ತುಮಕೂರು: ಪ್ರತಿಭಟನಾ ನಿರತ ಕಾಂಗ್ರೆಸ್ ಮುಖಂಡನ ಮೇಲೆ ಹಲ್ಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಗುಬ್ಬಿ ಶಾಸಕ ಎಸ್.ಆರ್ ಶ್ರೀನಿವಾಸ್ (Gubbi MLA S.R Srinivas) ಮೇಲೆ ಎಫ್‍ಐಆರ್ ದಾಖಲಾಗಿದೆ.
ಟೆಂಡರ್ ಕಾಮಗಾರಿಯಲ್ಲಿ ಅನ್ಯಾಯ ನಡೆದಿದೆ ಎಂದು ಕಳೆದ ಗುರುವಾರ ರಾತ್ರಿ ಪಿಡಬ್ಲ್ಯೂಡಿ ಇಲಾಖೆ ಕಚೇರಿ ಮುಂಭಾಗ ಕಾಂಗ್ರೆಸ್ ಮುಖಂಡ ರಾಯಸಂದ್ರ ರವಿಕುಮಾರ್ ಧರಣಿಗೆ ಕುಳಿತಿದ್ದರು. ಈ ವೇಳೆ ಅವರ ಮೇಲೆ ಶಾಸಕ ಹಾಗೂ ಅವರ ಸಹಚರರು ಏಕಾಏಕಿ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಈ ಸಂಬಂಧ ರವಿಕುಮಾರ್ ನೀಡಿದ ದೂರಿನಡಿ ತುಮಕೂರಿನ (Tumkur) ತಿಲಕ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ (Tilak Park Police Station) ಎಫ್‍ಐಆರ್ ದಾಖಲಾಗಿದೆ. ಇದನ್ನೂ ಓದಿ: ಮದುವೆಗೆ ನಿರಾಕರಿಸಿದ ಪ್ರಿಯಕರ – ಮನನೊಂದ ಯುವತಿ ಕೆರೆಗೆ ಹಾರಿ ಆತ್ಮಹತ್ಯೆ
Advertisement
Advertisement
ಐಪಿಸಿ ಸೆಕ್ಷನ್ 323 ಹಲ್ಲೆ, 363 ಕೊಲೆ ಯತ್ನ, 504 ಉದ್ದೇಶಪೂರ್ವಕ ಅವಮಾನ ಹಾಗೂ ಶಾಂತಿಭಂಗ ಸೇರಿದಂತೆ ಸೆಕ್ಷನ್ 511, 506,143, 149, ಅಡಿಯಲ್ಲಿ ಎಫ್‍ಐಆರ್ ದಾಖಲಾಗಿದೆ. ಪ್ರಕರಣದಲ್ಲಿ ಶಾಸಕ ಶ್ರೀನಿವಾಸ್ 1ನೇ ಆರೋಪಿಯಾಗಿದ್ದು, 10 ಜನ ಬೆಂಬಲಿಗರ ಮೇಲೆ ಎಫ್‍ಐಆರ್ ದಾಖಲಾಗಿದೆ. ಈ ಸಂಬಂಧ ತಿಲಕ್ ಪಾರ್ಕ್ ಪೊಲೀಸರಿಂದ ತನಿಖೆ ನಡೆಯುತ್ತಿದೆ. ಇದನ್ನೂ ಓದಿ: ಉಜ್ಬೇಕಿಸ್ತಾನ್ ಮಹಿಳೆ ಕೊಲೆ ಕೇಸ್; ಹಣದಾಸೆಗೆ ನಡೆದಿತ್ತು ಕೃತ್ಯ – ಕೇರಳದಲ್ಲಿ ಇಬ್ಬರ ಬಂಧನ