InternationalLatestMain Post

ಲಕ್ಷ ಲಕ್ಷ ಖರ್ಚು ಮಾಡಿ ನಾಯಿಯಾದ

ಟೋಕಿಯೋ: ವ್ಯಕ್ತಿಯೊಬ್ಬ ಪ್ರಾಣಿಯಂತೆ ಕಾಣಬೇಕು ಎಂಬ ಹುಚ್ಚು ಕನಸನ್ನು ನನಸಾಗಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಇದಕ್ಕಾಗಿ ಅವರು 20 ಲಕ್ಷ ರೂ. ಖರ್ಚು ಮಾಡಿ ನಾಯಿಯ ರೂಪ ತಾಳಿದ್ದಾರೆ.

ಟ್ವಿಟ್ಟರ್‌ನಲ್ಲಿ ಪೋಸ್ಟ್ ಮಾಡಿದ ಅವರ ನಾಯಿಯ ವೇಷಧಾರಿ ಚಿತ್ರಗಳು ಸಾಮಾಜಿಕ ತಾಣದಲ್ಲಿ ಸಖತ್ ವೈರಲ್ ಆಗುತ್ತಿದ್ದು, ಅವರ ನೆಚ್ಚಿನ ಪ್ರಾಣಿಯಾದ ನಾಯಿಯಂತೆಯೇ ಸಂಪೂರ್ಣವಾಗಿ ರೂಪಾಂತರಗೊಂಡಿದ್ದು, ನೋಡುಗರ ಹುಬ್ಬೆರಿಸುವಂತೆ ಮಾಡಿದ್ದಾರೆ. ಇದನ್ನೂ ಓದಿ: 1 ರೂಪಾಯಿ ಸಂಭಾವನೆ ಪಡೆದು, ಚಿತ್ರರಂಗಕ್ಕೆ ಕಾಲಿಟ್ಟ ಮಾಜಿ ಐಪಿಎಸ್ ಅಧಿಕಾರಿ

ಈ ಕುರಿತ ವೀಡಿಯೋವೊಂದನ್ನು ಅವರು ತಮ್ಮ ಯೂಟ್ಯೂಬ್ ಖಾತೆಯಲ್ಲಿ ಪೋಸ್ಟ್ ಮಾಡಿಕೊಂಡಿದ್ದಾರೆ. ವೀಡಿಯೋದಲ್ಲಿ ಅವರು ನಾಯಿ ಹಾಗೇ ವರ್ತಿಸುವುದನ್ನು ಕಾಣಬಹುದಾಗಿದೆ. ನೀವು ಎಂದಾದರೂ ಪ್ರಾಣಿಯಾಗಲೂ ಬಯಿಸಿದ್ದೀರಾ? ನಾನು ಹೊಂದಿದ್ದೇನೆ. ನಾನು ನನ್ನ ಕನಸನ್ನು ಈ ರೀತಿ ನನಸಾಗಿಸಿದ್ದೇನೆ ಎಂದು ವೀಡಿಯೋಗೆ ಅವರು ಶೀರ್ಷಿಕೆ ಬರೆದುಕೊಂಡಿದ್ದಾರೆ. ಇದನ್ನೂ ತಯಾರಿಸಲು 40 ದಿನಗಳನ್ನು ತೆಗೆದುಕೊಳ್ಳಲಾಗಿದೆ. ಇದನ್ನೂ ಓದಿ: ತೆರೆಯ ಮೇಲೂ ನಿರ್ದೇಶಕನಾಗಿ ನಟಿಸಿದ ಯೋಗರಾಜ್ ಭಟ್

Leave a Reply

Your email address will not be published.

Back to top button