ನಿಧಿ ನಿಕ್ಷೇಪ ತೋರಿಸುವುದಾಗಿ 16 ಲಕ್ಷ ರೂ. ನಾಮ – ವಂಚಿತರಿಂದ ಜ್ಯೋತಿಷಿಯ ಕಿಡ್ನಾಪ್

Public TV
1 Min Read
TMK ASTROLOGER KIDNAP

ತುಮಕೂರು: ನಿಧಿ (Treasure) ನಿಕ್ಷೇಪ ತೋರಿಸುವುದಾಗಿ ಜ್ಯೋತಿಷಿಯೊಬ್ಬರು (Astrologer) 16 ಲಕ್ಷ ರೂ. ಪಡೆದು ನಾಮ ಹಾಕಿದ್ದು, ನಿಧಿ ಸಿಗದ ಹಿನ್ನೆಲೆ ಬೆಂಗಳೂರಿನ ಕಮಲಾ ನಗರ ನಿವಾಸಿಗಳು ಜ್ಯೋತಿಷಿಯನ್ನು ಕಿಡ್ನಾಪ್ (Kidnap) ಮಾಡಿದ ಘಟನೆ ಪಾವಗಡ (Pavagada) ತಾಲೂಕಿನ ರಾಜವಂತಿ ಗ್ರಾಮದಲ್ಲಿ ನಡೆದಿದೆ.

ರಾಜವಂತಿ ಗ್ರಾಮದ ಜ್ಯೋತಿಷಿ ರಾಮಣ್ಣ ಸ್ವಾಮಿ ಎನ್ನುವವರನ್ನು ಬೆಂಗಳೂರಿನ ಕಮಲಾನಗರದ ನಿವಾಸಿಗಳು ಕಿಡ್ನಾಪ್ ಮಾಡಿದ್ದು, ಪಾವಗಡ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. ಶಿವರಾಜು (32), ಮೇದರಹಳ್ಳಿ ಚಿಕ್ಕಬಾಣಾವರದ ಅನಂತಕೃಷ್ಣ (21), ಆಂಧ್ರದ ಮಡಕಶಿರಾ ತಾಲೂಕಿನ ಕೊತಾಲಗುಟ್ಟದ ನರೇಶ್ (25) ಬಂಧಿತ ಆರೋಪಿಗಳು. ಅತಿಯಾಸೆಗೆ ಬಿದ್ದು ಹಣ ಕೊಟ್ಟವರು ಹಣ ವಸೂಲಿಗಾಗಿ ಜ್ಯೋತಿಷಿಯ ಕಿಡ್ನಾಪ್ ಪ್ಲಾನ್ ಮಾಡಿದ್ದು, ಪೊಲೀಸರು ಕಿಡ್ನಾಪ್ ಮಾಡಿದ ಟೀಂ ಅನ್ನು ಕೇವಲ 12 ಗಂಟೆಯೊಳಗೆ ಬಂಧಿಸಿದ್ದಾರೆ. ಇದನ್ನೂ ಓದಿ: ಕೆಪಿಎಸ್‍ಸಿ ಪರೀಕ್ಷೆಗೆ ತಾಳಿ, ಕಾಲುಂಗುರ ತೆಗೆಸಿ ಸಿಬ್ಬಂದಿ ಯಡವಟ್ಟು – ಸುದ್ದಿ ಪ್ರಸಾರವಾಗುತ್ತಿದ್ದಂತೆ ಎಚ್ಚೆತ್ತ ಅಧಿಕಾರಿಗಳು

ರಾತ್ರಿ 9 ಗಂಟೆಗೆ ಜ್ಯೋತಿಷಿಯನ್ನು ರಕ್ಷಿಸಿ ಕಿಡ್ನಾಪರ್ಸ್‌ಗಳನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಮತ್ತೊಬ್ಬ ಆರೋಪಿ ಹರೀಶ್ ಎಸ್ಕೇಪ್ ಆಗಿದ್ದಾನೆ. ಬೈಕ್‌ನಲ್ಲಿ ಹೊರಟಿದ್ದ ಜ್ಯೋತಿಷಿ ರಾಮಣ್ಣನವರನ್ನು ಎರಡು ಕಾರುಗಳಲ್ಲಿ ಬಂದು ಕಿಡ್ನಾಪ್ ಮಾಡಿದ್ದರು. ಪಾವಗಡದ ಅರಣ್ಯ ಇಲಾಖೆ ಕಚೇರಿ ಎದುರು ಆರೋಪಿಗಳು ರಾಮಣ್ಣನವರನ್ನು ಕಿಡ್ನಾಪ್ ಮಾಡಿದ್ದು, ಇದನ್ನು ಗಮನಿಸಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಇದನ್ನೂ ಓದಿ: ನ.19ಕ್ಕೆ ಏರ್ ಇಂಡಿಯಾ ವಿಮಾನದಲ್ಲಿ ಪ್ರಯಾಣಿಸಬೇಡಿ – ಖಲಿಸ್ತಾನಿ ಭಯೋತ್ಪಾದಕನ ಬೆದರಿಕೆ ವೀಡಿಯೋ

ರಾಮಣ್ಣನವರ ಮೊಬೈಲ್‌ನಿಂದಲೇ ಆರೋಪಿಗಳು ರಾಮಣ್ಣರ ಮಗನಿಗೆ ಕರೆ ಮಾಡಿದ್ದರು. ನಿಮ್ಮ ತಂದೆ 16 ಲಕ್ಷ ರೂ. ಸಾಲ ಪಡೆದಿದ್ದಾರೆ. ಆ ಹಣ ಕೊಟ್ಟು ನಿಮ್ಮ ತಂದೆಯನ್ನು ಬಿಡಿಸಿಕೊಂಡು ಹೋಗಿ ಎಂದು ಹೇಳಿದ್ದರು. ಈ ಕುರಿತು ದೂರು ದಾಖಲಿಸಿಕೊಂಡ ಪೊಲೀಸರು ಬೆಂಗಳೂರಿನ ಉಳ್ಳಾಲ ಬಳಿ ರಾಮಣ್ಣನವರನ್ನು ರಕ್ಷಣೆ ಮಾಡಿದ್ದಾರೆ. ಇದನ್ನೂ ಓದಿ: ಬೆಂಗಳೂರಿನಲ್ಲಿ ಚಾಕು ಇರಿದು ಉಪನಿರ್ದೇಶಕಿಯ ಬರ್ಬರ ಹತ್ಯೆ

Share This Article