ಮುಂಬೈ: ಮಹಾರಾಷ್ಟ್ರದ ಜಲಗಾಂವ್‌ನಲ್ಲಿ (Jalgaon) ಬುಧವಾರ ಭೀಕರ ರೈಲು ದುರಂತ ಸಂಭವಿಸಿದ್ದು, ಕರ್ನಾಟಕ ಎಕ್ಸ್‌ಪ್ರೆಸ್ (Karnataka Express) ರೈಲು ಹರಿದು ಕನಿಷ್ಠ 11 ಜನರು ಸಾವನ್ನಪ್ಪಿದ್ದಾರೆ.
ಘಟನೆಯ ಮಾಹಿತಿ ಪಡೆದ ರೈಲ್ವೇ ಅಧಿಕಾರಿಗಳು ಮತ್ತು ಪೊಲೀಸರು ಸ್ಥಳಕ್ಕೆ ದೌಡಾಯಿಸಿದ್ದು ಗಾಯಗೊಂಡವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.
Advertisement
ಘಟನೆ ಹೇಗಾಯ್ತು?
ಮೊದಲು ಪುಷ್ಪಕ್ ಎಕ್ಸ್‌ಪ್ರೆಸ್ (Pushpak Express) ರೈಲಿನಲ್ಲಿ ಬಿಸಿ ಗಾಳಿ ಕಾಣಿಸಿದೆ. ಈ ಬಿಸಿಗಾಳಿಯನ್ನೇ ಪ್ರಯಾಣಿಕರು ಬೆಂಕಿ ಎಂದು ಭಾವಿಸಿ ಚೈನ್ ಎಳೆದು ನಿಲ್ಲಿಸುವ ಪ್ರಯತ್ನ ಮಾಡಿದ್ದಾರೆ. ಈ ಸಂದರ್ಭದಲ್ಲಿ ಅಪಾಯದಿಂದ ಪಾರಾಗಲು ರೈಲಿನಿಂದ ಕೆಳಕ್ಕೆ ಜಿಗಿದು ಮತ್ತೊಂದು ಹಳಿಗೆ ಬಂದಿದ್ದಾರೆ. ಈ ವೇಳೆ ಕರ್ನಾಟಕ ಎಕ್ಸ್‌ಪ್ರೆಸ್ ಬಂದಿದ್ದು ಹಳಿಯಲ್ಲಿದ್ದ ಪ್ರಯಾಣಿಕರ ಮೇಲೆ ಹರಿದಿದೆ. ಇದರಿಂದಾಗಿ ಸಾವು ನೋವು ಜಾಸ್ತಿಯಾಗಿದೆ.
Advertisement
ದೆಹಲಿಯಿಂದ ಬೆಂಗಳೂರಿಗೆ ಕರ್ನಾಟಕ ಎಕ್ಸ್‌ಪ್ರೆಸ್ ಬರುತ್ತಿದ್ದರೆ, ಪುಷ್ಪಕ್ ಎಕ್ಸ್‌ಪ್ರೆಸ್ ಉತ್ತರ ಪ್ರದೇಶ ರಾಜಧಾನಿ ಲಕ್ನೋದಿಂದ ಮುಂಬೈಗೆ ಬರುತ್ತಿತ್ತು.