ಬೆಂಗಳೂರು: ಅಕ್ಕಿ ಚೆಲ್ಲಿದರೆಂದು ಮದರಸಾದ ಕಚೇರಿಗೆ ಕರೆದು ಬಾಲಕಿಯರ ಮೇಲೆ ಹಲ್ಲೆ ಮಾಡಿರುವ ಘಟನೆ ಬೆಂಗಳೂರಿನ ಹೆಗಡೆ ನಗರದಲ್ಲಿರುವ ಜಾಮೀಯ ಆಯೀಷ ಸಿದ್ದಿಕಾ ಆಲ್ ಬನಾತ್‌ನಲ್ಲಿ ನಡೆದಿದೆ.
ಆರೋಪಿಯನ್ನು ಮೊಹಮ್ಮದ್ (19) ಹಸನ್ ಅಲಿ ಎಂದು ಗುರುತಿಸಲಾಗಿದೆ. ಮದರಸಾದ ಪ್ರಾಂಶುಪಾಲರ ಸಂಬಂಧಿಯಾಗಿದ್ದು, ಅವರ ಸಲುಗೆಯ ಮೇರೆಗೆ ಮದರಸಾಗೆ ಬಂದಿದ್ದ, ಈ ವೇಳೆ ಅಕ್ಕಿ ಚೆಲ್ಲಿದ್ದಾರೆ, ಇತರ ಮಕ್ಕಳ ಜೊತೆ ಕೀಟಲೆ ಮಾಡಿದ್ದಾರೆಂದು ತಿಳಿದು ಬಾಲಕಿಯರನ್ನು ಕಚೇರಿಗೆ ಕರೆದು, ಕಾಲಿನಿಂದ ಒದ್ದು ಹಲ್ಲೆ ನಡೆಸಿದ್ದಾನೆ. ಹಲ್ಲೆ ಮಾಡಿರುವ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದೆ.ಇದನ್ನೂ ಓದಿ: ಮೈಸೂರಿನ ಉದಯಗಿರಿ ಠಾಣೆ ಗಲಭೆ ಕೇಸ್ – 11 ದಿನಗಳ ಬಳಿಕ ಪ್ರಚೋದನೆ ನೀಡಿದ್ದ ಮೌಲ್ವಿ ಅರೆಸ್ಟ್
Advertisement
Advertisement
ಇನ್ನೂ ಈ ಮದರಸಾವನ್ನು ಲೈಸೆನ್ಸ್ ಇಲ್ಲದೆ ನಡೆಸುತ್ತಿದ್ದು, ನೂರಾರು ಮಕ್ಕಳನ್ನು ಕೂಡಿಟ್ಟಿದ್ದಾರೆ ಎನ್ನುವ ಆರೋಪಗಳು ಕೂಡ ಕೇಳಿ ಬಂದಿವೆ. ಹಲ್ಲೆ ನಡೆಸಿದ ವಿಚಾರ ಯಾವಾಗ ಪೋಷಕರಿಗೆ ಗೊತ್ತಾಗಿದೆಯೂ, ಆಗ ಮದರಸಾದವರು ಆರೋಪಿಗೆ ಗೂಸ ಕೊಟ್ಟಿದ್ದಾರೆ. ಒಂದೆರಡು ದಿನಗಳ ಬಳಿಕ ಕೇಸು, ಕಂಪ್ಲೆಂಟ್ ಬೇಡ ಎಂದು ಮಸೀದಿಯೊಂದಕ್ಕೆ ರಾಜಿ ಸಂಧಾನಕ್ಕಾಗಿ ಕರೆದಿದ್ದಾರೆ. ರಾಜಿ ಸಂಧಾನಕ್ಕೆ ಹೋದ ವೇಳೆ ಆರೋಪಿ ಮೊಹಮದ್ ಹಸನ್‌ಗೆ ಪೋಷಕರು ಹಾಗೂ ಸಂಬಂಧಿಕರು ಹೊಡೆದಿದ್ದಾರೆ.
Advertisement
ಬಳಿಕ ಬಾಲಕಿಯರ ಪೋಷಕರು ಮದರಸಾ ಮುಂದೆ ಗಲಾಟೆ ನಡೆಸಿದ್ದು, ಕಮೀಷನರ್, ಎಸಿಪಿ, ಡಿಸಿಪಿ ನ್ಯಾಯ ಕೊಡಿಸಬೇಕು, ಆರೋಪಿಗೆ ಶಿಕ್ಷೆ ಆಗಬೇಕೆಂದು ಆಗ್ರಹಿಸಿದ್ದಾರೆ. ಆರೋಪಿಯನ್ನು ಕೊತ್ತನೂರು ಪೊಲೀಸರು ಬಂಧಿಸಿದ್ದು, ಬಿಎನ್‌ಎಸ್ 115, ಅಮಡ್ 75 ಆಫ್ ಜೆಜೆ ಆಕ್ಟ್ ಸೆಕ್ಷನ್ ಅಡಿಯಲ್ಲಿ ದೂರು ದಾಖಲಿಸಿಕೊಂಡಿದ್ದಾರೆ.
Advertisement
ಈ ಕುರಿತು ಡಿಸಿಪಿ ಮಾತನಾಡಿ, ಥಣೀಸಂದ್ರದಲ್ಲಿ 2021ರಿಂದ ಮದರಸಾ ನಡೆಸಲಾಗುತ್ತಿದೆ. ಇಲ್ಲಿ 200 ಮಕ್ಕಳ ವಿದ್ಯಾಭ್ಯಾಸ ನಡೆಯುತ್ತಿದೆ. ಈ ಮದರಸಾವನ್ನು ಒಬ್ಬ ತಂದೆ ಹಾಗೂ ಇಬ್ಬರು ಮಕ್ಕಳು ನಡೆಸುತ್ತಿದ್ದಾರೆ. ಬುಧವಾರ ರಾತ್ರಿ ಎಫ್‌ಐಆರ್ ದಾಖಲಿಸಿದ್ದೇವೆ. ಆರೋಪಿ ಮೊಹಮ್ಮದ್ ಹಸನ್ ಅಲಿ ಬಂಧನ ಮಾಡಿದ್ದೇವೆ. ಈತ ಮದರಸಾ ಆಡಳಿತದಲ್ಲಿ ಸದಸ್ಯನಾಗಿದ್ದು, ಆತನ ಸಹೋದರಿ ನಿಶಾ ಪ್ರಾಂಶುಪಾಲರಾಗಿದ್ದಾರೆ. ಸಹೋದರಿ ಸಲುಗೆಯಿಂದ ಒಳಗೆ ಹೋಗಿದ್ದಾನೆ. ಬಳಿಕ ಏಕಾಏಕಿ ನಾಲ್ಕೈದು ಮಕ್ಕಳಿಗೆ ಕೈಯಿಂದ ಹಲ್ಲೆ ಮಾಡಿದ್ದಾನೆ. ಸದ್ಯ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದು, CWC ಕಮಿಟಿಯವರಿಗೆ ಪತ್ರ ಬರೆದು ಒಳಗೆ ಏನು ನಡೆದಿದೆ ಎಂಬ ಬಗ್ಗೆ ಮಾಹಿತಿ ಕಲೆ ಹಾಕಲು ತಿಳಿಸಿದ್ದೇವೆ. ಅವರ ರಿಪೋರ್ಟ್ ಆಧರಿಸಿ ಮುಂದಿನ ಕ್ರಮ ಕೈಗೊಳ್ಳುತ್ತೇವೆ ಎಂದು ಸ್ಪಷ್ಟನೆ ನೀಡಿದ್ದಾರೆ.
ಇನ್ನೂ ಈ ಕುರಿತು ಈಶಾನ್ಯ ವಿಭಾಗದ ಡಿಸಿಪಿ ಸಜೀತ್ ಮಾತನಾಡಿ, ಕೊತ್ತನೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬಾಲಕಿಯರ ಮದರಸಾ ಶಿಕ್ಷಣ ಸಂಸ್ಥೆ ಇದೆ. ಆರೋಪಿಯನ್ನು ಮದರಸಾ ಮಾಲೀಕನ ಮಗ ಎಂದು ತಿಳಿಯಲಾಗಿದ್ದು, ಶಿಕ್ಷಣ ಹೇಳಿ ಕೊಡುವ ನೆಪದಲ್ಲಿ ಬಂದು ಬಾಲಕಿಯರ ಮೇಲೆ ಹಲ್ಲೆ ನಡೆಸಿದ್ದಾನೆ ಎಂದು ಪೋಷಕರು ದೂರು ನೀಡಿದ್ದಾರೆ. ಈಗಾಗಲೇ ಆತನನ್ನು ಬಂಧಿಸಲಾಗಿದೆ. ಟ್ರಸ್ಟ್‌ನ ಅಡಿಯಲ್ಲಿ ಮದರಸಾ ಕಾರ್ಯನಿರ್ವಹಿಸುತ್ತಿದ್ದು, ಆರೋಪಿ ಶಿಕ್ಷಣ ಹೇಳಿಕೊಡುವ ನೆಪದಲ್ಲಿ ಕೃತ್ಯ ಎಸಗಿದ್ದಾನೆ ಎಂದು ತಿಳಿಸಿದ್ದಾರೆ..ಇದನ್ನೂ ಓದಿ: ಚಿನ್ನದಂಗಡಿ ದೋಚಿ ಸಲೀಸಾಗಿ ನಾಕಬಂದಿ ದಾಟಿದ ಕಳ್ಳರು – ಮೂವರು ಪೊಲೀಸರು ಸಸ್ಪೆಂಡ್