ಬೆಂಗಳೂರು: ಖಾಸಗಿ ವಾಹಿನಿಯ ಪತ್ತೆದಾರಿ ಪ್ರತಿಭಾ ಸೀರಿಯಲ್ ಶೂಟಿಂಗ್ ಸ್ಪಾಟ್ ನಲ್ಲಿ ಮಹಿಳೆಯೊಬ್ಬಳು ಹೇರ್ ಸ್ಟೈಲಿಸ್ಟ್ ಮೇಲೆ ಹಲ್ಲೆ ನಡೆಸಿದ್ದಾರೆ.
ಸುರೇಶ್ ಹೈರ್ ಸ್ಟೈಲಿಸ್ಟ್ ಆಗಿದ್ದು, ಅವರ ಮೇಲೆ ಮನೆಯ ಒಡತಿ ಹಲ್ಲೆ ನಡೆಸಿದ್ದಾರೆ. ಹಲವು ದಿನದಿಂದ ಕನಕಪುರ ರಸ್ತೆಯಲ್ಲಿ ಪತ್ತೆಧಾರಿ ಪ್ರತಿಭಾ ಧಾರಾವಾಹಿ ಶೂಟಿಂಗ್ ನಡೆಯುತ್ತಿತ್ತು. ಮನೆಯನ್ನು ಬಾಡಿಗೆ ಪಡೆದುಕೊಂಡು ಶೂಟಿಂಗ್ ನಡೆಸಲಾಗುತ್ತಿತ್ತು.
ಈ ಸಂದರ್ಭದಲ್ಲಿ ಏಕಾಏಕಿ ಮನೆಯ ಒಡತಿ ಮಮತಾ ಕ್ಯಾತೆ ತೆಗೆದಿದ್ದಾರೆ ಅಂತ ಎನ್ನಲಾಗಿದೆ. ಚಪ್ಪಲಿ ಹೊರಗೆ ಬಿಟ್ಟು ಬರುವಂತೆ ಹೇಳಿ ಅವಾಜ್ ಹಾಕಿ, ನಂತರ ಮಮತಾ ಹೇರ್ ಸ್ಟೈಲಿಸ್ಟ್ ಸುರೇಶ್ ಮೇಲೆ ಹಲ್ಲೆ ನಡೆಸಿರುವ ದೃಶ್ಯಗಳು ಮೊಬೈಲ್‍ನಲ್ಲಿ ಸೆರೆಯಾಗಿವೆ.
ಮಮತಾ ಸೀರಿಯಲ್ ಸೆಟ್ ನಲ್ಲಿರುವವರ ಮೇಲೆ ಅವಾಚ್ಯ ಶಬ್ದದಿಂದ ನಿಂದಿಸಿದ್ದು, ಮಮತಾ ದೌರ್ಜನ್ಯವನ್ನು ಖಂಡಿಸಿ ಸೀರಿಯಲ್ ತಂಡ ಶೂಟಿಂಗ್ ನಿಲ್ಲಿಸಿದ್ದಾರೆ. ಅಲ್ಲದೇ ಹಲ್ಲೆಗೆ ಆಕ್ರೋಶ ವ್ಯಕ್ತಪಡಿಸಿ ಕ್ಷಮೆ ಕೇಳುವಂತೆ ಆಗ್ರಹಿಸಿದ್ದಾರೆ.