ತೆಲುಗು ಪ್ರಭಾಸ್ (Actor Prabhas) ಎಲ್ಲೇ ಹೋದರೂ, ಈ ಜ್ಯೋತಿಷಿ ವೇಣು ಸ್ವಾಮಿ ಮಾತ್ರ ಬಿಡುತ್ತಿಲ್ಲ. ಒಂದರ ಹಿಂದೊಂದು ಭವಿಷ್ಯ ಹೇಳುತ್ತಿರುತ್ತಾರೆ. ಸಿನಿಮಾ ಫ್ಲಾಪ್ ಆಗುತ್ತವೆ ಎನ್ನುವುದರಿಂದ ಹಿಡಿದು ಪ್ರಭಾಸ್ ಲಗ್ನ ಈ ಜನ್ಮದಲ್ಲಿ ಸಾಧ್ಯ ಇಲ್ಲ ಅನ್ನೋ ತನಕ ಇವರ ವಾಣಿ ವಿಜೃಂಭಿಸಿದೆ. ಪ್ರಭಾಸ್ ಫ್ಯಾನ್ಸ್ ತಿರುಗಿ ಬಿದ್ದರೂ ಸ್ವಾಮಿ ಡೋಂಟ್ ಕೇರ್. ಇದೀಗ ಅದೇ ವೇಣು ಸ್ವಾಮಿ ಅವರು ಪ್ರಭಾಸ್ ಕುರಿತು ಹೊಸ ವಿಷಯ ಹೇಳಿದ್ದಾರೆ. ಇದನ್ನೂ ಓದಿ:ತಮಿಳಿನ ಸ್ಟಾರ್ ನಟನಿಗೆ ರಶ್ಮಿಕಾ ನಾಯಕಿ- ಶೂಟಿಂಗ್ ವಿಡಿಯೋ ಲೀಕ್
ವೇಣು ಸ್ವಾಮಿ ಹೆಸರು ಹೇಳಿದರೆ ಸಾಕು ಟಾಲಿವುಡ್ ಸ್ಟಾರ್ಸ್ ಬೆಚ್ಚಿ ಬೀಳುತ್ತಾರೆ. ಕಾರಣ ಅವರು ಹೇಳಿದ ಬಹುತೇಕ ಭವಿಷ್ಯ ನಿಜವಾಗಿವೆ. ಸಮಂತಾ ಹಾಗೂ ನಾಗಚೈತನ್ಯ ಹೆಚ್ಚು ದಿನ ಜಂಟಿಯಾಗಿರಲ್ಲ. ಡಿವೋರ್ಸ್ ಖಚಿತ ಎಂದಿದ್ದರು. ಅದು ಸತ್ಯವಾಯಿತು. ಪ್ರಭಾಸ್ 3 ಸಿನಿಮಾ ಗೆಲ್ಲಲ್ಲ ಎಂದಿದ್ದರು. ಅದೂ ನಿಜವಾಯಿತು. ಆಗಲೇ ವೇಣು ಸ್ವಾಮಿ ಹವಾ ಜೋರಾಯಿತು. ಆಗ ಪ್ರಭಾಸ್ ಬಗ್ಗೆ ಇನ್ನಷ್ಟು ಮಾಹಿತಿ ನೀಡಿದರು ಸ್ವಾಮಿ. ಪ್ರಭಾಸ್ ಆರೋಗ್ಯದಲ್ಲಿ ಏರುಪೇರಾಗಲಿದೆ. ಅವರ ಮದುವೆ ಈ ಜನ್ಮದಲ್ಲಿ ನಡೆಯಲು ಸಾಧ್ಯವೇ ಇಲ್ಲ ಎಂದಿದ್ದರು. ಪ್ರಭಾಸ್ ಫ್ಯಾನ್ಸ್ ಕಿಡಿಕಾರಿದರು. ಈಗ ಮತ್ತೊಮ್ಮೆ ಪ್ರಭಾಸ್ ಚರಿತ್ರೆ ಹಿಡಿದು ನಿಂತಿದ್ದಾರೆ.
ಪ್ರಭಾಸ್ ಮದುವೆ ಈ ಜನ್ಮದಲ್ಲಿ ಸಾಧ್ಯ ಇಲ್ಲ. ಅವರ ಜಾತಕವೇ ಇದಕ್ಕೆ ಕಾರಣ. ಹಿಂದೊಮ್ಮೆ ಇದೇ ಮಾತನ್ನು ಹೇಳಿದ್ದೆ. ಈಗ ಮತ್ತೆ ಅದನ್ನೇ ಹೇಳುತ್ತಿದ್ದೇನೆ. ನಾನು ಹೇಳುವುದು ಮಾತ್ರ ಸತ್ಯ. ಪ್ರಭಾಸ್ ಜಾತಕದಲ್ಲಿ ದೋಷ ಇದೆ. ಅದು ನನಗೆ ಗೊತ್ತು. ಹಾಗೆಯೇ ಯಾಕೆ ಮದುವೆ ಆಗಲ್ಲ ಎನ್ನುವ ಕಾರಣವೂ ಗೊತ್ತಿದೆ. ಆದರೆ ಅದನ್ನು ಹೇಳಲು ಸಾಧ್ಯ ಇಲ್ಲ. ಇವರ ತಂದೆ ನಟ ಕೃಷ್ಣಂರಾಜು ಜಾತಕವೂ ನನಗೆ ಗೊತ್ತು.
ವರ್ಷದ ಕೊನೆಯಲ್ಲಿ ಪ್ರಭಾಸ್ ಮದುವೆ ಆಗುತ್ತಾರೆ. ಹೀಗಂತ ಪ್ರಭಾಸ್ ಖಾಸಾ ಸಂಬಂಧಿ ಹೇಳಿದ್ದರು. ಆದರೆ ಇಲ್ಲಿ ನೋಡಿದರೆ ಸ್ವಾಮಿ ಅಡ್ಡಗಾಲು ಹಾಕುತ್ತಿದ್ದಾರೆ. ಅನುಷ್ಕಾ ಶೆಟ್ಟಿ(Anushka Shetty), ಕೃತಿ ಸನೋನ್ (Kriti Sanon) ಜೊತೆ ಪ್ರಭಾಸ್ ಹೆಸರು ಕೇಳಿತ್ತು. ಅದು ಅಲ್ಲಲ್ಲೇ ನಿಂತಿತು. ಇದರಲ್ಲಿ ಯಾವುದು ಸತ್ಯ ಯಾವುದು ಸುಳ್ಳು ? ದೇವರಿಗೇ ಗೊತ್ತು. ಈಗಾಗಲೇ ವಯಸ್ಸು 45 ಆಗಿದೆ. ಇನ್ನೈದು ವರ್ಷಕ್ಕೆ ಹಾಫ್ ಸೆಂಚುರಿ. ಸಲ್ಮಾನ್ ಖಾನ್ ಅರವತ್ತರ ಗಡಿ ಮುಟ್ಟಿದ್ದಾರೆ. ಆ ದಾಖಲೆ ಪ್ರಭಾಸ್ ಮುರಿಯುತ್ತಾರಾ ಅಥವಾ ಅದಕ್ಕೂ ಮುಂಚೆ ಮದುವೆ ಆಗಿ ಸೆಟಲ್ ಆಗುತ್ತಾರಾ ಕಾಯಬೇಕಿದೆ.