ಗುವಾಹಟಿ: ಯುವತಿ ತನ್ನ ಗೆಳೆಯನ ಜೊತೆಗೆ ಆಸ್ಪತ್ರೆಗೆ ಹೋಗುವಾಗ ಯುವಕರ ಗುಂಪೊಂದು ನೈತಿಕಗಿರಿ ನಡೆಸಿ ಆಕೆಯ ಮೇಲೆ ಹಲ್ಲೆ ನಡೆಸಿದ ಘಟನೆ ಅಸ್ಸಾಂನ ಗುವಾಹಟಿಯಲ್ಲಿ ನಡೆದಿದ್ದು, ಇದೀಗ ವಿಡಿಯೋ ವೈರಲ್ ಆಗಿದೆ.
ಈ ಘಟನೆಯಲ್ಲಿ ಯುವತಿಗೆ ಮದುವೆ ನಿಶ್ಚಯವಾಗಿತ್ತು. ಆದರೆ ಆಕೆ ಬೇರೊಬ್ಬ ಯುವಕನ ಜೊತೆ ಹೋಗುತ್ತಿರುವುದ್ದನ್ನು ಕಂಡು ಆಕೆಯ ಮೇಲೆ ಹಲ್ಲೆ ನಡೆಸಲಾಗಿದೆ. ಆ ಯುವಕರು ಯುವತಿಯನ್ನೇ ಗುರಿಯಾಗಿಸಿ ಆಕೆಯ ಮೇಲೆ ಹಲ್ಲೆ ನಡೆಸಿದ್ದಾರೆ. ತನ್ನ ಗೆಳೆಯನ ಜೊತೆ ಕಾಣಿಸಿಕೊಂಡಿದ್ದಕ್ಕೆ ಸ್ಥಳೀಯರು 22 ವರ್ಷದ ಯುವತಿಗೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಯುವತಿಗೆ ಯುವಕರ ಗುಂಪು ಥಳಿಸುವ ದೃಶ್ಯವನ್ನು ಸ್ಥಳೀಯರು ತಮ್ಮ ಮೊಬೈಲ್ ನಲ್ಲಿ ಸೆರೆಹಿಡಿದಿದ್ದು, ಸಾಮಾಜಿಕ ಜಾಲತಾಣಕ್ಕೆ ಹರಿಯಬಿಟ್ಟಿದ್ದಾರೆ.
ಸದ್ಯ ಯುವಕರ ಗುಂಪು ವಿರುದ್ಧ ಎಫ್‍ಐಆರ್ ದಾಖಲಿಸಿ ಒಟ್ಟು 12 ಮಂದಿಯನ್ನು ವಶಕ್ಕೆ ಪಡೆಯಲಾಗಿದೆ. ಯುವತಿ ಆಕೆಯ ಗೆಳೆಯನ ಜೊತೆ ಆಸ್ಪತ್ರೆಗೆ ಹೋಗುತ್ತಿದ್ದಾಗ ಈ ಘಟನೆ ನಡೆದಿದೆ ಎಂದು ಗೋಲ್‍ಪಾರಾ ಎಸ್‍ಪಿ ಅಮೀತ್ವ ಸಿನ್ಹಾ ಮಾಧ್ಯಮಕ್ಕೆ ತಿಳಿಸಿದ್ದಾರೆ.
ಇದೀಗ ಯುವತಿ ಮೇಲೆ ಹಲ್ಲೆ ಮಾಡಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವಿಡಿಯೋದಲ್ಲಿ ಯುವತಿಗೆ ಆಕೆಯ ಮುಖಕ್ಕೆ ಹೊಡೆದು, ಕೂದಲು ಎಳೆದಾಡಿ ಆಕೆಗೆ ಥಳಿಸುವ ದೃಶ್ಯ ಮನಕಲಕುವಂತಿದೆ.
Video of men "moral policing" Assam woman goes viral, 12 arrested https://t.co/2dNeDDiZ2h pic.twitter.com/rhNiVbYgUt
— NDTV (@ndtv) April 9, 2018