ನವದೆಹಲಿ: ಐಎಎಸ್ ಅಧಿಕಾರಿಯಬ್ಬರು ತಮ್ಮ ನಾಯಿಗೆ ವಾಕಿಂಗ್ ಕರೆದುಕೊಂಡು ಹೋಗಲು ಸ್ಟೇಡಿಯಂನಲ್ಲಿದ್ದ ಕ್ರೀಡಾ ಪಟುಗಳನ್ನು ಸಮಯಕ್ಕಿಂತಲೂ ಮುಂಚಿತವಾಗಿ ಹೊರಗೆ ಕಳುಹಿಸಿರುವ ಘಟನೆ ವರದಿಯಾಗಿದೆ.
ದೆಹಲಿಯಲ್ಲಿರುವ ತ್ಯಾಗರಾಜ್ ಸ್ಟೇಡಿಯಂ ಸಂಜೆ 8 ಗಂಟೆ ವರೆಗೂ ತೆರೆದಿಡಲಾಗುತ್ತಿತ್ತು. ಆದರೆ ಇತ್ತೀಚೆಗೆ ದೆಹಲಿ ಕಂದಾಯ ವಿಭಾಗದ ಮುಖ್ಯ ಕಾರ್ಯದರ್ಶಿ ಸಂಜೀವ್ ಖಿರ್ವಾರ್ ಅವರ ನಾಯಿಯನ್ನು ವಾಕಿಂಗ್ ಕರೆದುಕೊಂಡು ಹೋಗಲು ಅಭ್ಯಾಸ ನಡೆಸುತ್ತಿದ್ದ ಕ್ರೀಡಾಪಟುಗಳನ್ನು ಅವಧಿಗಿಂತಲೂ ಮುಂಚಿತವಾಗಿ ಹೊರಗೆ ಕಳುಹಿಸಲಾಗಿದೆ ಎಂದು ವರದಿಯಾಗಿದೆ. ಇದನ್ನೂ ಓದಿ: ನಾಯಿಯಾಗಲು ಲಕ್ಷಗಟ್ಟಲ್ಲೇ ಖರ್ಚು ಮಾಡಿದ
Advertisement
Advertisement
ಈ ಬಗ್ಗೆ ಕ್ರೀಡಾ ತರಬೇತುದಾರರೊಬ್ಬರು, ನಾವು ರಾತ್ರಿ 8 ರಿಂದ 8:30ರ ವರೆಗೂ ತರಬೇತಿ ನಡೆಸುತ್ತಿದ್ದೆವು. ಆದರೆ ಈಗ ಅಧಿಕಾರಿಯ ನಾಯಿಗೆ ವಾಕಿಂಗ್ ಕರೆದುಕೊಂಡು ಹೋಗಲು ನಮ್ಮನ್ನು ಸಂಜೆ 7 ಗಂಟೆಗೆ ಮೈದಾನದಿಂದ ಹೊರಡಲು ಹೇಳಲಾಗುತ್ತಿದೆ ಎಂದು ಆರೋಪಿಸಿದ್ದಾರೆ. ಇದನ್ನೂ ಓದಿ: 1 ರೂಪಾಯಿ ಸಂಭಾವನೆ ಪಡೆದು, ಚಿತ್ರರಂಗಕ್ಕೆ ಕಾಲಿಟ್ಟ ಮಾಜಿ ಐಪಿಎಸ್ ಅಧಿಕಾರಿ
Advertisement
ಈ ಬಗ್ಗೆ ಪ್ರತಿಕ್ರಿಯಿಸಿದ ಖಿರ್ವಾರ್ ನನ್ನ ಮೇಲೆ ಹೊರಿಸಿರುವ ಆರೋಪ ಶುದ್ಧ ಸುಳ್ಳು, ನಾನು ತೀರಾ ಅಪರೂಪಕ್ಕೆ ನಾಯಿಯನ್ನು ಸ್ಟೇಡಿಯಂಗೆ ಕರೆದುಕೊಂಡು ಹೋಗಿದ್ದೆ. ಆದರೆ ಇದರಿಂದ ಯಾವುದೇ ಕ್ರೀಡಾಪಟುಗಳಿಗೂ ಅಡ್ಡಿ ಪಡಿಸಿರಲಿಲ್ಲ ಎಂದಿದ್ದಾರೆ.
Advertisement
ಈ ಘಟನೆ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಗಮನಕ್ಕೆ ಬಂದಿದ್ದು, ನಗರದಲ್ಲಿನ ಎಲ್ಲಾ ಸರ್ಕಾರಿ ಕ್ರೀಡಾಂಗಣಗಳನ್ನು ರಾತ್ರಿ 10 ಗಂಟೆಯವರೆಗೆ ಕ್ರೀಡಾಪಟುಗಳಿಗೆ ಅಭ್ಯಾಸಕ್ಕೆ ತೆರೆದಿಡಲು ಆದೇಶ ನೀಡಿದ್ದಾರೆ.