ಇರಕ್/ಇರಾನ್: ಇರಾನ್-ಇರಾಕ್ ಗಡಿಭಾಗಗಳಲ್ಲಿ 7.3 ರಿಕ್ಟರ್ ಮಾಪಕದಲ್ಲಿ ಭೂಕಂಪ ಸಂಭವಿಸಿದ್ದು, 140 ಕ್ಕೂ ಹೆಚ್ಚು ಮಂದಿ ಬಲಿಯಾಗಿದ್ದಾರೆ ಹಾಗೂ 860 ಹೆಚ್ಚು ಜನರಿಗೆ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.
ಭೂಕಂಪನದ ಅನುಭವವಾಗುತ್ತಿದ್ದಂತೆಯೇ ಉತ್ತರ ಇರಾನ್ ನ ಸುಲಯೈಮನಿಯಾದ ಕಟ್ಟಡದಲ್ಲಿ ನೆಲೆಸಿದ್ದ ಜನರು ಆತಂಕಗೊಳಗಾಗಿ ಅಲ್ಲಿಂದ ಓಡಿ ಹೋಗಿದ್ದಾರೆ. ದರ್ಬಾದಿಖಾನ್ ನಗರದಲ್ಲಿ ಗಾಜಿನ ಗೋಡೆ ಹಾಗೂ ಕಾಂಕ್ರೀಟ್ ಸ್ಟ್ರಕ್ಷರ್ ಗಳು ಕುಸಿದು ಬಿದ್ದಿವೆ.
Advertisement
ಭೂಕಂಪನ ಸಂಭವಿಸುವಾಗ 61 ಜನರು ಸಾವನ್ನಪ್ಪಿದ್ದು, 300 ಜನರಿಗೆ ಗಾಯವಾಗಿತ್ತು. ಇರಾಕ್ ನ ಬಾರ್ಡರ್ ನಲ್ಲಿ 6 ಜನ ಸಾವನ್ನಪ್ಪಿದ್ದಾರೆ ಎಂದು ಅಲ್ಲಿನ ಮಾಧ್ಯಮವೊಂದು ವರದಿ ಮಾಡಿದೆ. ಈ ಸಮಯದಲ್ಲಿ ತುರ್ತು ಪರಿಹಾರ ಶಿಬಿರಗಳನ್ನು ಆಯೋಜಿಸಿದ್ದೇವೆ ಎಂದು ಇರಾನ್ ನ ಉಪ ರಾಜ್ಯಪಾಲ ಮೋಜ್ತಬಾ ನಿಕೇರ್‍ದಾರ್ ಹೇಳಿದ್ದಾರೆ.
Advertisement
Advertisement
ಸೌತ್‍ವೆಸ್ಟ್ ನ ಹಲಬ್ಜಾದಲ್ಲಿ ರಾತ್ರಿ ಸುಮಾರು 9.20 ಗಂಟೆಗೆ ಎಲ್ಲ ಜನರು ಮನೆಯಲ್ಲಿದ್ದಾಗ 30 ಕಿ.ಮೀನಷ್ಟು ಭೂಕಂಪಿಸಿದೆ. ರಸ್ತೆ ಸಂಪರ್ಕ ಕಡಿತಗೊಂಡಿದ್ದರಿಂದ ನಮ್ಮ ರಕ್ಷಣಾ ತಂಡವನ್ನು ಗ್ರಾಮಗಳಿಗೆ ಕಳಿಸಲು ಸಾಧ್ಯವಾಗುತ್ತಿಲ್ಲ ಎಂದು ತುರ್ತು ಸೇವೆಗಳ ಮುಖ್ಯಸ್ಥ ಪಿರ್ ಹೊಸ್ಸಿನ್ ಕೂಲಿವಂಡ್ ತಿಳಿಸಿದ್ದಾರೆ.
Advertisement
ನಾರ್ತ್‍ವೆಸ್ಟ್ ನಲ್ಲಿ ಕೆರ್ಮನ್ಹಾಹ್ ಮತ್ತು ಅಜ್ಗೆಲೆಹ್ನಲ್ಲಿನ ಕಸ್-ಇ-ಶಿರಿನ್ ನಲ್ಲಿ ಸಾಕಷ್ಟು ಹಾನಿಯಾಗಿದ್ದು, 40 ಕಿ.ಮೀನಷ್ಟು ಭೂಕಂಪನ ಆಗಿದೆ ಎಂದು ಐಆರ್‍ಎನ್‍ಎ ತಿಳಿಸಿದೆ.
ಇರಾಕ್ ನ ಭೂಕಂಪನದಿಂದ ಇರಾನ್ ನ 8 ಗ್ರಾಮಗಳಿಗೆ ಹಾನಿಯಾಗಿದೆ. ರಕ್ಷಣಾ ಕಾರ್ಯಾಚರಣೆ ಕೂಡ ನಡೀತಿದೆ. ಅಲ್ಲದೇ ಪಾಕಿಸ್ತಾನ, ಲೆಬೆನಾನ್, ಕುವೈಟ್, ಟರ್ಕಿ ದೇಶದಲ್ಲೂ ಕಂಪನದ ಅನುಭವವಾಗಿದೆ.
Massive #Earthquake of magnitude 7.2 hits #MiddleEast and #Iraq , took about 20 seconds.
A video not away from home in #Duhok pic.twitter.com/ZhUgduXcTY
— Zhigger Abozaid (@JegirKH) November 12, 2017
https://twitter.com/CiaranOhReally/status/929786178341146624
https://twitter.com/thestevennabil/status/929780876258394112
A house damaged with the recent #earthquake at #Darbandixan , #Kurdistan #Iraq #Helebce #Erbil #Sulaimanyah pic.twitter.com/PA5ip9iTUh
— Rawand M Azeez (@rawandazeez) November 12, 2017
https://twitter.com/sassysassyred/status/929833730558095360