LatestMain PostNational

ಎಟಿಎಂನಿಂದ ಹಣ ವಿತ್‌ಡ್ರಾ ಇನ್ನಷ್ಟು ದುಬಾರಿ – ಗ್ರಾಹಕರ ಮೇಲೆ ಹೊರೆಹೊರಿಸಲು ಮುಂದಾದ ಬ್ಯಾಂಕ್‍ಗಳು

ನವದೆಹಲಿ: ಎಟಿಎಂ ಕಾರ್ಡ್ ಬಳಕೆದಾರರಿಗೆ ಬ್ಯಾಂಕ್‍ಗಳು ಬಿಗ್ ಶಾಕ್ ನೀಡಿವೆ. ಎಟಿಎಂ ವಿತ್‌ಡ್ರಾ ಮೇಲೆ ಹೆಚ್ಚುವರಿ ಶುಲ್ಕ ವಸೂಲಿ ಮಾಡಲು ಬ್ಯಾಂಕ್‍ಗಳು ಮುಂದಾಗಿವೆ.

ಆಗಸ್ಟ್ 1 ರಿಂದ ಎಟಿಎಂ ಕೇಂದ್ರಗಳಲ್ಲಿ ಬ್ಯಾಂಕ್‍ಗಳು ನೀಡಿದ ಐದು ಉಚಿತ ಟ್ರಾನ್ಸಾಕ್ಷನ್‍ಗಿಂತ ಕಡಿಮೆ ಬಾರಿ ಹಣ ಡ್ರಾ ಮಾಡಿಕೊಂಡರೂ ಗ್ರಾಹಕರು ಹೆಚ್ಚುವರಿ ಶುಲ್ಕ ಪಾವತಿ ಮಾಡಬೇಕಾಗುತ್ತದೆ. ಐದು ಟ್ರಾನ್ಸಾಕ್ಷನ್‍ಗಳ ಬಳಿಕ ಪ್ರತಿ ವಿತ್‌ಡ್ರಾಗೆ 17 ರೂಪಾಯಿ, ನಾನ್ ಫೈನಾನ್ಶಿಯಲ್ ಟ್ರಾನ್ಸಾಕ್ಷನ್‍ಗಳ ಮೇಲೆ 6 ರೂಪಾಯಿ ಶುಲ್ಕವನ್ನು ಬ್ಯಾಂಕ್‍ಗಳು ವಸೂಲಿ ಮಾಡಲಿವೆ. ಎಟಿಎಂ ಸ್ಥಾಪನೆ, ನಿರ್ವಹಣಾ ವೆಚ್ಚ ಹೆಚ್ಚಾಗಿದೆ. ಹೀಗಾಗಿ ಇದರ ಭಾರವನ್ನು ಹೆಚ್ಚುವರಿ ಶುಲ್ಕ ವಿಧಿಸುವ ಮೂಲಕ ಗ್ರಾಹಕರ ಮೇಲೆ ಹಾಕಲು ಬ್ಯಾಂಕ್‍ಗಳು ಮುಂದಾಗಿವೆ. ಇದನ್ನೂ ಓದಿ: ಸಿದ್ದರಾಮಯ್ಯ ಎದುರು ಯಡಿಯೂರಪ್ಪ ಮಾಸ್ ಇಮೇಜ್ ಅಸ್ತ್ರ – ಬಿಜೆಪಿ ಸಂಸದೀಯ ಮಂಡಳಿಗೆ ಬಿಎಸ್‍ವೈ ಆಯ್ಕೆ ಹಿಂದಿನ ಪ್ಲಾನ್ ಏನು?

ಕಳೆದ ವರ್ಷ ಜೂನ್‍ನಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ ಹೊರಡಿಸಿದ ಅಧಿಸೂಚನೆಯ ಪ್ರಕಾರ, ಮಾಸಿಕ ಉಚಿತ ವಹಿವಾಟು ಮಿತಿಗಿಂತ ಹೆಚ್ಚು ವಿತ್‌ಡ್ರಾ ಮಾಡಿದರೆ ಎಟಿಎಂನಲ್ಲಿ ಪ್ರತಿ ವಹಿವಾಟಿಗೆ 21 ರೂಪಾಯಿ ಶುಲ್ಕ ವಿಧಿಸಲು ಬ್ಯಾಂಕ್‍ಗಳಿಗೆ ಅನುಮತಿಸಲಾಗಿದೆ, ಇದು 2022ರ ಜನವರಿ 1 ರಿಂದ ಜಾರಿಗೆ ಬಂದಿತ್ತು. ಈ ಮೊದಲು, ಅಂತಹ ಪ್ರತಿಯೊಂದು ವಹಿವಾಟಿಗೆ 20 ರೂಪಾಯಿ ಶುಲ್ಕ ವಿಧಿಸಲು ಬ್ಯಾಂಕ್‍ಗಳಿಗೆ ಅವಕಾಶವಿತ್ತು. ಗ್ರಾಹಕರು ತಮ್ಮ ಬ್ಯಾಂಕ್ ಎಟಿಎಂಗಳಲ್ಲಿ ಪ್ರತಿ ತಿಂಗಳು ಐದು ಉಚಿತ ವಹಿವಾಟುಗಳನ್ನು ಬಳಸಬಹುದಾಗಿದೆ. ಇದನ್ನು ಹೊರತುಪಡಿಸಿ ಇತರ ಬ್ಯಾಂಕ್ ಎಟಿಎಂಗಳಿಗೆ ಮೂರು ಉಚಿತ ವಹಿವಾಟಿನ ಮಿತಿ ನೀಡಲಾಗಿದೆ. ಮೆಟ್ರೋ ಅಲ್ಲದ ಕೇಂದ್ರಗಳಲ್ಲಿನ ಗ್ರಾಹಕರು ಇತರ ಬ್ಯಾಂಕ್ ಎಟಿಎಂಗಳಲ್ಲಿ ಐದು ಉಚಿತ ವಹಿವಾಟುಗಳನ್ನು ಪಡೆಯಬಹುದು. ಇದನ್ನೂ ಓದಿ: ಶಾಲಾ-ಕಾಲೇಜುಗಳಲ್ಲಿ ರಾಷ್ಟ್ರಗೀತೆ ನಿತ್ಯ ಹಾಡಿಸೋದು ಕಡ್ಡಾಯ

Live Tv

Leave a Reply

Your email address will not be published.

Back to top button