ನವದೆಹಲಿ: ಜಮ್ಮು ಮತ್ತು ಕಾಶ್ಮೀರ ಹಾಗೂ ಹರಿಯಾಣ ಚುನಾವಣಾ ಫಲಿತಾಂಶ (Election Results Haryana 2024) ಮಂಗಳವಾರ (ಅ.8) ಹೊರಬೀಳಲಿದೆ. 10 ವರ್ಷಗಳ ಬಳಿಕ, ಆರ್ಟಿಕಲ್ 370 ರದ್ದಾ ಬಳಿಕ ಕಣಿವೆನಾಡಲ್ಲಿ ನಡೆದ ಮೊದಲ ವಿಧಾನಸಭಾ ಚುನಾವಣೆಯಲ್ಲಿ ಗೆಲ್ಲೋದು ಯಾರು? ಬಿಜೆಪಿನಾ? ಎನ್‌ಸಿ-ಕಾಂಗ್ರೆಸ್ (Congress-NC) ಮೈತ್ರಿಕೂಟನಾ? ಅಥ್ವಾ ಪಿಡಿಪಿನಾ ಎಂಬ ಪ್ರಶ್ನೆಗೆ ಮಂಗಳವಾರ ನಿಖರ ಉತ್ತರ ಸಿಗಲಿದೆ.
Advertisement
ಜಮ್ಮು ಮತ್ತು ಕಾಶ್ಮೀರದಲ್ಲಿ (Jammu And Kashmir) ಯಾವುದೇ ಪಕ್ಷಕ್ಕೆ ಬಹುಮತ ಬರಲ್ಲ ಎಂದು ಮತಗಟ್ಟೆ ಸಮೀಕ್ಷೆಗಳು ಹೇಳಿದ್ರೂ, ಇಂಡಿಯಾ ಮೈತ್ರಿ ಕೂಟ ಮತ್ತು ಬಿಜೆಪಿ ಮಾತ್ರ ತಮ್ಮದೇ ಅಧಿಕಾರ ಎಂಬ ವಿಶ್ವಾಸದಲ್ಲಿವೆ. ಮತ್ತೊಂದು ಕಡೆ, ಇಂಡಿಯಾ ಕೂಟ, ಮೆಹಬೂಬಾ ಮುಫ್ತಿ ಬೆಂಬಲದ ನಿರೀಕ್ಷೆಯಲ್ಲಿದೆ. ಆದ್ರೆ, ಯಾರೇ ಗೆದ್ರೂ ಜಮ್ಮು ಮತ್ತು ಕಾಶ್ಮೀರಕ್ಕೆ ರಾಜ್ಯ ಸ್ಥಾನಮಾನ ಸಿಗೋವರೆಗೂ ಸರ್ಕಾರ ರಚಿಸಬಾರದು ಎಂದು ಸಂಸದ ಎಂಜಿನಿಯರ್ ರಶೀದ್ ಒತ್ತಾಯಿಸಿದ್ದಾರೆ. ಇದನ್ನೂ ಓದಿ: Exit Poll Results: ಹರಿಯಾಣದಲ್ಲಿ ಬಿಜೆಪಿ ಹ್ಯಾಟ್ರಿಕ್ ಕನಸು ಭಗ್ನ – ಕಾಂಗ್ರೆಸ್ ಅಧಿಕಾರಕ್ಕೆ
Advertisement
Advertisement
ಇನ್ನೂ ಹರಿಯಾಣ ಫಲಿತಾಂಶವೂ ಸಾಕಷ್ಟು ಕುತೂಹಲ ಕೆರಳಿಸಿದೆ. 10 ವರ್ಷದಿಂದ ಆಡಳಿತದಲ್ಲಿರುವ ಬಿಜೆಪಿ ಮತ್ತೆ ಅಧಿಕಾರ ಉಳಿಸಿಕೊಳ್ಳುತ್ತಾ? ವಿಪಕ್ಷ ಕಾಂಗ್ರೆಸ್ ಗೆದ್ದು ಆಡಳಿತದ ಚುಕ್ಕಾಣಿ ಹಿಡಿಯುತ್ತಾ ಎಂಬುದು ಕುತೂಹಲಕಾರಿ ಅಂಶ. ಇದ್ರ ಮಧ್ಯೆ ಎಕ್ಸಿಟ್ ಪೋಲ್‌ಗಳೆಲ್ಲಾ ಕಾಂಗ್ರೆಸ್ ಗೆಲ್ಲುತ್ತೆ ಎಂದು ಭವಿಷ್ಯ ನುಡಿದಿದ್ದು, ಇದು ನಿಜವಾಗುತ್ತಾ ಅನ್ನೋದು ಗೊತ್ತಾಗಲಿದೆ. ಇದನ್ನೂ ಓದಿ: Exit Poll Result | ಜಮ್ಮು-ಕಾಶ್ಮೀರದಲ್ಲಿ ಕಾಂಗ್ರೆಸ್-ಎನ್‌ಸಿ ಮೈತ್ರಿಕೂಟಕ್ಕೆ ಅಧಿಕಾರ – ಬಿಜೆಪಿಗೆ ಹಿಂದಿಗಿಂತ ಹೆಚ್ಚು ಸ್ಥಾನ
Advertisement
ಹರಿಯಾಣ ಚುನಾವಣೋತ್ತರ ಸಮೀಕ್ಷೆ ಹೇಗಿದೆ?
ಮ್ಯಾಟ್ರಿಜ್ ಸಮೀಕ್ಷೆ: ಕಾಂಗ್ರೆಸ್ 55-62, ಬಿಜೆಪಿ 18-24, ಐಎನ್ಎಲ್ಡಿ 3-6, ಜೆಜೆಪಿ 03, ಇತರರು 2-5
ಎಬಿಪಿ ಸಮೀಕ್ಷೆ: ಕಾಂಗ್ರೆಸ್ – 57, ಬಿಜೆಪಿ – 27, ಇತರೆ – 06
ದೈನಿಕ್ ಭಾಸ್ಕರ್: ಕಾಂಗ್ರೆಸ್ 44-54, ಬಿಜೆಪಿ 19-29, ಐಎನ್ಎಲ್ಡಿ 1-5, ಜೆಜೆಪಿ- 1, ಇತರರು 4-10
ಜಮ್ಮು ಮತ್ತು ಕಾಶ್ಮೀರ ಚುನಾವಣೋತ್ತರ ಸಮೀಕ್ಷೆ ಹೇಗಿದೆ?
ಸಿ ವೋಟರ್ – ಆಜ್ ತಕ್
ಕಾಂಗ್ರೆಸ್ + ಎನ್‌ಸಿ – 11-15
ಬಿಜೆಪಿ – 27-31
ಪಿಡಿಪಿ – 02
ಇತರೆ – 01
ದೈನಿಕ್ ಬಾಸ್ಕರ್
ಕಾಂಗ್ರೆಸ್ + ಎನ್‌ಸಿ – 35-40
ಬಿಜೆಪಿ – 20-25
ಪಿಡಿಪಿ – 4-7
ಇತರೆ – 12-16
ಪೀಪಲ್ ಪ್ಲಸ್
ಕಾಂಗ್ರೆಸ್ + ಎನ್‌ಸಿ – 40-48
ಬಿಜೆಪಿ – 27-32
ಪಿಡಿಪಿ – 7-11
ಇತರೆ – 4-6
ಇಂಡಿಯಾ ಟುಡೆ- ಸಿ ವೋಟರ್
ಕಾಂಗ್ರೆಸ್ + ಎನ್‌ಸಿ – 40-48
ಬಿಜೆಪಿ – 27-32
ಪಿಡಿಪಿ – 6-12
ಇತರೆ – 6-11