ಬೆಂಗಳೂರು: ವಿಧಾನಸಭಾ ಚುನಾವಣೆಗೆ (Assembly Election) ದಿನಗಣನೆ ಪ್ರಾರಂಭವಾಗಿದೆ. ಈ ಹೊತ್ತಲ್ಲೇ ಮಾಜಿ ಪ್ರಧಾನಿ ದೇವೇಗೌಡ (HD Deve Gowda) ಜೆಡಿಎಸ್ (JDS) ಪಕ್ಷದಿಂದ ಭರವಸೆ ಪತ್ರ ಬಿಡುಗಡೆ ಮಾಡಿದ್ದಾರೆ.
ಈ ಬಗ್ಗೆ ತಿಳಿಸಿರುವ ದೇವೇಗೌಡ, ಪ್ರಣಾಳಿಕೆ ಕಾರ್ಯಕ್ರಮವನ್ನು ಮುಂದೆ ಮಾಡಲಿದ್ದೇವೆ. ಈಗ ಜೆಡಿಎಸ್‌ನಿಂದ ಭರವಸೆ ಪತ್ರವನ್ನು ಬಿಡುಗಡೆ ಮಾಡುತ್ತಿದ್ದೇವೆ ಎಂದು ತಿಳಿಸಿದ್ದಾರೆ.
Advertisement
Advertisement
12 ಭರವಸೆ?
1. ಮಾತೃ ಶ್ರೀ ಮತ್ತು ಮಹಿಳಾ ಸಬಲೀಕರಣ
2. ಕನ್ನಡವೇ ಮೊದಲು
3. ರೈತ ಚೈತನ್ಯ
4. ಹಿರಿಯ ನಾಗರಿಕರಿಗೆ ಸನ್ಮಾನ
5. ಶಿಕ್ಷಣವೇ ಆಧುನಿಕ ಶಕ್ತಿ
6. ಆರೋಗ್ಯ ಸಂಪತ್ತು
7. ವಿಕಲಚೇತನರಿಗೆ ಆಸರೆ
8. ಆರಕ್ಷಕರಿಗೆ ಅಭಯ
9. ಧಾರ್ಮಿಕ ಅಲ್ಪಸಂಖ್ಯಾತರ ಏಳಿಗೆ ಹಾಗೂ ಪ್ರಗತಿ
10. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಏಳಿಗೆ
11. ಯುವಜನ ಸಬಲೀಕರಣ
12. ವೃತ್ತಿನಿರತ ವಕೀಲರ ಅಭ್ಯುದಯ ಇದನ್ನೂ ಓದಿ: ಪ್ರಧಾನಿ ಮೋದಿಗೆ ಪತ್ರ ಬರೆದ ಮಾಜಿ ಪಿಎಂ ದೇವೇಗೌಡ
Advertisement
Advertisement
ಪ್ರಣಾಳಿಕೆ ಬಿಡುಗಡೆಗೂ ಮುನ್ನ ಪ್ರಣಾಳಿಕೆಯನ್ನು ದೇವರ ಮುಂದಿಟ್ಟು ಚನ್ನಮ್ಮ, ಕುಮಾರಸ್ವಾಮಿ ಪೂಜೆ ನೆರವೇರಿಸಿದರು. ಈವೇಳೆ ದೇವೇಗೌಡ ಕುಟುಂಬ, ಸಿಎಂ ಇಬ್ರಾಹಿಂ ಉಪಸ್ಥಿತರಿದ್ದರು. ಇದನ್ನೂ ಓದಿ: ರೇವಣ್ಣ ಕುಟುಂಬದವ್ರು ನನ್ನ ಪರ ಪ್ರಚಾರಕ್ಕೆ ಬರುತ್ತಾರೆ: ಹಾಸನ ಜೆಡಿಎಸ್ ಅಭ್ಯರ್ಥಿ