ಚಿಕ್ಕಮಗಳೂರು: ಎರಡು ಲಕ್ಷ ರೂಪಾಯಿ ಲಂಚ ಪಡೆಯುವ ವೇಳೆ ನಗರಾಭಿವೃದ್ಧಿ ಪ್ರಾಧಿಕಾರದ ಸಹಾಯಕ ಯೋಜನಾಧಿಕಾರಿ ಎಸಿಬಿ ಬಲೆಗೆ ಬಿದ್ದಿರೋ ಘಟನೆ ನಗರದಲ್ಲಿ ನಡೆದಿದೆ.
ಎಸಿಬಿ ಬಲೆಗೆ ಬಿದ್ದ ಅಧಿಕಾರಿಯನ್ನ ಎಂ.ಸಿ.ಶಿವಕುಮಾರ್ ಎಂದು ಗುರುತಿಸಲಾಗಿದೆ. ಲೇಔಟ್ ನಿರ್ಮಾಣ ವಿಚಾರ ಸಂಬಂಧ ಕಚೇರಿ ಪಕ್ಕದಲ್ಲೇ ಗೋಪಿನಾಥ್ ಅವರಿಂದ ಎರಡು ಲಕ್ಷ ಹಣ ಪಡೆದುಕೊಳ್ಳುವಾಗ ಎಸಿಬಿ ಅಧಿಕಾರಿಗಳಿಗೆ ರೆಡ್ ಹ್ಯಾಂಡಾಗಿ ಸಿಕ್ಕಿಬಿದ್ದಿದ್ದಾರೆ. ಇದನ್ನೂ ಓದಿ: ಈ ನಡುವೆ ಸರ್ಕಾರಗಳು ನ್ಯಾಯಾಂಗವನ್ನು ನಿಂದಿಸುವ ಪ್ರವೃತ್ತಿ ಆರಂಭಿಸಿವೆ: ಸಿಜೆಐ ಆಕ್ರೋಶ
Advertisement
Advertisement
ನಗರಾಭಿವೃದ್ಧಿ ಪ್ರಾಧಿಕಾರದ ವ್ಯಾಪ್ತಿಯಲ್ಲಿ ಲೇಔಟ್ ನಿರ್ಮಾಣದ ಸಂಬಂಧ ಎಂಟು ಲಕ್ಷಕ್ಕೆ ಮಾತುಕತೆ ಮಾಡಿಕೊಂಡು ಮುಂಗಡವಾಗಿ 2 ಲಕ್ಷ ಹಣ ಪಡೆದುಕೊಳ್ಳುವಾಗ ಎಸಿಬಿ ಅಧಿಕಾರಿಗಳ ಬಲೆಗೆ ಬಿದ್ದಿದ್ದಾರೆ. ದೂರುದಾರ ಗೋಪಿನಾಥ್ ಬ್ರೋಕರ್ ರಮೇಶ್ ಮೂಲಕ ಶಿವಕುಮಾರ್‌ನನ್ನು ಭೇಟಿ ಮಾಡಿದ್ದರು. ಎರಡು ಲಕ್ಷ ಹಣ ನೀಡುವಾಗ ನೇರವಾಗಿ ಸಿಕ್ಕಿಬಿದ್ದಿದ್ದು, ಎಸಿಬಿ ಅಧಿಕಾರಿಗಳು ಬ್ರೋಕರ್ ರಮೇಶ್ ಹಾಗೂ ನಗರಾಭಿವೃದ್ಧಿ ಪ್ರಾಧಿಕಾರದ ಸಹಾಯಕ ಯೋಜನಾ ಅಧಿಕಾರಿ ಶಿವಕುಮಾರ್ ಇಬ್ಬರನ್ನೂ ಅರೆಸ್ಟ್ ಮಾಡಿದ್ದಾರೆ. ಎಸಿಬಿ ಇನ್ಸ್‌ಪೆಕ್ಟರ್ ಅನಿಲ್ ರಾಥೋಡ್ ನೇತೃತ್ವದ ತಂಡ ದಾಳಿ ನಡೆಸಿತ್ತು.