ನವದೆಹಲಿ: ಅಸ್ಸಾಂ ಮತ್ತು ಮೇಘಾಲಯ ಸರ್ಕಾರಗಳು ತಮ್ಮ 50 ವರ್ಷಗಳ ಗಡಿ ವಿವಾದಕ್ಕೆ ಅಂತ್ಯವಾಡಲು ಮಂಗಳವಾರ ರಾಷ್ಟ್ರೀಯ ರಾಜಧಾನಿಯಲ್ಲಿ ಐತಿಹಾಸಿಕ ಒಪ್ಪಂದಕ್ಕೆ ಸಹಿ ಹಾಕಿದವು.
ಗೃಹ ಸಚಿವಾಲಯದ ಕಚೇರಿಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಸಮ್ಮುಖದಲ್ಲಿ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಮತ್ತು ಮೇಘಾಲಯದ ಸಿಎಂ ಸಹವರ್ತಿ ಕಾನ್ರಾಡ್ ಕೆ ಸಂಗ್ಮಾ ಅವರು ಒಪ್ಪಂದಕ್ಕೆ ಸಹಿ ಹಾಕಿದರು. ಈ ವೇಳೆ ಎರಡೂ ರಾಜ್ಯಗಳ ಸರ್ಕಾರದ ಮುಖ್ಯ ಕಾರ್ಯದರ್ಶಿಗಳು ಉಪಸ್ಥಿತರಿದ್ದರು. ಇದನ್ನೂ ಓದಿ: 5.21 ಲಕ್ಷ ಮನೆ ಉದ್ಘಾಟನೆ, ಬಡವರ ಸಬಲೀಕರಣಕ್ಕಾಗಿ ಬಿಜೆಪಿ ಕೆಲಸ: ಮೋದಿ
ಪ್ರಸ್ತಾವಿತ ಒಪ್ಪಂದದ ಶಿಫಾರಸುಗಳ ಪ್ರಕಾರ, 36.79 ಚದರ ಕಿ.ಮೀ. ಭೂಪ್ರದೇಶದ ಪೈಕಿ ಅಸ್ಸಾಂ 18.51 ಚದರ ಕಿ.ಮೀ. ಭೂಪ್ರದೇಶ ಪಡೆಯಲಿದೆ. ಉಳಿದ 18.28 ಚದರ ಕಿ.ಮೀ. ಭೂಪ್ರದೇಶವನ್ನು ಮೇಘಾಲಯಕ್ಕೆ ನೀಡಿದೆ.
1972ರಲ್ಲಿ ಅಸ್ಸಾಂನಿಂದ ಮೇಘಾಲಯ ಬೇರ್ಪಟ್ಟ ನಂತರ ಈ ಗಡಿ ವಿವಾದ ಹುಟ್ಟುಕೊಂಡಿತು. ಹೊಸ ರಾಜ್ಯಗಳ ರಚನೆ ಸಂದರ್ಭದಲ್ಲಿನ ಪ್ರಾಥಮಿಕ ಒಪ್ಪಂದದ ವೇಳೆಯಲ್ಲಾದ ಗಡಿ ಗುರುತಿನ ವ್ಯತ್ಯಾಸದ ನಂತರ ವಿವಾದ ಉಲ್ಬಣಗೊಳ್ಳಲು ಕಾರಣವಾಗಿತ್ತು. ಇದನ್ನೂ ಓದಿ: ಪರವಾನಿಗೆ ಇಲ್ಲದೆ ಬಂದೂಕುಗಳನ್ನು ಹೊಂದಲು ಕೊಡವರಿಗೆ ಅವಕಾಶ- ರಾಜ್ಯಕ್ಕೆ ಸುಪ್ರೀಂ ನೋಟಿಸ್