-ಕೆಲವೇ ಕ್ಷಣಗಳಲ್ಲಿ 8.71 ಲಕ್ಷ ಹಣ ಡ್ರಾ
ಪಾಟ್ನಾ: ಎಟಿಎಂನಲ್ಲಿ ತಾಂತ್ರಿಕ ತೊಂದರೆಯಿಂದಾಗಿ ಬಿಹಾರದ ಹನಾಬಾದ್‍ನಲ್ಲಿ 100 ರೂ. ನೋಟಿನ ಬದಲಾಗಿ 2000 ರೂ. ನೋಟು ಬಂದಿದೆ.
ಶುಕ್ರವಾರ ಜಹನಾಬಾದ್ ನಗರದ ಇಂಡಿಯನ್ ಬ್ಯಾಂಕ್‍ನ ಎಟಿಎಂನಲ್ಲಿ ನೂರು ರೂಪಾಯಿ ನೋಟಿನ ಬದಲಾಗಿ 2 ಸಾವಿರ ರೂ. ಮುಖಬೆಲೆಯ ನೋಟುಗಳು ಬಂದಿವೆ. ಮೊದಲಿಗೆ ಸುದ್ದಿ ಹರಡುತ್ತಿದ್ದಂತೆ ಒಂದು ಕ್ಷಣ ಜನರು ನಂಬಿರಲಿಲ್ಲ. ಎಟಿಎಂ ಬಳಿ ಬಂದಾಗ 100 ರೂ. ಪಡೆಯಲು ಸೂಚಿಸಿದಾಗ 2 ಸಾವಿರ ರೂ. ನೋಟ್ ಬಂದಿದೆ.
Advertisement
Advertisement
ಸುದ್ದಿ ತಿಳಿಯುತ್ತಿದ್ದಂತೆ ಜನರು ಎಟಿಎಂ ಮುಂದೆ ಹಣ ಪಡೆಯುವಲ್ಲಿ ಸರದಿ ಸಾಲಿನಲ್ಲಿ ನಿಂತಿದ್ದಾರೆ. ಎಟಿಎಂನಲ್ಲಿದ್ದ 436 ನೋಟುಗಳು ಖಾಲಿ ಆಗುವರೆಗೂ ಜನರು ಸರತಿ ಸಾಲಿನಲ್ಲಿ ನಿಂತಿದ್ದರು ಎಂದು ಸ್ಥಳೀಯ ಪತ್ರಿಕೆಯೊಂದು ವರದಿ ಮಾಡಿದೆ.
Advertisement
ಎಟಿಎಂನಲ್ಲಿ ಹಣ ಹಾಕುವ ಅಧಿಕಾರಿಯ ತಪ್ಪಿನಿಂದಾಗಿ ಈ ಘಟನೆ ನಡೆದಿದೆ. ಎಟಿಎಂನಲ್ಲಿ ಹಣ ಹಾಕುವಾಗ ಮೂರು ಕೆಸೆಟ್ (ಬಾಕ್ಸ್) ಗಳು ಇರುತ್ತವೆ. 100 ರೂ., 500 ರೂ. ಮತ್ತು 2 ಸಾವಿರ ರೂ. ಮುಖಬೆಲೆಯ ನೋಟುಗಳನ್ನಿಡುವ ಮೂರು ಕೆಸೆಟ್ ಇರುತ್ತವೆ. ಯಂತ್ರದ ಕೆಸೆಟ್‍ನಲ್ಲಿ ಹಣ ಇಡುವಾಗ ಅಧಿಕಾರಿ 100 ರೂ. ಸ್ಥಾನದಲ್ಲಿ 2 ಸಾವಿರ ರೂ. ನೋಟುಗಳನ್ನು ಇಟ್ಟಿದ್ದಾರೆ. ಬರೋಬ್ಬರಿ 8,72,000 ರೂ. ಹಣವನ್ನು ಜನರು ಡ್ರಾ ಮಾಡಿದ್ದಾರೆ. ಎಲ್ಲ ಗ್ರಾಹಕರ ಮಾಹಿತಿ ನಮ್ಮ ಬಳಿ ಲಭ್ಯವಿದ್ದು, ಎಲ್ಲರಿಂದಲೂ ಹಣ ಹಿಂಪಡೆಯಲಾಗುವುದು ಎಂದು ಇಂಡಿಯನ್ ಬ್ಯಾಂಕ್‍ನ ಮ್ಯಾನೇಜರ್ ಅಭಿಷೇಕ್ ಕುಮಾರ್ ತಿಳಿಸಿದ್ದಾರೆ.