ಜೈಪುರ: ಕಳೆದ ವರ್ಷ ಮೃತಪಟ್ಟ ವ್ಯಕ್ತಿ ಕೋಮಾದಲ್ಲಿದ್ದಾನೆ (coma) ಎಂದು ಅಂದುಕೊಂಡು ಸುಮಾರು 18 ತಿಂಗಳಿನಿಂದ ಮೃತದೇಹವನ್ನು ಕುಟುಂಬಸ್ಥರು (Family) ಮನೆಯಲ್ಲಿಯೇ ಇರಿಸಿಕೊಂಡಿದ್ದ ವಿಚಿತ್ರ ಘಟನೆ ಕಾನ್ಪುರದಲ್ಲಿ (Kanpur) ನಡೆದಿದೆ.
ಮೃತ ವ್ಯಕ್ತಿ ಆದಾಯ ತೆರಿಗೆ ಇಲಾಖೆಯ ಉದ್ಯೋಗಿಯಾಗಿದ್ದು, ಆತನ ಪತ್ನಿ ಮಾನಸಿಕ ಅಸ್ವಸ್ಥೆ (Mentally Unstable) ಎಂದು ತಿಳಿದುಬಂದಿದೆ. ವ್ಯಕ್ತಿ ಕೋಮಾದಿಂದ ಶೀಘ್ರ ಹೊರಗೆ ಬರಲೆಂದು ಪ್ರತಿದಿನ ಬೆಳಗ್ಗೆ ಪತ್ನಿ ಕೊಳೆತು ಹೋಗಿದ್ದ ಶವದ ಮೇಲೆ ಗಂಗಾಜಲ (Gangajal) ಎರಚುತ್ತಿದ್ದಳು. ಇದನ್ನೂ ಓದಿ: ಗಾಂಜಾ ದಂಧೆಕೋರರಿಂದಲೇ ಪೊಲೀಸರ ಮೇಲೆ ಮಾರಣಾಂತಿಕ ಹಲ್ಲೆ – ICUನಲ್ಲಿ ಸಿಪಿಐ
Advertisement
Advertisement
ಆದಾಯ ತೆರಿಗೆ ಇಲಾಖೆಯಲ್ಲಿ (Income Tax department) ಕೆಲಸ ಮಾಡುತ್ತಿದ್ದ ವಿಮಲೇಶ್ ದೀಕ್ಷಿತ್ ಅವರು ಕಳೆದ ವರ್ಷ ಏಪ್ರಿಲ್‍ನಲ್ಲಿ ಕಾರ್ಡಿಯಾಕ್ ರೆಸ್ಪಿರೇಟರಿ ಸಿಂಡ್ರೋಮ್‍ನಿಂದ (Cardiac Respiratory Syndrome) ನಿಧನರಾದರು. ಆದರೆ ಕುಟುಂಬಸ್ಥರು ವ್ಯಕ್ತಿ ಕೋಮಾದಲ್ಲಿದ್ದಾರೆ ಎಂದು ಭಾವಿಸಿ ಅಂತ್ಯಕ್ರಿಯೆ ಮಾಡಲು ಹಿಂಜರಿದಿದ್ದಾರೆ ಎಂದು ಮುಖ್ಯ ವೈದ್ಯಕೀಯ ಅಧಿಕಾರಿ (ಸಿಎಂಒ) ಡಾ ಅಲೋಕ್ ರಂಜನ್ ಹೇಳಿದ್ದಾರೆ. ಇದನ್ನೂ ಓದಿ: ಹಿರಿಯ ಕಾಂಗ್ರೆಸ್ ಮುಖಂಡ ಬಿ.ಕೆ.ಪುಟ್ಟಸ್ವಾಮಿ ನಿಧನಕ್ಕೆ ಡಿಕೆಶಿ ಸಂತಾಪ
Advertisement
ವಿಮಲೇಶ್ ದೀಕ್ಷಿತ್ ಅವರ ಕುಟುಂಬಸ್ಥರು ಪಿಂಚಣಿ ಫೈಲ್‍ಗಳನ್ನು ಚಾಲ್ತಿಗೊಳಿಸದ ಕಾರಣ ಈ ಬಗ್ಗೆ ತನಿಖೆ ನಡೆಸುವಂತೆ ಕಾನ್ಪುರದ ಆದಾಯ ತೆರಿಗೆ ಅಧಿಕಾರಿಗಳು ಮನವಿ ಮಾಡಿದ್ದರು. ಹೀಗಾಗಿ ಶುಕ್ರವಾರ ರಾವತ್‍ಪುರ ಪ್ರದೇಶದ ದೀಕ್ಷಿತ್ ಅವರ ಮನೆಗೆ ಪೊಲೀಸರು ಮತ್ತು ಮ್ಯಾಜಿಸ್ಟ್ರೇಟ್ ಜೊತೆಗೆ ಆರೋಗ್ಯ ಅಧಿಕಾರಿಗಳ ತಂಡ ಭೇಟಿ ನೀಡಿದರು. ಈ ವೇಳೆ ಕುಟುಂಬಸ್ಥರು ವಿಮಲೇಶ್ ದೀಕ್ಷಿತ್ ಜೀವಂತವಾಗಿದ್ದಾರೆ. ಆದರೆ ಕೋಮಾದಲ್ಲಿದ್ದಾರೆ ಎಂದು ಪೊಲೀಸರಿಗೆ ತಿಳಿಸಿದ್ದಾರೆ.
Advertisement
ನಂತರ ಈ ವಿಚಾರವಾಗಿ ಕೂಲಂಕಷವಾಗಿ ತನಿಖೆ ನಡೆಸಿದ ಪೊಲೀಸರಿಗೆ, ನೆರೆಹೊರೆಯವರಿಗೂ ದೀಕ್ಷಿತ್ ಕೋಮಾದಲ್ಲಿದ್ದಾರೆ ಎಂದು ಅವರ ಮನೆಯವರು ತಿಳಿಸಿದ್ದು, ಅವರ ಪತ್ನಿ ಮಾನಸಿಕ ಅಸ್ವಸ್ಥರಂತೆ ಕಾಣಿಸುತ್ತಾರೆ. ಅಲ್ಲದೇ ಅವರ ಮನೆಯವರು ಆಗಾಗ ಆಕ್ಸಿಜನ್ ಸಿಲಿಂಡರ್‌ಗಳನ್ನು ಮನೆಯೊಳಗೆ ತೆಗೆದುಕೊಂಡು ಹೋಗುವುದನ್ನು ನೋಡಿದ್ದೇವೆ ಎಂದು ಸ್ಥಳೀಯರು ತಿಳಿಸಿದ್ದಾರೆ.