ರಾಯಚೂರು: ಸಭೆಗೆ ತಡವಾಗಿ ಬಂದ ಸಹಾಯಕ ಆಯುಕ್ತನನ್ನು ರಾಯಚೂರು ಜಿಲ್ಲಾಧಿಕಾರಿ (Raichuru DC) ತರಾಟೆಗೆ ತೆಗೆದುಕೊಂಡು ಹೊರಗಡೆ ಕಳುಹಿಸಿದ ಪ್ರಸಂಗ ನಡೆದಿದೆ.
ಮುಂಗಾರು ಆರಂಭವಾಗುವ ಹಿನ್ನೆಲೆ ಮುಂಜಾಗ್ರತಾ ಕ್ರಮಗಳ ಕುರಿತು ಮುಂದಾಗಬಹುದಾದ ಮಳೆ ಹಾನಿ ಪರಸ್ಥಿತಿ ಎದುರಿಸಲು ಜಿಲ್ಲಾಧಿಕಾರಿ ಕಚೇರಿಯಲ್ಲಿ ಡಿಸಿ ನೇತೃತ್ವದ ಜಿಲ್ಲಾ ವಿಪತ್ತು ನಿರ್ವಹಣಾ ಸಮಿತಿಯ ಸಭೆಯನ್ನು ಕರೆಯಲಾಗಿತ್ತು. ಇದನ್ನೂ ಓದಿ: ಗ್ಯಾರಂಟಿ ಜಾರಿ ಯಾವಾಗ? – ಗೊಂದಲದಲ್ಲಿ ಮತದಾರ, ಬಿಲ್ ಕಟ್ಟಿ ಎನ್ನುತ್ತಿದೆ ಬೆಸ್ಕಾಂ
Advertisement
Advertisement
ಸಭೆಗೆ ರಾಯಚೂರು ಉಪವಿಭಾಗ ಸಹಾಯಕ ಆಯುಕ್ತ (Assistant Commissioner) ರಜನೀಕಾಂತ್ ಚವ್ಹಾಣ್ ತಡವಾಗಿ ಬಂದಿದ್ದಾರೆ. ಸಭೆಯ ಬಗ್ಗೆ ಮುಂಚಿತವಾಗಿ ತಿಳಿಸಿದ್ದರೂ ಸಹಾಯಕ ಆಯುಕ್ತರು ತಡವಾಗಿ ಬಂದಿದ್ದಕ್ಕೆ ಜಿಲ್ಲಾಧಿಕಾರಿ ಚಂದ್ರಶೇಖರ ನಾಯಕ್ ಗೆಟ್ ಔಟ್ ಎಂದು ಗದರಿದ್ದಾರೆ. ಅಧಿಕಾರಿಗಳ ಮುಂದೆ ಹೆಚ್ಚು ಮಾತು ಬೇಡ ಮೊದಲು ಸಭೆಯಲ್ಲಿ ಹೊರನಡೆಯಿರಿ ಎಂದು ಗದರಿಸಿ ಹೊರಗಡೆ ಕಳುಹಿಸಿದ್ದಾರೆ.