ಮಾಸ್ಕೋ: ಮಾನವನಿಂದ ಇದುವರೆಗೆ ಸ್ಪೋಟಿಸಲು ಸಾಧ್ಯವಾಗಿರುವ ಪರಮಾಣು ಬಾಂಬ್‌ಗಿಂತಲೂ 30 ಪಟ್ಟು ಹೆಚ್ಚು ಶಕ್ತಿಶಾಲಿ ಕ್ಷುದ್ರಗ್ರಹವೊಂದು ಭೂಮಿಗೆ ಸಮೀಪಿಸುತ್ತಿದೆ. ಇದು 2029ರಲ್ಲಿ ಭೂಮಿಯನ್ನು ಹಾದು ಹೋಗುವ ನಿರೀಕ್ಷೆಯಿದೆ.
ಹೌದು, ಭಾರೀ ಶಕ್ತಿಯ ಕ್ಷುದ್ರಗ್ರಹವೊಂದು ಭೂಮಿಯ ಬಳಿಯಿಂದ ಹಾದು ಹೋಗಲಿದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ. ಅಂದಾಜಿನ ಪ್ರಕಾರ ಕ್ಷುದ್ರಗ್ರಹ 1,717 ಮೆಗಾಟನ್ ಮೌಲ್ಯದ ಶಕ್ತಿ ಬಿಡುಗಡೆ ಮಾಡುವ ಸಾಮರ್ಥ್ಯ ಹೊಂದಿದೆ ಎನ್ನಲಾಗುತ್ತಿದೆ.
Advertisement
ರಷ್ಯಾದ ವಿಜ್ಞಾನಿಗಳ ಸಂಶೋಧನೆಯ ಪ್ರಕಾರ ಅಪೋಫಿಸ್ ಕ್ಷುದ್ರಗ್ರಹ ಎಪ್ರಿಲ್ 2029ರಲ್ಲಿ ಭೂಮಿಯ ಸಮೀಪದಲ್ಲಿ ಹಾದು ಹೋಗುವ ನಿರೀಕ್ಷೆಯಿದೆ. ಅದು ಭೂಮಿಯ ಮೇಲ್ಮೈಯಿಂದ ಕೇವಲ 39,000 ಕಿ.ಮೀ ದೂರದಲ್ಲಿ ಹಾದು ಹೋಗಲಿದೆ ಎನ್ನಲಾಗಿದೆ. ಇಷ್ಟೇ ದೂರದ ಭೂಮಿಯ ಕಕ್ಷೆಯಲ್ಲಿ ಟಿವಿ ಪ್ರಸಾರದ ಉಪಗ್ರಹಗಳನ್ನು ಇರಿಸಲಾಗುತ್ತದೆ. ಇದನ್ನೂ ಓದಿ: 700 ಕುರಿಗಳಿಂದ ವ್ಯಾಕ್ಸಿನ್ ಸಂದೇಶ- ಮೆಚ್ಚಿದ ನೆಟ್ಟಿಗರು
Advertisement
Advertisement
340 ಮೀಟರ್ ವ್ಯಾಸದ ಅಪೋಫಿಸ್ ಕ್ಷುದ್ರಗ್ರಹ ಭೀತಿ ಮೂಡಿಸುವಷ್ಟು ದೊಡ್ಡದಲ್ಲವಾದರೂ ಅದರ ಶಕ್ತಿ ಅಪಾರವಾದುದು ಎಂದು ಹೇಳಲಾಗಿದೆ. ಇತ್ತೀಚಿನ ಇತಿಹಾಸದಲ್ಲಿ ಇಷ್ಟು ಶಕ್ತಿಶಾಲಿ ಕ್ಷುದ್ರಗ್ರಹ ಭೂಮಿಗೆ ಇಷ್ಟು ಸಮೀಪದಲ್ಲಿ ಹಾದು ಹೋಗುತ್ತಿರುವುದು ಇದೇ ಮೊದಲು. ಸದ್ಯ ಇದರ ಹಾದುಹೋಗುವಿಕೆಯಿಂದ ಭೂಮಿಗೆ ಅಥವಾ ಉಪಗ್ರಹಗಳಿಗೆ ಯಾವುದೇ ತೊಂದರೆ ಇಲ್ಲ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಬಿಎಸ್‌ಎನ್‌ಎಲ್ ಹೊಸ ಬಳಕೆದಾರರಿಗೆ 5ಜಿಬಿ ಉಚಿತ ಡೇಟಾ