ಜಕಾರ್ತಾ: ದೋಣಿಯೊಂದು (Ferry) ಮುಳುಗಿ 15 ಮಂದಿ ಮೃತಪಟ್ಟ ಘಟನೆ ಇಂಡೋನೇಷ್ಯಾದ (Indonesia) ಸುಲವೆಸಿ ಎಂಬಲ್ಲಿ ನಡೆದಿದೆ. ದೋಣಿಯಲ್ಲಿ 40 ಜನ ಪ್ರಯಾಣಿಸುತ್ತಿದ್ದರು. ಅದರಲ್ಲಿ 6 ಮಂದಿಯನ್ನು ರಕ್ಷಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ದೋಣಿಯಲ್ಲಿದ್ದ 15 ಮಂದಿ ಮೃತಪಟ್ಟಿರುವುದು ಖಚಿತವಾಗಿದೆ. ದುರಂತದಲ್ಲಿ ಬದುಕುಳಿದವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಉಳಿದ ಪ್ರಯಾಣಿಕರು ನಾಪತ್ತೆಯಾಗಿದ್ದು ಅವರ ಹುಡುಕಾಟ ಆರಂಭವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: 20 ವರ್ಷದ ವಿದ್ಯಾರ್ಥಿ ಮ್ಯಾರಥಾನ್‌ನಲ್ಲಿ ಓಡಿದ ಬಳಿಕ ಹೃದಯಾಘಾತದಿಂದ ಸಾವು
ದೋಣಿ ಮುಳುಗಲು ನಿಖರವಾದ ಕಾರಣ ತಿಳಿದು ಬಂದಿಲ್ಲ. ದೋಣಿ ಮುಳುಗಿರುವ ಜಾಗದಲ್ಲಿ ಇನ್ನೂ ಹೆಚ್ಚಿನ ಜನ ಮುಳುಗಿ ಮೃತಪಟ್ಟಿರುವ ಅನುಮಾನವಿದ್ದು ಶೋಧ ಕಾರ್ಯ ನಡೆಯುತ್ತಿದೆ. ಅಲ್ಲದೇ ಮೃತದೇಹಗಳು ತೇಲುತ್ತಿರುವ ಶಂಕೆಯ ಮೇಲೆ ಬೋಟ್‍ಗಳನ್ನು ಬಳಸಿ ಸುತ್ತಮುತ್ತ ಹುಡುಕಾಟ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇಂಡೋನೇಷ್ಯಾ ಸುಮಾರು 17,000 ದ್ವೀಪಗಳನ್ನು ಒಳಗೊಂಡಿದೆ. ಇದರಿಂದಾಗಿ ಸಾಮಾನ್ಯವಾಗಿ ಇಲ್ಲಿ ದೋಣಿಗಳನ್ನು ಸಾರಿಗೆಗೆ ಬಳಸಲಾಗುತ್ತದೆ. ಸುರಕ್ಷತಾ ನಿಯಮಗಳ ಸಡೀಲತೆ ಹಾಗೂ ಉಲ್ಲಂಘನೆಯಿಂದಾಗಿ ಇಂತಹ ಅಪಘಾತಗಳು ನಡೆಯುತ್ತವೆ. ಅಲ್ಲದೇ ರಕ್ಷಣಾ ಸಾಮಾಗ್ರಿಗಳ ಕೊರತೆ ಮತ್ತು ಹೆಚ್ಚಿನ ಸಂಖ್ಯೆಯಲ್ಲಿ ಪ್ರಯಾಣಿಕರನ್ನು ಸಾಗಿಸುವುದು ಇಂತಹ ಅವಘಡಗಳಿಗೆ ಕಾರಣವಾಗಿದೆ ಎನ್ನಲಾಗಿದೆ. ಇದನ್ನೂ ಓದಿ: ತವರು ಮನೆಯಿಂದ ಕರೆತರಲು ಹೋದ ಪತಿಗೆ ಬೆಂಕಿ ಹಚ್ಚಿದ ಪತ್ನಿ!
Web Stories
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]