ದಿಸ್ಪುರ್: ಎಳೆ ವಯಸ್ಸಿನ ಬಾಲಕಿಯೊಂದಿಗೆ ಅಪ್ರಾಪ್ತ ಮಗನ ಬಲವಂತ ಮದುವೆಯನ್ನು ನಿಲ್ಲಿಸಲು ಹೋಗಿದ್ದಕ್ಕೆ ತಾಯಿಯ ಮೇಲೆಯೇ ಹಲ್ಲೆ ಮಾಡಿರುವ ಘಟನೆ ಅಸ್ಸಾಂನ ಧುಬ್ರಿ ಎಂಬಲ್ಲಿ ನಡೆದಿದೆ.
ಅಕ್ಟೋಬರ್ 2 ರಂದು ಬೊಟೆರ್‍ಹಟ್ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ರಾಶಿಮಾ ಬಿಬಿ(39) ಹಲ್ಲೆಗೊಳಗಾದ ತಾಯಿ. ಹಲ್ಲೆ ಮಾಡಿದ್ದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ ನಾಲ್ಕು ದಿನಗಳ ಬಳಿಕ ಪೊಲೀಸರು ಕ್ರಮ ಕೈಗೊಂಡಿದ್ದಾರೆ.
Advertisement
ರಾಶಿಯಾ ಬಿಬಿ ಅವರ ಎರಡನೇ ಗಂಡನ ಮಗನಿಗೆ 19 ವರ್ಷವಾಗಿರುತ್ತದೆ. ಆತನಿಗೆ ಹದಿಹರೆಯದ ಬಾಲಕಿಯೊಂದಿಗೆ ಕೆಲವು ತಿಂಗಳುಗಳ ಹಿಂದೆ ರಾಶಿಯಾ ಎರಡನೆಯ ಗಂಡ ಮಂಟುಶೇಕ್ ಬಲವಂತವಾಗಿ ಮದುವೆ ಮಾಡಲು ಮುಂದಾಗಿದ್ದ. ಭಾರತದ ಕಾನೂನು ಪ್ರಕಾರ ಹುಡುಗ ಮದವೆಯಾಗಬೇಕಾದರೆ 21 ವರ್ಷ ಪೂರ್ಣಗೊಳ್ಳಬೇಕು. ಹೀಗಾಗಿ ರಾಶಿಯಾ ಮದುವೆಯನ್ನು ನಿಲ್ಲಿಸಲು ಹೋದಾಗ ಆಕೆಯ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದರು.
Advertisement
Advertisement
ಆಗಸ್ಟ್‌ನಲ್ಲಿ ನಡೆದ ಮದುವೆಯ ವಿರುದ್ಧ ರಾಶಿಯಾ ಬೀಬಿ ಪೊಲೀಸರಿಗೆ ದೂರು ನೀಡಿದ್ದರಿಂದ ಆಕೆಯ ವಿರುದ್ಧ ಎರಡನೇ ಗಂಡ ಮಂಟುಶೇಕ್ ಹಾಗೂ ಬಾಲಕಿಯ ಕುಟುಂಬದವರು ಆಕ್ರೋಶಗೊಂಡಿದ್ದರು. ಹೀಗಾಗಿ ಆಕೆಯ ಬಟ್ಟೆಯನ್ನು ಹರಿದು ಬಿಸಿ ನೀರನ್ನು ಎರಚಿ ಹಲ್ಲೆ ಮಾಡಿದ್ದಾರೆ.
Advertisement
ವಿಡಿಯೋದಲ್ಲಿ ಏನಿದೆ?
ಮಹಿಳೆಯರು ಬಿಬಿ ಅವರ ಮೇಲೆ ಹಲ್ಲೆ ಮಾಡಿ ಆಕೆಯ ಉಡುಪುಗಳನ್ನು ಹರಿಯುತ್ತಾರೆ. ಅಷ್ಟೇ ಅಲ್ಲದೇ ಆಕೆಯ ಮೇಲೆ ಹಲ್ಲೆ ನಡೆಯುತ್ತಿದ್ದರೂ ಯಾರೊಬ್ಬರು ಆಕೆಯನ್ನು ರಕ್ಷಿಸಲು ಬಾರದೇ ಮೂಕ ಪ್ರೇಕ್ಷಕರ ಹಾಗೆ ನೋಡುತ್ತಿರುತ್ತಾರೆ. ಹೀಗಾಗಿ ಹಲ್ಲೆಗೊಳಗಾದ ಬಿಬಿಯಾ ಮೂರನೇ ಪತಿ ಮೊಯಿಯುಲ್ ಹಕ್ ಹಲ್ಲೆ ಮಾಡಿದ್ದವರ ವಿರುದ್ಧ ದೂರು ದಾಖಲಿಸಿದ್ದು, ಮೂವರು ಮಹಿಳೆಯರನ್ನು ಬಂಧಿಸಿದ್ದಾರೆ. ಸದ್ಯಕ್ಕೆ ಗಾಯಗೊಂಡಿರುವ ರಾಶಿಯಾಳಿಗೆ ಪಶ್ಚಿಮ ಬಂಗಾಳದ ಕೂಚ್ ಬೆಹಾರ್ನ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv