ಮುಂಬೈ: ವ್ಯಕ್ತಿಯೊಬ್ಬ ಎಟಿಎಂನಿಂದ 500 ರೂ. ಹಣ ಡ್ರಾ ಮಾಡಲು ಹೋದಾಗ 5 ಪಟ್ಟು ಹೆಚ್ಚಿನ ಕ್ಯಾಶ್ ಬಂದಿರುವ ಘಟನೆ ಮಹಾರಾಷ್ಟ್ರದ ನಾಗ್ಪುರದಲ್ಲಿ ನಡೆದಿದೆ.
ಹೌದು, ನಾಗ್ಪುರದ ಖಪರ್ಖೇಡಾ ಪಟ್ಟಣದ ಖಾಸಗಿ ಬ್ಯಾಂಕ್‌ನ ಎಟಿಎಂನಲ್ಲಿ ವ್ಯಕ್ತಿಯೊಬ್ಬರು 500 ರೂ. ಡ್ರಾ ಮಾಡಲು ಹೋದಾಗ 2,500 ರೂ. ಹಣ ಬಂದಿದೆ. 500 ರೂ.ಯ 1 ನೋಟು ಬರಬೇಕಿದ್ದಲ್ಲಿ 500 ರೂ.ಯ ಒಟ್ಟು 5 ನೋಟುಗಳು ಸಿಕ್ಕಿವೆ. ಅವರು ಇದೇ ಪ್ರಕ್ರಿಯೆಯನ್ನು ಮತ್ತೆ ಪುನರಾವರ್ತಿಸಿದಾಗಲೂ ಮತ್ತೆ 5 ರೂ.ಯ 5 ನೋಟುಗಳು ಬಂದಿದೆ. ಇದನ್ನೂ ಓದಿ: ಸದನದಲ್ಲೇ ಅಶಿಸ್ತಿನ ವರ್ತನೆ ತೋರಿದ್ದ 7 ಬಿಜೆಪಿ ಶಾಸಕರ ಅಮಾನತು ವಾಪಸ್
Advertisement
Advertisement
ಈ ಆಶ್ಚರ್ಯಕರ ವಿಚಾರ ಸ್ಥಳೀಯರಿಗೆ ತಿಳಿಯುತ್ತಿದ್ದಂತೆ ಹೆಚ್ಚಿನ ದುಡ್ಡನ್ನು ಪಡೆಯಲು ಜನರು ಎಟಿಎಂ ಮುಂದೆ ಮುಗಿ ಬಿದ್ದಿದ್ದಾರೆ. ತಕ್ಷಣವೇ ಬ್ಯಾಂಕ್ ಗ್ರಾಹಕರಲ್ಲಿ ಒಬ್ಬರು ಸ್ಥಳೀಯ ಪೊಲೀಸರಿಗೆ ಈ ಬಗ್ಗೆ ತಿಳಿಸಿದ್ದಾರೆ. ತಕ್ಷಣವೇ ಸ್ಥಳಕ್ಕೆ ಧಾವಿಸಿದ ಪೊಲೀಸರು ಎಟಿಎಂ ಅನ್ನು ಮುಚ್ಚಿದ್ದಾರೆ. ಇದನ್ನೂ ಓದಿ: ಉತ್ತರ ಪ್ರದೇಶ ಬುಲ್ಡೋಜರ್ ಕಾರ್ಯಾಚರಣೆಗೆ ತಡೆ ನೀಡಲು ಸುಪ್ರೀಂ ನಕಾರ
Advertisement
ಹೀಗ್ಯಾಕಾಯ್ತು?
ತಾಂತ್ರಿಕ ದೋಷದಿಂದ ಎಟಿಎಂ ಹೆಚ್ಚುವರಿ ಹಣ ನೀಡುತ್ತಿದೆ ಎಂಬುದು ಮೇಲ್ನೋಟಕ್ಕೆ ತಿಳಿದು ಬಂದು, ಪೊಲೀಸರು ಈ ಬಗ್ಗೆ ಬ್ಯಾಂಕ್ ಅಧಿಕಾರಿಗಳಿಗೆ ಮಾಹಿತಿ ನೀಡಿದರು. ಬಳಿಕ ಪರಿಶೀಲನೆಯಲ್ಲಿ ತಿಳಿದು ಬಂದಿದ್ದು, 100 ರೂ. ಮುಖಬೆಲೆಯ ನೋಟನ್ನು ಇಡಬೇಕಿದ್ದ ಟ್ರೇನಲ್ಲಿ 500 ರೂ. ಮುಖಬೆಲೆಯ ನೋಟುಗಳನ್ನು ತಪ್ಪಾಗಿ ಇಡಲಾಗಿತ್ತು. ಈ ಕಾರಣಕ್ಕೆ ಎಟಿಎಂ ಹೆಚ್ಚುವರಿ ನೋಟುಗಳನ್ನು ನೀಡುತ್ತಿತ್ತು.