ನವದೆಹಲಿ: ಎಟಿಎಂಗಳಿಂದ ಹಣ ವಿತ್ ಡ್ರಾ (ATM Money Withdraw) ಮಾಡುವುದರ ಮೇಲೆ ವಿಧಿಸಲಾಗುವ ಶುಲ್ಕವನ್ನು ಹೆಚ್ಚಿಸಲು ನಿರ್ಧರಿಸಲಾಗಿದ್ದು, ಮೇ.1 ರಿಂದ 2 ರೂ. ದುಬಾರಿಯಾಗಲಿದೆ.
ಎಟಿಎಂಗಳಿಂದ ಹಣ ವಿತ್ ಡ್ರಾ ಮಾಡುವ ಶುಲ್ಕವನ್ನು ಹೆಚ್ಚಿಸಲು ಬ್ಯಾಂಕ್‌ಗಳಿಗೆ ಭಾರತೀಯ ರಿಸರ್ವ್ ಬ್ಯಾಂಕ್ (Reserve Bank of India) ಅನುಮತಿ ನೀಡಿದ್ದು, ಇದೇ ಮೇ. 1ರಿಂದ ಹೊಸ ಶುಲ್ಕಗಳು ಅನ್ವಯಿಸಲಿವೆ.ಇದನ್ನೂ ಓದಿ:ಶ್ರೀಲೀಲಾಗೆ ‘ನೀನೇ ನನ್ನ ಜೀವನ’ ಎಂದ ಬಾಲಿವುಡ್ ನಟ ಕಾರ್ತಿಕ್ ಆರ್ಯನ್
ಒಂದು ತಿಂಗಳಿಗೆ ಎಟಿಎಂನಿಂದ 5 ಬಾರಿ ಉಚಿತವಾಗಿ ಹಣವನ್ನು ಡ್ರಾ ಮಾಡಬಹುದು. ಅದಕ್ಕಿಂತ ಹೆಚ್ಚು ಬಾರಿ ಹಣ ವಿತ್ ಡ್ರಾ ಮಾಡಲು ಹೋದರೆ 31 ರೂ.ಗಳನ್ನು ಕಡಿತಗೊಳಿಸುತ್ತಿತ್ತು. ಆದರೆ ಇದೀಗ ಈ ಶುಲ್ಕವನ್ನು 2ರೂ.ಗೆ ಏರಿಕೆ ಮಾಡಿದ್ದು, ಗರಿಷ್ಠ ಮಿತಿ ಮೀರಿ ಡ್ರಾ ಮಾಡಿದ್ರೆ 23 ರೂ. ಕಡಿತಗೊಳ್ಳಲಿವೆ. ಈ ಮೂಲಕ 21 ರೂ.ಯಿಂದ 23 ರೂ.ಗೆ ಏರಿಕೆಯಾಗಿದೆ.
ಪ್ರಸ್ತುತ, ಬೆಂಗಳೂರು, ಚೆನ್ನೈ, ಹೈದರಾಬಾದ್, ಕೋಲ್ಕತ್ತಾ, ಮುಂಬೈ ಮತ್ತು ನವದೆಹಲಿಯಲ್ಲಿ ಖಾತೆ ಹೊಂದಿರುವವರು ತಮ್ಮ ಬ್ಯಾಂಕಿನ ಎಟಿಎಂಗಳಲ್ಲಿ ಮಾಸಿಕ ಐದು ಮತ್ತು ಇತರ ಬ್ಯಾಂಕುಗಳ ಎಟಿಎಂಗಳಲ್ಲಿ ಮೂರು ಉಚಿತ ವಿತ್ ಡ್ರಾ ಮಾಡಿಕೊಳ್ಳಬಹುದು. ಇದರ ಪ್ರಮಾಣದಲ್ಲಿ ಹೆಚ್ಚಳವಾದಾಗ ಆಗ ಈ 2ರೂ. ಏರಿಕೆಯ ಇಂಟರ್‌ಚೇಂಜ್ ಶುಲ್ಕವು (Interchange Cost) ಗ್ರಾಹಕರ ಮೇಲೆ ಪರಿಣಾಮ ಬೀರುತ್ತದೆ.
ಇತ್ತೀಚಿನ ದಿನಗಳಲ್ಲಿ ಎಟಿಎಂ ಬಳಕೆ ಸ್ಥಿರವಾಗಿ ಕುಸಿತ ಕಂಡಿದೆ. ಆರ್‌ಬಿಐ ಅಂಕಿಅಂಶಗಳ ಪ್ರಕಾರ, 2023ರ ಜನವರಿಯಲ್ಲಿ 57 ಕೋಟಿ ರೂ.ಗೂ ಹೆಚ್ಚು ವಹಿವಾಟು ನಡೆದಿತ್ತು. ಇನ್ನೂ 2024ರ ಜನವರಿಯಲ್ಲಿ 52.72 ಕೋಟಿ ರೂ.ಗೆ ಇಳಿಕೆ ಕಂಡುಬಂದಿತ್ತು. ಈ ವರ್ಷ ಜನವರಿಯಲ್ಲಿ ಇದು 48.83 ಕೋಟಿ ರೂ.ಗೆ ಇಳಿಕೆಯಾಗಿದೆ.ಇದನ್ನೂ ಓದಿ:ಲಾಂಗ್ ಹಿಡಿದು ರೀಲ್ಸ್ ಮಾಡಿದ್ದ ಪ್ರಕರಣ- ರಜತ್, ವಿನಯ್ ಗೌಡ ಜೈಲಿನಿಂದ ರಿಲೀಸ್