ತಡರಾತ್ರಿ ಭೀಕರ ರೈಲು ಅಪಘಾತ- ಇಬ್ಬರ ದುರ್ಮರಣ

Public TV
1 Min Read
TRAIN ACCIDENT

ರಾಂಚಿ: ಜಾರ್ಖಂಡ್‍ನ ಜಮ್ತಾರಾ (Jamtara Train) ಜಿಲ್ಲೆಯಲ್ಲಿ ನಡೆದ ಭೀಕರ ರೈಲು ಅಪಘಾತದಲ್ಲಿ ಇಬ್ಬರು ದಾರುಣವಾಗಿ ಮೃತಪಟ್ಟ ಘಟನೆ ನಡೆದಿದೆ.

TRAIN ACCIDENT 1

ಈ ಕುರಿತು ರೈಲ್ವೆ ಇಲಾಖೆ ಖಚಿತಪಡಿಸಿದೆ. ಸಾವನ್ನಪ್ಪಿದ ಇಬ್ಬರು ಪ್ರಯಾಣಿಕರಲ್ಲ, ಅವರು ಟ್ರ್ಯಾಕ್ ಮೇಲೆ ನಡೆದುಕೊಂಡು ಹೋಗುತ್ತಿದ್ದವರು ಎಂದಿದೆ. ವಿದ್ಯಾಸಾಗರ್ ಕಾಸಿತಾರ್ ನಡುವೆ ಹಾದುಹೋಗುವ ರೈಲು ಸಂಖ್ಯೆ 12254 7 ಗಂಟೆಗೆ ER ನ ಅಸನ್ಸೋಲ್ ವಿಭಾಗದಲ್ಲಿ ನಿಂತಿದೆ ಎಂದು ರೈಲ್ವೆ ಇಲಾಖೆ ಹೇಳಿದೆ. ಇಬ್ಬರು ಹಳಿಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಅಪ್ ಲೈನ್‌ನಲ್ಲಿ ಮೆಮು ರೈಲು ಡಿಕ್ಕಿ ಹೊಡೆದಿದೆ. ಈ ಕುರಿತು ತನಿಖೆ ನಡೆಸಲು ಜೆಎಜಿಯ ತ್ರಿಸದಸ್ಯ ಸಮಿತಿಯನ್ನು ರಚಿಸಲಾಗಿದೆ.

ಘಟನೆ ಸಂಬಂಧ ಜಮ್ತಾರಾದ ಎಸ್‌ಡಿಎಂ ಅನಂತ್‌ಕುಮಾರ್‌ ಮಾತನಾಡಿ, ಕಲಾಜಾರಿಯಾ ರೈಲ್ವೆ ಗೇಟ್‌ ಬಳಿ ಪ್ಯಾಸೆಂಜರ್‌ ರೈಲು ನಿಂತಿತ್ತು. ಕೆಲ ಪ್ರಯಾಣಿಕರು ಇಳಿದು ಹೋಗಿದ್ದು, ಈ ಮಧ್ಯೆ ಅವರು ಸಾಗುತ್ತಿದ್ದ ರೈಲಿಗೆ ಡಿಕ್ಕಿ ಹೊಡೆದು ಕೆಲವರು ಗಾಯಗೊಂಡಿರುವ ಮಾಹಿತಿ ಲಭಿಸಿದೆ. ಕೂಡಲೇ ಶೋಧ ಕಾರ್ಯಾಚರಣೆ ನಡೆಸಿದ್ದು, ಇಲ್ಲಿಯವರೆಗೆ ಎರಡು ಮೃತದೇಹಗಳನ್ನು ಹೊರತೆಗೆಯಲಾಗಿದೆ. ಸಹಾಯವಾಣಿ ಸಂಖ್ಯೆ ನೀಡುವಂತೆ ನಾವು ರೈಲ್ವೆಗೆ ಮನವಿ ಮಾಡಿದ್ದೇವೆ. ಗಾಯಾಳುಗಳಿಗೆ ಚಿಕಿತ್ಸೆಯ ವ್ಯವಸ್ಥೆ ಮಾಡಲಾಗಿದೆ ಎಂದರು.

ಕಾಂಗ್ರೆಸ್ ಶಾಸಕ ಹೇಳಿದ್ದೇನು?: ಈ ಘಟನೆ ಕುರಿತು ಮಾತನಾಡಿದ ಕಾಂಗ್ರೆಸ್ ಶಾಸಕ ಇರ್ಫಾನ್ ಅನ್ಸಾರಿ, ನನ್ನ ವಿಧಾನಸಭಾ ಕ್ಷೇತ್ರ ಜಮ್ತಾರಾ ಬಳಿಯ ಕಾಸಿಯತಾರ್ ಹಾಲ್ಟ್ ಬಳಿ ರೈಲು ಅಪಘಾತದಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ. ಘಟನೆಯಲ್ಲಿ ಅನೇಕರು ನಾಪತ್ತೆಯಾಗಿದ್ದಾರೆ ಎಂಬ ಮಾಹಿತಿ ನನಗೆ ಬಂದಿದೆ. ಇದು ದೊಡ್ಡ ಘಟನೆಯಾಗಿದ್ದು, ನಾನು ಜಮ್ತಾರಾಕ್ಕೆ ಹೊರಡುತ್ತಿದ್ದೇನೆ. ಘಟನೆಯ ಬಗ್ಗೆ ಮಾಹಿತಿ ಸಿಕ್ಕ ತಕ್ಷಣ ಜಿಲ್ಲಾಡಳಿತ ಮತ್ತು ರೈಲ್ವೆ ಆಡಳಿತದೊಂದಿಗೆ ಮಾತನಾಡಿ ಜನರಿಗೆ ಸಹಾಯ ಮಾಡುವಂತೆ ಕೋರಿದ್ದೇನೆ. ಈ ಘಟನೆ ಹೇಗಾಯಿತು ಎಂದು ತನಿಖೆ ನಡೆಸಲು ಸೂಚನೆ ನೀಡಿದ್ದೇನೆ ಎಂದರು.

ಇತ್ತ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಜಾರ್ಖಂಡ್ ರೈಲು ಅಪಘಾತದಲ್ಲಿ ಜೀವಹಾನಿಯ ಬಗ್ಗೆ ದುಃಖ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಘಟನೆಯ ಬಗ್ಗೆ ನಿಷ್ಪಕ್ಷಪಾತ ತನಿಖೆಗೆ ಒತ್ತಾಯಿಸಿದ್ದಾರೆ.

Share This Article