ಹಿಂದುತ್ವದ ವಿರೋಧಿ ಆಗ್ಬೇಡಿ: ಕೇಜ್ರಿವಾಲ್‍ಗೆ ಅಸ್ಸಾಂ ಸಿಎಂ ತಿರುಗೇಟು

Public TV
1 Min Read
himanta biswa sarma

ಗುವಾಹಟಿ: ಸಮಾಜವನ್ನು ವಿರೋಧಿಸುವ ಹಾಗೂ ಹಿಂದುತ್ವದ ವಿರೋಧಿಯಾಗಬೇಡಿ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್‍ಗೆ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ತಿರುಗೇಟು ನೀಡಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದಿ ಕಾಶ್ಮೀರ್ ಫೈಲ್ಸ್ ಸಿನೆಮಾಕ್ಕೆ ನೀವು ತೆರಿಗೆಯನ್ನು ಮುಕ್ತಗೊಳಿಸುತ್ತೀರೋ ಇಲ್ಲವೋ ಅದು ನಿಮಗೆ ಬಿಟ್ಟಿರುವ ವಿಚಾರವಾಗಿದೆ. ಆದರೆ ನಮ್ಮನ್ನು ಅವಮಾನಿಸುವ ಹಕ್ಕು ನಿಮಗೆ ಇಲ್ಲ. ನೀವು ಏನಾದರೂ ಮಾಡಿ, ಆದರೆ ಬಹಿರಂಗವಾಗಿ ಹಿಂದೂ ವಿರೋಧಿ ಆಗಬೇಡಿ ಎಂದು ವಾಗ್ದಾಳಿ ನಡೆಸಿದರು.

Arvind Kejriwal 1

ಇಂದು ನಮ್ಮ ಹಿಂದೂ ಸಮಾಜ ಈ ಸ್ಥಿತಿಯಲ್ಲಿದ್ದರೆ, ಅದಕ್ಕೆ ಕಾರಣ ಹಿಂದೂ ಕುಟುಂಬದೊಳಗೆ ಹೆಚ್ಚು ಹಿಂದೂ ವಿರೋಧಿಗಳಿರುವುದಾಗಿದೆ. ಇಲ್ಲದಿದ್ದರೆ, ಹಿಂದೂ ನಾಗರಿಕತೆಯು ಜಗತ್ತಿಗೆ ದಾರಿ ತೋರಿಸುತ್ತಿತ್ತು ಎಂದು ಅಭಿಪ್ರಾಯಪಟ್ಟರು. ಇದನ್ನೂ ಓದಿ: ಇಂದಿನಿಂದ SSLC ಪರೀಕ್ಷೆ – ಸಮವಸ್ತ್ರ ಧರಿಸಿದ್ರೆ ಮಾತ್ರ ಪ್ರವೇಶಕ್ಕೆ ಅನುಮತಿ

ದಿ ಕಾಶ್ಮೀರ್ ಚಿತ್ರವನ್ನು ಯೂಟ್ಯೂಬ್‍ನಲ್ಲಿ ರಿಲೀಸ್ ಮಾಡಿ, ಆಗ ಎಲ್ಲರೂ ಉಚಿತವಾಗಿ ನೋಡಲು ಸಾಧ್ಯವಾಗುತ್ತದೆ ಎಂದು ಕೇಜ್ರಿವಾಲ್ ಹೇಳಿದ್ದಾರೆ. ಆದರೆ ಈ ಹಿಂದೆ ಹಲವಾರು ಸಿನಿಮಾಕ್ಕೆ ರಾಷ್ಟ್ರ ರಾಜಧಾನಿಯಲ್ಲಿ ತೆರಿಗೆ ಮುಕ್ತಗೊಳಿಸಿದ್ದಾರೆ. ಆ ಎಲ್ಲಾ ಚಲನಚಿತ್ರಗಳನ್ನು ಯೂಟ್ಯೂಬ್‍ನಲ್ಲಿ ಅಪ್‍ಲೋಡ್ ಮಾಡಲು ಅವರು ಏಕೆ ಕೇಳಲಿಲ್ಲ ಎಂದು ಪ್ರಶ್ನಿಸಿದರು.

the kashmir files 2

ಈ ಹಿಂದೆ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ಮಾತನಾಡಿ, ಬಿಜೆಪಿಯವರು ದಿ ಕಾಶ್ಮೀರ್‌ ಫೈಲ್ಸ್‌ ಸಿನಿಮಾಗೆ ತೆರಿಗೆ ವಿನಾಯಿತಿ ನೀಡಬೇಕು ಎಂದು ಕೇಳುತ್ತಿದ್ದಾರೆ. ನಿರ್ದೇಶಕರು ಸಿನಿಮಾವನ್ನು ಯೂಟ್ಯೂಬ್‌ಗೆ ನೀಡಲಿ. ಉಚಿತವಾಗಿ ಸಿನಿಮಾ ನೋಡಬಹುದು ನಮ್ಮನ್ನು ತೆರಿಗೆ ಮುಕ್ತ ಮಾಡಿ ಎಂದು ಏಕೆ ಕೇಳುತ್ತಿದ್ದೀರಿ? ಅಷ್ಟು ಉತ್ಸುಕರಾಗಿದ್ದರೆ ವಿವೇಕ್ ಅಗ್ನಿಹೋತ್ರಿಯವರಿಗೆ ಯೂಟ್ಯೂಬ್‌ನಲ್ಲಿ ಹಾಕಲು ಹೇಳಿ, ಎಲ್ಲಾ ಉಚಿತವಾಗಿರುತ್ತದೆ. ಎಲ್ಲರೂ ಅದನ್ನು ಒಂದು ದಿನದಲ್ಲಿ ನೋಡಬಹುದು. ಆಗ ತೆರಿಗೆ ಮುಕ್ತ ಮಾಡುವ ಅಗತ್ಯವಾದರೂ ಏಕೆ ಬರುತ್ತದೆ ಎಂದಿದ್ದರು.

Share This Article
Leave a Comment

Leave a Reply

Your email address will not be published. Required fields are marked *