ಮಾಲೀಕನ ಈ ಸೂಪರ್ ಐಡಿಯಾದಿಂದ ವರ್ಲ್ಡ್ ಫೇಮಸ್ ಆಯ್ತು ಕೆಫೆ

Public TV
1 Min Read
Rat Cafe 1

ಸ್ಯಾನ್ ಫ್ರಾನ್ಸಿಸ್ಕೋ: ಹೋಟೆಲ್ ಗಳು ಬರೀ ತಿಂಡಿ ತಿನಿಸುಗಳನ್ನು ಮಾಡಿದ್ರೆ ಸಾಲದು, ಜನರನ್ನು ಹೇಗೆ ಆಕರ್ಷಿಸಿಕೊಳ್ಳಬೇಕು. ಜನರನ್ನು ಆಕರ್ಷಿಸಲೆಂದೇ ಈಗ ಅಮೆರಿಕದ ಕೆಫೆಯೊಂದು ಸಖತ್ ಪ್ಲಾನ್ ಮಾಡಿದ್ದು ಯಶಸ್ವಿಯಾಗಿದೆ.

Rat Cafe 4ಹೌದು, ಸ್ಯಾನ್ ಫ್ರಾನ್ಸಿಸ್ಕೋದಲ್ಲಿ ಗಾರ್ತ್ ಹೊನಾರ್ಟ್ ಎಂಬವರು ಇಲಿಗಳ ಹೋಟೆಲ್ ನಿರ್ಮಿಸಿದ್ದಾರೆ. ಇಲಿಗಳ ಹೋಟೆಲ್ ಎನ್ನುವ ಕಾರಣಕ್ಕೆ ಇಲಿಮಾಂಸವನ್ನು ನೀಡುತ್ತಾರೆ ಎಂದು ನೀವು ಊಹಿಸಿದರೆ ತಪ್ಪಾದಿತು. ಕೆಫೆಯಲ್ಲಿ ಇಲಿಗಳು ಗ್ರಾಹಕರನ್ನು ಬರಮಾಡಿಕೊಳ್ಳುತ್ತವೆ. ಹಾಗೆ ಇಲ್ಲಿ ಗ್ರಾಹಕರೊಂದಿಗೆ ಪ್ರೀತಿಯಿಂದ ಬೆರೆಯುತ್ತವೆ ಎಂದು ಗಾರ್ತ್ ಹೊನಾರ್ಟ್ ಹೇಳುತ್ತಾರೆ.

Rat Cafe 2

ಈ ಇಲಿಗಳಿಂದ ಯಾವುದೇ ಅಪಾಯವಿಲ್ಲ. ಇವುಗಳಿಂದ ಕಾಯಿಲೆ ಕೂಡಾ ಹರಡದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುಲಾಗಿದೆ ಎಂದು ತಿಳಿಸಿದ್ದಾರೆ.

ಇದು ಮೊನ್ನೆಯಷ್ಟೇ ಶುರುವಾದ ರ್ಯಾಟ್ ಕೆಫೆ ಈಗ ವರ್ಲ್ಡ್ ಫೇಮಸ್ ಯಾಗಿದೆ. ಇದು ಏಷ್ಯಾದ ಕೆಲವು ಪ್ರಾಂತ್ಯಗಳಲ್ಲಿ ಮತ್ತು ಅಮೆರಿಕ, ಯೂರೋಪಿನಲ್ಲಿ ಈ Rat Cafeನ್ನು ಪ್ರಾರಂಭಮಾಡಲಾಗಿದೆ. ಈ ಇಲಿಗಳ ಜೊತೆ ಬೆಕ್ಕುಗಳು ಕೂಡಾ ಇರುತ್ತವೆ ಎನ್ನುವುದು ವಿಶೇಷವಾಗಿದೆ.

Rat Cafe 3

https://twitter.com/TheSFDungeon/status/880893747520786432?ref_src=twsrc%5Etfw&ref_url=http%3A%2F%2Fwww.ndtv.com%2Foffbeat%2Fat-san-franciscos-rat-cafe-you-dine-as-rodents-run-free-only-for-50-1719691

Share This Article
Leave a Comment

Leave a Reply

Your email address will not be published. Required fields are marked *