ಕಿಚ್ಚ ಸುದೀಪ್ (Sudeep) ಇಂದು ಬೆಳಗಾವಿ (Belgaum) ಜಿಲ್ಲೆಯ ಬಿಜೆಪಿ (BJP) ಅಭ್ಯರ್ಥಿಗಳ ಪರವಾಗಿ ಪ್ರಚಾರ ಮಾಡಲು ತೆರಳಿದ್ದಾರೆ. ಇಂದು ಒಟ್ಟು ನಾಲ್ಕು ಕ್ಷೇತ್ರಗಳಲ್ಲಿ ಅವರು ರೋಡ್ ಶೋ (Road Show) ನಡೆಸಬೇಕಿತ್ತು. ಅದರಲ್ಲಿ ಒಂದು ರದ್ದಾಗಿದೆ (Canceled). ಬೆಳಗಾವಿ ಜಿಲ್ಲೆಯ, ಬೆಳಗಾವಿ ಗ್ರಾಮೀಣ ಕ್ಷೇತ್ರ ಪ್ರಚಾರದ ರೋಡ್ ಶೋ ತಾರೀಹಾಳದಲ್ಲಿ ನಡೆಯಬೇಕಿತ್ತು. ಅದು ರದ್ದಾಗಿದೆ.
ಬೆಳಗ್ಗೆ 11.20ಕ್ಕೆ ಕಿತ್ತೂರು ಕ್ಷೇತ್ರದ ನೇಸರಗಿಯಲ್ಲಿ ಕಿಚ್ಚ ರೋಡ್ ಶೋ ನಡೆಸಿದರು. ಅದು ಮುಗಿಯುತ್ತಿದ್ದಂತೆಯೇ ಅವರು ತಾರೀಹಾಳ ಗ್ರಾಮಕ್ಕೆ ಹೋಗಬೇಕಿತ್ತು. ಆದರೆ, ಯುವಕನೊಬ್ಬನ ಹತ್ಯೆಯಾದ ಕಾರಣದಿಂದಾಗಿ ರೋಡ್ ಶೋ ರದ್ದಾಗಿದೆ. ಕ್ಷುಲ್ಲಕ ಕಾರಣಕ್ಕಾಗಿ ಯುವಕನೊಬ್ಬನ ಮರ್ಡರ್ ಆಗಿರುವ ಕಾರಣದಿಂದಾಗಿ ರದ್ದು ಪಡಿಸಲಾಗಿದೆ. ಇದನ್ನೂ ಓದಿ:ದೇಶವು ಸುರಕ್ಷಿತರ ಕೈಯಲ್ಲಿದೆ, ಭಯಪಡಬೇಕಿಲ್ಲ ಸಲ್ಮಾನ್ ಎಂದ ಕಂಗನಾ
ಮಧ್ಯಾಹ್ನ 1 ಗಂಟೆಗೆ ತಾರೀಹಾಳದಲ್ಲಿ ರೋಡ್ ಶೋ ನಡೆಯಬೇಕಿತ್ತು. ರದ್ದಾಗಿದ್ದರಿಂದ ಆ ಸಮಯದಲ್ಲಿ ಊಟ ಮುಗಿಸಿಕೊಂಡು ಯಮಕನಮರಡಿ ಕ್ಷೇತ್ರದ ಅಭ್ಯರ್ಥಿಯ ಪರವಾಗಿ ವಂಟಮೂರಿ ಗ್ರಾಮದಲ್ಲಿ ಕಿಚ್ಚ ರೋಡ್ ಶೋ ನಡೆಸಿದ್ದಾರೆ. ಅಲ್ಲಿಂದ ಬೆಳಗಾವಿ ಉತ್ತರ ಮತ್ತು ಬೆಳಗಾವಿ ದಕ್ಷಿಣ ಕ್ಷೇತ್ರದಲ್ಲಿ ಸುದೀಪ್ ರೋಡ್ ಶೋ ಮಾಡಬೇಕಿದೆ.
ಎರಡು ದಿನಗಳ ಹಿಂದೆಯೂ ಎರಡು ಕ್ಷೇತ್ರಗಳ ಪ್ರಚಾರದಲ್ಲಿ ಸುದೀಪ್ ಭಾಗಿಯಾಗಲು ಆಗಿರಲಿಲ್ಲ. ನವಲಗುಂದ ಮತ್ತು ಗದಗ ಕ್ಷೇತ್ರಗಳಿಗೆ ನಿಗದಿ ಆಗಿದ್ದ ಕಾರ್ಯಕ್ರಮದಲ್ಲಿ ವ್ಯತ್ಯಾಸವುಂಟಾಗಿದ್ದರಿಂದ ಆ ಎರಡೂ ರೋಡ್ ಶೋಗಳು ಮೊನ್ನೆಯಷ್ಟೇ ರದ್ದಾಗಿದ್ದವು. ಎರಡು ದಿನಗಳ ಕಾಲ ವಿಶ್ರಾಂತಿ ಪಡೆದುಕೊಂಡು ಮತ್ತೆ ಇಂದು ಸುದೀಪ್ ಪ್ರಚಾರಕ್ಕೆ ತೆರಳಿದ್ದರು.