣ್ಣನ ವಿರುದ್ಧ ಮಟ್ಕಾ ಬರೆಸುತ್ತಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಹಲವು ಪ್ರಕರಣಗಳು ಕಂಪ್ಲಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿವೆ. ನಿರಂತರವಾಗಿ ಮಟ್ಕಾ ದಂಧೆ ಎಗ್ಗಿಲ್ಲದೇ ನಡೆಯುತ್ತಿದ್ದ ಕಾರಣಕ್ಕೆ ನಾರಾಯಣಸ್ವಾಮಿ ರಹಸ್ಯವಾಗಿ ವೀಡಿಯೋ ಮಾಡಿಕೊಂಡು ಬಂದಿದ್ದ. ಇದನ್ನೇ ನೆಪವಾಗಿ ಇಟ್ಟುಕೊಂಡ ಮಟ್ಕಾ ಬುಕ್ಕಿ ಜಂಬಣ್ಣ ನಾರಾಯಣಸ್ವಾಮಿ ಮೇಲೆ ಅಟ್ರಾಸಿಟಿ ಕೇಸ್ ದಾಖಲಿಸಿದ್ದಾನೆ. ಹೀಗಾಗಿ ಜೀವ ಭಯದಲ್ಲಿ ಸಾಮಾಜಿಕ ಹೋರಾಟಗಾರ ನಾರಾಯಣ ಸ್ವಾಮಿ ಓಡಾಡುತ್ತಿದ್ದಾರೆ. ಇದನ್ನೂ ಓದಿ: ಚಿಕ್ಕಬಳ್ಳಾಪುರ | 3 ವರ್ಷಗಳಲ್ಲಿ 536 ಮಂದಿ ಆತ್ಮಹತ್ಯೆ – ಮಹಿಳೆಯರಿಗಿಂತ ಪುರುಷರ ಸಂಖ್ಯೆಯೇ ಹೆಚ್ಚು!
ಇನ್ನೂ ವೀಡಿಯೋ ಮಾಡುವ ವೇಳೆ ನಾರಾಯಣಸ್ವಾಮಿ ಮೇಲೆ ದಂಧೆಕೋರರು ಹಲ್ಲೆ ಮಾಡಿದ್ದರು. ಅಷ್ಟೆಲ್ಲಾ ಆದಮೇಲೂ ಪೊಲೀಸರು ರಕ್ಷಣೆ ನೀಡಿಲ್ಲ ಎಂದು ನಾರಾಯಣಸ್ವಾಮಿ ಆರೋಪಿಸಿದ್ದಾರೆ. ಕಂಪ್ಲಿ ಪೊಲೀಸರೇ ಮಟ್ಕಾ ಬುಕ್ಕಿಗಳಿಗೆ ಸಾಥ್ ನೀಡುತ್ತಿದ್ದಾರೆ ಎಂದು ಪಬ್ಲಿಕ್ ಟಿವಿ ಮುಂದೆ ನಾರಾಯಣಸ್ವಾಮಿ ಅಳಲು ತೋಡಿಕೊಂಡಿದ್ದಾರೆ. ಕಂಪ್ಲಿ ಸಿಪಿಐ ಮಟ್ಕಾಗೆ ಸಾಥ್ ಕೊಟ್ಟಿದ್ದಾರೆ. ಅದಕ್ಕೆ ನನ್ನ ಮೇಲೆ ಅಟ್ರಾಸಿಟಿ ಕೇಸ್ ಹಾಕಲಾಗಿದೆ. ಮಟ್ಕಾ ಬುಕ್ಕಿಗಳಿಂದ ನನಗೆ ಜೀವಭಯ ಇದೆ ಎಂದು ನಾರಾಯಣಸ್ವಾಮಿ ನೋವು ತೋಡಿಕೊಂಡಿದ್ದಾರೆ. ಇದನ್ನೂ ಓದಿ: ಗದಗ | ಕಾರಿನ ಮೇಲೆ ಪಾಕ್ ಧ್ವಜ ಪ್ರದರ್ಶನ – ಅಪ್ರಾಪ್ತನ ವಿರುದ್ಧ ಕೇಸ್