ಅರ್ಬತ್ (ಸುಡಾನ್): ಯುದ್ಧ ಪೀಡಿತ ಸುಡಾನ್‌ನಲ್ಲಿ (Sudan) ಭಾರೀ ಮಳೆಯಿಂದಾಗಿ ಅಣೆಕಟ್ಟು (Dam Burst) ಒಡೆದು ಕನಿಷ್ಠ 60 ಜನರು ಸಾವನ್ನಪ್ಪಿದ್ದು, ಹಲವು ಮಂದಿ ನಾಪತ್ತೆಯಾಗಿದ್ದಾರೆ.
ಧಾರಾಕಾರ ಮಳೆಯಿಂದಾಗಿ ಕೆಂಪು ಸಮುದ್ರದ ಸಮೀಪದಲ್ಲಿದ್ದ ಅರ್ಬತ್ ಅಣೆಕಟ್ಟು (Arbaat Dam) ಕೊಚ್ಚಿಹೋಗಿದೆ. ನೀರು ಸುಮಾರು 20 ಹಳ್ಳಿಗಳಿಗೆ ನುಗ್ಗಿದ್ದು 50 ಸಾವಿರ ಮನೆಗಳು ಕೊಚ್ಚಿ ಹೋಗಿದೆ ಎಂದು ವರದಿಯಾಗಿದೆ.
Advertisement
United Nations:
The collapse of the Arbaat Dam in Sudan destroyed 20 villages and damaged the homes of 50,000 people.
pic.twitter.com/Jcw8A7ZC5x
— Breaking news and situation analysis (@kgvh6v) August 26, 2024
Advertisement
ಅರ್ಬತ್ ಅಣೆಕಟ್ಟು 25 ಮಿಲಿಯನ್ ಕ್ಯೂಬಿಕ್ ಮೀಟರ್ ಸಾಮರ್ಥ್ಯವನ್ನು ಹೊಂದಿತ್ತು. ಕರಾವಳಿ ನಗರವಾದ ಪೋರ್ಟ್ ಸುಡಾನ್‌ನ ಕುಡಿಯುವ ನೀರಿನ ಮುಖ್ಯ ಮೂಲವಾಗಿತ್ತು. ಕೊಚ್ಚಿಕೊಂಡು ಹೋದ ಪ್ರದೇಶವನ್ನು ಗುರುತಿಸಲು ಸಾಧ್ಯವಾಗುತ್ತಿಲ್ಲ. ನೆರೆಗೆ ವಿದ್ಯುತ್ ಕಂಬ ಮತ್ತು ನೀರಿನ ಪೈಪ್‌ಗಳು ನಾಶವಾಗಿವೆ. ಚಿನ್ನದ ಗಣಿಯಲ್ಲಿ ಕೆಲಸ ಮಾಡುತ್ತಿದ್ದ 150 ರಿಂದ 200 ಮಂದಿ ಕಾಣೆಯಾಗಿದ್ದಾರೆ. ಇದನ್ನೂ ಓದಿ: ಪರಪ್ಪನ ಜೈಲಿಂದ ಹಿಂಡಲಗಾ ಜೈಲಿಗೆ ‘ಜಗ್ಗುದಾದ’ ಶಿಫ್ಟ್ ಸಾಧ್ಯತೆ – ಬೆಳಗಾವಿ ಜೈಲಿನ ವಿಶೇಷತೆ ಏನು?
Advertisement
ದುರಂತ ಸಂಭವಿಸುವ ಮೊದಲೇ ಅಣೆಕಟ್ಟು ಕಳಪೆ ಸ್ಥಿತಿಯಲ್ಲಿತ್ತು. ಅಣೆಕಟ್ಟುಗಳು, ರಸ್ತೆಗಳು ಮತ್ತು ಸೇತುವೆಗಳು ಸೇರಿದಂತೆ ಸುಡಾನ್‌ನಲ್ಲಿ ಮೂಲಸೌಕರ್ಯವನ್ನು ಸಂಪೂರ್ಣವಾಗಿ ನಿರ್ಲಕ್ಷಿಸಲಾಗಿದೆ.
Advertisement
Heavy rains and torrential floods in Sudan’s Red Sea State led to the collapse of the Arbaat Dam, located 40 km north of Port Sudan, which is the city’s main source of drinking water. pic.twitter.com/VPnSWj5fKt
— Volcaholic 🌋 (@volcaholic1) August 25, 2024
ಏಪ್ರಿಲ್ 2023 ರಿಂದ ಸೇನೆ ಮತ್ತು ಅರೆಸೇನಾ ಪಡೆಗಳ ನಡುವಣ ಸಂಘರ್ಷದಿಂದ ಸುಡಾನ್ ಈಗಾಗಲೇ ತತ್ತರಿಸಿ ಹೋಗಿದೆ. ಈಗ ಭಾರೀ ಮಳೆಯಿಂದಾಗಿ ಮತ್ತೊಂದು ಸಂಕಷ್ಟಕ್ಕೆ ಸಿಲುಕಿದೆ. ಈ ವರ್ಷ ದೇಶಾದ್ಯಂತ ಪ್ರವಾಹದಲ್ಲಿ 132 ಜನರು ಸಾವನ್ನಪ್ಪಿದ್ದಾರೆ, 118,000 ಜನರು ಸ್ಥಳಾಂತರಗೊಂಡಿದ್ದಾರೆ ಎಂದು ಸರ್ಕಾರ ಈ ಮೊದಲು ತಿಳಿಸಿತ್ತು.