ಹೈದರಾಬಾದ್: ತೆಲಂಗಾಣದಲ್ಲಿ (Telangana) ಬಿಜೆಪಿ ಅಧಿಕಾರಕ್ಕೆ ಬಂದ ಕೇವಲ 30 ನಿಮಿಷದಲ್ಲಿ ಹೈದರಾಬಾದ್ ಅನ್ನು ‘ಭಾಗ್ಯನಗರ್’ (Bhagya Nagar) ಎಂದು ಮರುನಾಮಕರಣ ಮಾಡಲಾಗುವುದು ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ್ ಬಿಸ್ವಾ ಶರ್ಮಾ (Himanta Biswa Sarma) ಹೇಳಿಕೆಯೊಂದನ್ನು ನೀಡಿದ್ದಾರೆ.
ಹೈದರಾಬಾದ್‍ನಲ್ಲಿ ಚುನಾವಣಾ ಪ್ರಚಾರದಲ್ಲಿನ (Election Rally) ತಮ್ಮ ಭಾಷಣದ ವೇಳೆ ಈ ಮಾತನ್ನು ಹೇಳಿದ್ದಾರೆ. ಹೈದರಾಬಾದ್ ಹೆಸರನ್ನು ಭಾಗ್ಯನಗರ್ ಎಂಬುದಾಗಿ ಮರುನಾಮಕರಣ ಮಾಡಬೇಕು ಎಂಬುದಾಗಿ ನಾನು ಅಂದುಕೊಂಡಿದ್ದೇನೆ. ಅದರಂತೆ ಬಿಜೆಪಿ (BJP) ಅಧಿಕಾರಕ್ಕೆ ಬಂದ ಅರ್ಧ ಗಂಟೆಯಲ್ಲಿ ಮರುನಾಮಕರಣ ಮಾಡುತ್ತೇನೆ. ಇದನ್ನು ಯಾರೂ ಕೂಡ ವಿರೋಧಿಸುವ ಧೈರ್ಯ ಮಾಡಲ್ಲ ಎಂದರು.
ಕೆಲವು ವಿಷಯಗಳು ಅಸಾಧ್ಯವೆಂದು ತೋರುತ್ತದೆ. ಓಲ್ಡ್ ಸಿಟಿಗೆ ಮೆಟ್ರೋ ರೈಲು ವ್ಯವಸ್ಥೆ ಕಲ್ಪಿಸಬಹುದೇ? ಕೆಲವು ಜನರ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲು ಸಾಧ್ಯವಾಗುತ್ತದೆಯೇ?, ಇನ್ನೂ ಕೆಲವರು ಬಹಿರಂಗವಾಗಿ ಪೊಲೀಸರಿಗೆ ಬೆದರಿಕೆ ಹಾಕಿದಾಗ ನಾವು ಅದನ್ನು ತಡೆಯಬಹುದೇ? ಎಂದು ಇತ್ತೀಚೆಗೆ ಆಲ್ ಇಂಡಿಯಾ ಮಜ್ಲಿಸ್-ಎ-ಇತ್ತೆಹಾದುಲ್ ಮುಸ್ಲಿಮೀನ್ (ಎಐಎಂಐಎಂ) ನಾಯಕ ಅಕ್ಬರುದ್ದೀನ್ ಓವೈಸಿ ಅವರನ್ನು ಒಳಗೊಂಡ ಘಟನೆಯನ್ನು ಉಲ್ಲೇಖಿಸಿ ಹಳಿದರು. ಇದನ್ನೂ ಓದಿ: 4 ತಿಂಗಳ ಪುಟ್ಟ ಕಂದಮ್ಮನಿಗೆ ಹಾಲುಣಿಸಿ ಸಂತೈಸಿದ ಮಹಿಳಾ ಪೊಲೀಸ್: ಭಾರೀ ಮೆಚ್ಚುಗೆ
ಬಿಜೆಪಿ ಸರ್ಕಾರ ರಚನೆಯಾದ ನಂತರ 30 ನಿಮಿಷಗಳಲ್ಲಿ ಈ ಕೆಲಸಗಳನ್ನು ಮಾಡಲಾಗುವುದು ಎಂದರು. ಶರ್ಮಾ ಅವರು ಕೋಮುವಾದದ ಧ್ವನಿಯೊಂದಿಗೆ ಹಲವಾರು ಕಾಮೆಂಟ್‍ಗಳನ್ನು ಮಾಡಿದ್ದಾರೆ. ಈ ದೇಶದಲ್ಲಿ ಬಹುಪತ್ನಿತ್ವದ ಜೊತೆಗೆ ತುಷ್ಟೀಕರಣ ರಾಜಕಾರಣವೂ ಕೊನೆಗೊಳ್ಳಬೇಕು ಎಂದರು. ತ್ರಿವಳಿ ತಲಾಖ್ ನಿಷೇಧ, ಆರ್ಟಿಕಲ್ 370 ರದ್ದತಿ ಮತ್ತು ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣದ ಬಗ್ಗೆಯೂ ಅವರು ಮನವಿ ಮಾಡಿದರು. ಇದನ್ನೂ ಓದಿ: ಭಾರತ ವಿಶ್ವಕಪ್ ಸೋಲಲು ಇಂದಿರಾ ಗಾಂಧಿ ಕಾರಣವೆಂದ ಅಸ್ಸಾಂ ಸಿಎಂ!