ಯಾದಗಿರಿ: ರಾಜ್ಯದಲ್ಲಿ ಮಕ್ಕಳ ಕಳ್ಳತನ ವದಂತಿ ವ್ಯಾಪಕವಾಗಿ ಹರಡಿದ ಹಿನ್ನೆಲೆಯಲ್ಲಿ ಮೂರು ಜನರಿಗೆ ಮಕ್ಕಳ ಕಳ್ಳರೆಂಬ ಸಂಶಯದಿಂದ ಗ್ರಾಮಸ್ಥರು ಅಮಾನವೀಯ ರೀತಿಯಲ್ಲಿ ಥಳಿಸಿದ್ದಾರೆ.
ಈ ಘಟನೆ ಯಾದಗಿರಿ ಜಿಲ್ಲೆಯ ಗುರಮಠಕಲ್ ತಾಲೂಕಿನ ಗುಂಜನೂರ ಗ್ರಾಮದಲ್ಲಿ ನಡೆದಿದೆ. ವಿಕಾರಬಾದ ಮೂಲದ ಬಾಲಕೃಷ್ಣ ಸೇರಿದಂತೆ ಇನ್ನೂ ಇಬ್ಬರಿಗೆ ಗ್ರಾಮಸ್ಥರು ಧಳಿಸಿದ್ದಾರೆ.
ಗಂಧದ ಮರ ಕಳ್ಳತನಕ್ಕೆ ಗುಂಜನೂರ ಗ್ರಾಮಕ್ಕೆ ಕೋಡ್ಲಿ ಜೊತೆ ಮಕ್ಕಳು ಬಂದಿದ್ದಾರೆ ಅಂತ ಬಾಲಕೃಷ್ಣ ಹೇಳಿದ್ದಾನೆ. ಇನ್ನೂ ಆ ಗ್ರಾಮದಲ್ಲಿ ಯಾವುದೇ ಗಂಧದ ಮರಗಳು ಇಲ್ಲ. ಹಾಗಾಗಿ ಮಕ್ಕಳ ಕಳ್ಳರೆಂಬ ಸಂಶಯದಿಂದ ಗ್ರಾಮಸ್ಥರು ಸೇರಿ ಮನಬಂದಂತೆ ಧಳಿಸಿದ್ದಾರೆ.
ಸ್ಥಳಕ್ಕೆ ಗುಂಪು ಚದರಿಸಲು ಗುರಮಠಕಲ್ ಪೊಲೀಸರು ಬಂದಿರುವ ವಾಹನ ಜಖಂ ಆಗಿದೆ. ಸದ್ಯ ಥಳಿತಕ್ಕೊಳಗಾದ ಮೂವರನ್ನು ಪೊಲೀಸರು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಿದ್ದಾರೆ.