ನವದೆಹಲಿ: ಇತ್ತೀಚೆಗೆ ಖಾಸಗಿ ಟೆಲಿಕಾಮ್ ಕಂಪನಿಗಳು ಪ್ರೀಪೇಯ್ಡ್ ರಿಚಾರ್ಜ್ ದರವನ್ನು ಹೆಚ್ಚಿಸಿ ಬಳಕೆದಾರರಿಗೆ ಹೊರೆಯೆನಿಸುವಂತೆ ಮಾಡಿದೆ. ಆದರೆ ಸರ್ಕಾರಿ ಸ್ವಾಮ್ಯದ ಭಾರತ್ ಸಂಚಾರ್ ನಿಗಮ್ ಲಿಮಿಟೆಡ್(ಬಿಎಸ್ಎನ್ಎಲ್) ಮಾತ್ರ ಇತರ ಟೆಲಿಕಾಂ ಬಳಕೆದಾರರನ್ನು ಆಕರ್ಷಿಸಲು ಹೊಸ ಕೊಡುಗೆಗಳನ್ನು ನಿಡುತ್ತಿದೆ.
ಇತರ ಟೆಲಿಕಾಂ ಆಪರೇಟರ್ಗಳ ಗ್ರಾಹಕರು ತಮ್ಮ ಫೋನ್ ನಂಬರ್ ಅನ್ನು ಬಿಎಸ್ಎನ್ಎಲ್ಗೆ ಪೋರ್ಟ್ ಮಾಡಿದರೆ ಬಿಎಸ್ಎನ್ಎಲ್ 30 ದಿನಗಳ ವ್ಯಾಲಿಡಿಟಿ ಇರುವ 5ಜಿಬಿ ಉಚಿತ ಡೇಟಾವನ್ನು ನೀಡುತ್ತಿದೆ. ಈ ಆಫರ್ 15 ಜನವರಿ 2022ರ ವರೆಗೆ ಮಾತ್ರವೇ ಮಾನ್ಯವಾಗಿರುತ್ತದೆ ಎಂದು ತಿಳಿಸಿದೆ. ಇದನ್ನೂ ಓದಿ: ಬಟನ್ ಒತ್ತಿದ್ರೆ ಕಾರಿನ ಬಣ್ಣವೇ ಬದಲಾಗುತ್ತೆ
ಇದಕ್ಕಾಗಿ ಬಳಕೆದಾರರು ತಾವು ಇತರ ಆಪರೆಟರ್ಗಳಿಂದ ಬಿಎಸ್ಎನ್ಎಲ್ಗೆ ಬದಲಾಯಿಸಿರುವ ಕಾರಣವನ್ನು ಹಾಗೂ ಬದಲಾವಣೆಯ ಪುರಾವೆಯನ್ನು ಫೇಸ್ಬುಕ್ ಹಾಗೂ ಟ್ವಿಟ್ಟರ್ನಲ್ಲಿ ಹಂಚಿಕೊಳ್ಳಬೇಕು. ಇದರೊಂದಿಗೆ #SwitchToBSNL ಹ್ಯಾಶ್ ಟ್ಯಾಗ್ ಕೂಡಾ ಬಳಸಬೇಕು ಎಂದು ಬಿಎಸ್ಎನ್ಎಲ್ ತಿಳಿಸಿದೆ. ಇದನ್ನೂ ಓದಿ: ಮೀನುಗಳಿಂದ ವಾಹನ ಚಾಲನೆ – ವೀಡಿಯೋ ವೈರಲ್
ಬಳಕೆದಾರರು ಮೊಬೈಲ್ ನಂಬರ್ ಪೋರ್ಟಿಬಿಲಿಟಿ ಮೂಲಕ ಬಿಎಸ್ಎನ್ಎಲ್ಗೆ ಬದಲಾಯಿಸಿದ ಬಳಿಕ ಟ್ವೀಟ್ ಅಥವಾ ಫೇಸ್ಬುಕ್ ಫೋಸ್ಟ್ನ ಸ್ಕ್ರೀನ್ಶಾಟ್ ಹಂಚಿಕೊಳ್ಳಬೇಕು ಎಂದಿದೆ. 9457086024 ಗೆ ನೇರ ಸಂದೇಶ ಅಥವಾ ವಾಟ್ಸ್ಅಪ್ ಮೂಲಕ ಸ್ಕ್ರೀನ್ಶಾಟ್ ಅನ್ನು ಕಳುಹಿಸಬಹುದು ಎಂದು ಬಿಎಸ್ಎನ್ಎಲ್ ತಿಳಿಸಿದೆ.