ರಾಮನಗರ: ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ಜನಪ್ರಿಯ ರಿಯಾಲಿಟಿ ಶೋ ಬಿಗ್‌ಬಾಸ್ (Bigg Boss Kannada 12) ಸ್ಪರ್ಧಿ ಗಿಲ್ಲಿನಟನ (Gilli Nata) ಮೇಲೆ ಸಹ ಸ್ಪರ್ಧಿ ರಿಷಾ ಗೌಡ (Risha Gowda) ಹಲ್ಲೆ ಮಾಡಿದ್ದು, ಆಕೆಯ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೋರಿ ಗಿಲ್ಲಿ ನಟನ ಅಭಿಮಾನಿಗಳು ರಾಮನಗರ ಜಿಲ್ಲಾ ಸಿಇಎನ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಗಿಲ್ಲಿ ನಟನ ಅಭಿಮಾನಿಗಳ ಪರವಾಗಿ ಮಧು ಎಂಬವರು ಸಿಇಎನ್ ಪೊಲೀಸ್ ಠಾಣೆಯಲ್ಲಿ (CEN Police Station) ದೂರು ನೀಡಿದ್ದು, ರಿಷಾಗೌಡ, ಗಿಲ್ಲಿ ನಟನ ಮೇಲೆ ಹಲ್ಲೆ ಮಾಡಿದ್ದಾರೆ. ಅವರ ವಿರುದ್ಧ ಕ್ರಮ ಕೈಗೊಳ್ಳಬೇಕಾದ ಬಿಗ್‌ಬಾಸ್ ಆಯೋಜಕರು ಸುಮ್ಮನಾಗಿದ್ದಾರೆ ಎಂದು ಅಸಮಾಧಾನ ಹೊರಹಾಕಿದ್ದಾರೆ. ಇದನ್ನೂ ಓದಿ: ಹಿಜಾಬ್ ಏಕೆ ಧರಿಸಿಲ್ಲ? ಎಷ್ಟು ಬಾರಿ ನಮಾಜ್ ಮಾಡ್ತಿಯಾ? – ರೋಗಿಗಳಿಗೆ ಹೀಗೆಲ್ಲ ಪ್ರಶ್ನಿಸುತ್ತಿದ್ದ ಉಮರ್
ಆದರೆ ಗಿಲ್ಲಿ ನಟನ ಅಭಿಮಾನಿಗಳಾದ ನಾವು ಸುಮ್ಮನಿರುವುದಿಲ್ಲ. ರಿಷಾ ಗೌಡ ವಿರುದ್ಧ ಕಾನೂನು ಕ್ರಮ ಜರುಗಿಸಬೇಕೆಂದು ಪೊಲೀಸರಿಗೆ ಮನವಿ ಮಾಡಿದ್ದಾರೆ. ಇದನ್ನೂ ಓದಿ: ಪ್ರವಾಸಿಗನ ಎಡವಟ್ಟಿಗೆ ಸುಟ್ಟುಹೋಯ್ತು 1500 ವರ್ಷಗಳ ಹಳೆಯ ದೇವಾಲಯ

