ಹುಬ್ಬಳ್ಳಿ: ಯುವಕನನ್ನು ಹತ್ಯೆಗೈದು ಪೊಲೀಸರಿಂದ ಕೆಲವೇ ಗಂಟೆಗಳಲ್ಲಿ ಬಂಧಿತರಾಗಿದ್ದ ಇಬ್ಬರು ಆರೋಪಿಗಳಿಗೆ ಹುಬ್ಬಳ್ಳಿ ಪೊಲೀಸರು ಗುಂಡೇಟು ನಿಡಿದ್ದಾರೆ.
ಆರೋಪಿಗಳಾದ ಸುದೀಪ್ ಮತ್ತು ಕಿರಣ್ ಸೇರಿ ಶಿವು ಚಂದ್ರಶೇಖರ ಕಮ್ಮಾರ ಎಂಬಾತನನ್ನು ಚಾಕು ಇರಿದು ಹತ್ಯೆಗೈದಿದ್ದರು. ಹತ್ಯೆ ನಡೆದ ಕೆಲವೇ ಗಂಟೆಗಳಲ್ಲಿ ಪೊಲೀಸರು ಇಬ್ಬರನ್ನು ಬಂಧಿಸಿದ್ದರು. ಇಬ್ಬರು ಸೇರಿ ಉಳಿದ ಆರೋಪಿಗಳನ್ನು ತೋರಿಸುವುದಾಗಿ ಕರೆದೊಯ್ದು ಪೊಲೀಸರ ಮೇಲೆ ಹಲ್ಲೆಗೆ ಮುಂದಾಗಿ ಪರಾರಿಯಾಗಲು ಯತ್ನಿಸಿದ್ದಾರೆ. ಈ ವೇಳೆ ಇಬ್ಬರ ಕಾಲಿಗೂ ಪೊಲೀಸರು ಗುಂಡೇಟು ನೀಡಿದ್ದಾರೆ.
ನಗರದ ಹಳೆ ಹುಬ್ಬಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ಹೊರವಲಯದಲ್ಲಿ ಈ ಘಟನೆ ನಡೆದಿದೆ. ಇಬ್ಬರು ಆರೋಪಿಗಳನ್ನು ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಶುಕ್ರವಾರ ರಾತ್ರಿ ಗೋಪನಕೊಪ್ಪದ ಬಳಿ ಆರೋಪಿಗಳು ಕೊಲೆಗೈದಿದ್ದರು. ಈ ಸಂಬಂಧ ಅಶೋಕ ನಗರ ಪೊಲೀಸರು ಇಬ್ಬರನ್ನು ಬಂಧಿಸಿದ್ದರು.