ಬೆಂಗಳೂರು : ಈ ಬಾರಿ ವಿಧಾನಸಭೆ ಚುನಾವಣೆ (Assembly Election 2023) ಹತ್ತು ಹಲವು ವಿಶೇಷಗಳಿಂದ ಕೂಡಿತ್ತು. ಕುಟುಂಬ ರಾಜಕಾರಣದ ಬಗ್ಗೆ ಬಹುತೇಕ ಪಕ್ಷಗಳು ಭಾಷಣ ಮಾಡಿದ್ದರೂ, ಗೆಲ್ಲುವ ಹಿತದೃಷ್ಟಿಯಿಂದ ಒಂದೇ ಕುಟುಂಬಕ್ಕೆ ಟಿಕೆಟ್ ನೀಡಿದ ಉದಾಹರಣೆಗಳು ಇವೆ. ಅದರಲ್ಲೂ ತಂದೆ (Dad) ಮಗ (Sons) ಅಥವಾ ತಂದೆ ಮಗಳಿಗೆ ಟಿಕೆಟ್ ನೀಡುವ ಮೂಲಕ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದವು ಆಯಾ ಪಕ್ಷಗಳು. ಈ ಬಾರಿ ಯಾವ ಕ್ಷೇತ್ರದಲ್ಲಿ ಯಾರೆಲ್ಲ ಅಪ್ಪ ಮಕ್ಕಳು ಅಭ್ಯರ್ಥಿಯಾಗಿದ್ದರು? ಯಾರು ಸೋತಿದ್ದಾರೆ, ಯಾರು ಗೆದ್ದಿದ್ದಾರೆ ಎನ್ನುವ ಲೆಕ್ಕಾಚಾರ ಇಲ್ಲಿದೆ.
Advertisement
ಅರಕಲಗೂಡಿನಲ್ಲಿ ಜೆಡಿಎಸ್ (JDS) ನಿಂದ ಎ. ಮಂಜು ಜಯಗಳಿಸಿದ್ದರೆ, ಬಿಜೆಪಿಯ ಭದ್ರ ಕೋಟೆ ಎನಿಸಿದ್ದ ಮಡಿಕೇರಿಯಲ್ಲಿ ಅವರ ಮಗ ಕಾಂಗ್ರೆಸ್ (Congress) ನಿಂದ ಡಾ. ಮಂಥರ್ ಗೌಡ ಜಯಗಳಿಸಿದ್ದಾರೆ. ಇಬ್ಬರೂ ಬೇರೆ ಬೇರೆ ಪಕ್ಷಗಳಿಂದ ಸ್ಪರ್ಧಿಸಿ ಗೆಲುವು ಸಾಧಿಸಿರುವುದು ವಿಶೇಷ. ಜೆಡಿಎಸ್ ರಾಜಾಧ್ಯಕ್ಷ ಮಾಜಿ ಮುಖ್ಯಮಂತಿ ಹೆಚ್.ಡಿ. ಕುಮಾರ ಸ್ವಾಮಿ ಚನ್ನಪಟ್ಟಣದಲ್ಲಿ ಅತ್ಯಲ್ಪ ಮತಗಳ ಅಂತರದಲ್ಲಿ ಗೆಲುವು ಸಾಧಿಸಿದರೆ, ಮಗ ನಿಖಿಲ್ ಕುಮಾರ ಸ್ವಾಮಿ ಭಾರೀ ಮತಗಳ ಅಂತರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಇಕ್ಬಾಲ್ ಎದುರು ಸೋಲು ಕಂಡಿದ್ದಾರೆ.
Advertisement
Advertisement
ಈ ಹಿಂದೆ ಜೆಡಿಎಸ್ ರಾಜಾಧ್ಯಕ್ಷರಾಗಿದ್ದ ಹಾಗೂ ಹಾಲಿ ಶಾಸಕ ಜಿ.ಟಿ. ದೇವೇಗೌಡ ಅವರು ಚಾಮುಂಡೇಶ್ವರಿ ಕ್ಷೇತ್ರದಿಂದ ಜಯಗಳಿಸಿದರೆ, ಅವರ ಮಗ ಜಿ. ಡಿ. ಹರೀಶ್ ಗೌಡ ಅವರು ಜೆಡಿಎಸ್ ನಿಂದ ಹುಣಸೂರು ಕ್ಷೇತ್ರದಲ್ಲಿ ಗೆಲುವು ಸಾಧಿಸಿದ್ದಾರೆ. ಬೆಂಗಳೂರಿನ ವಿಜಯನಗರ ಕ್ಷೇತ್ರದಿಂದ ಎಂ. ಕೃಷ್ಣ ಅವರು ಕಾಂಗ್ರೆಸ್ ನಿಂದ ಮತ್ತು ಅವರ ಮಗ ಪ್ರಿಯಾ ಕೃಷ್ಣ ಅವರು ಗೋವಿಂದರಾಜ ನಗರ ಕ್ಷೇತ್ರದಿಂದ ಸ್ಪರ್ಧಿಸಿದ್ದರು ಇಬ್ಬರೂ ಜಯ ಸಾಧಿಸಿದ್ದಾರೆ.
Advertisement
ಈ ಬಾರಿಯ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಅತೀ ಹಿರಿಯ ಸ್ಪರ್ಧಿ 91 ವರ್ಷದ ಶಾಮನೂರು ಶಿವಶಂಕರಪ್ಪ ಅವರು ದಾವಣಗೆರೆ ದಕ್ಷಿಣ ಕ್ಷೇತ್ರದಿಂದ ಮತ್ತು ದಾವಣಗೆರೆ ಉತ್ತರ ಕ್ಷೇತ್ರದಿಂದ ಅವರ ಮಗ ಎಸ್.ಎಸ್. ಮಲ್ಲಿಕಾರ್ಜುನ ಅವರು ಜಯಗಳಿಸಿದ್ದಾರೆ. ಇಬ್ಬರೂ ಕೂಡ ಕಾಂಗ್ರೆಸ್ ನಿಂದ ಗೆಲುವು ಸಾಧಿಸಿದ್ದಾರೆ. ಇದನ್ನೂ ಓದಿ: Karnataka Election 2023 Result – ಕಾಂಗ್ರೆಸ್ 135, ಬಿಜೆಪಿ 65, ಜೆಡಿಎಸ್ 20 ಮುನ್ನಡೆ LIVE Updates
ಬೆಂಗಳೂರಿನ ಬಿಟಿಎಂ ಲೇಔಟ್ ನಿಂದ ರಾಮಲಿಂಗ ರೆಡ್ಡಿ ಅವರು ಕಾಂಗ್ರೆಸ್ ನಿಂದ ಜಯಗಳಿಸಿದ್ದರೆ ಅವರ ಮಗಳ ಸೌಮ್ಯ ರೆಡ್ಡಿ ಅವರು ಕಾಂಗ್ರೆಸ್ ನಿಂದ ಅತ್ಯಲ್ಪ 160 ಮತಗಳ ಅಂತರದಿಂದ ಜಯಗಳಿಸಿದ್ದಾರೆ. ದೇವನಹಳ್ಳಿ ಕ್ಷೇತ್ರದಿಂದ ಮುನಿಯಪ್ಪ ಗೆಲುವಿನ ನಗೆ ಬೀರಿದಿದ್ದಾರೆ. ಅವರ ಪುತ್ರಿ ರೂಪಾ ಶಶಿಧರ್ ಕೆಜಿಎಫ್ ಕ್ಷೇತ್ರದಿಂದ ಗೆಲುವು ಸಾಧಿಸಿದ್ದಾರೆ.