ಅಸ್ಸಾಂ: ಬಾರ್ಪೆಟಾ ಜಿಲ್ಲೆಯಲ್ಲಿರುವ ಫರ್ಖುದ್ದೀನ್ ಅಲಿ ಅಹ್ಮದ್ ಮೆಡಿಕಲ್ ಕಾಲೇಜಿನಲ್ಲಿ (ಎಫ್‍ಎಎಎಂಸಿ) ಕಳೆದ ಎರಡು ದಿನಗಳಲ್ಲಿ 8 ನವಜಾತ ಶಿಶುಗಳು ಮೃತಪಟ್ಟಿದ್ದು, ಸಾವಿನ ತನಿಖೆ ನಡೆಸುವಂತೆ ಅಸ್ಸಾಂ ಸರ್ಕಾರ ಆದೇಶಿಸಿದೆ.
ಅಸ್ಸಾಂನ ಆರೋಗ್ಯ ಸಚಿವ ಹಿಮಾಂತ ಬಿಸ್ವಾ ಶರ್ಮಾ ಅವರು, ವೈದ್ಯರು ಮಕ್ಕಳನ್ನು ಉಳಿಸಲು ತುಂಬಾ ಪ್ರಯತ್ನಿಸಿದರೂ ಯಶಸ್ವಿಯಾಗಿಲ್ಲ. ಜೊತೆಗೆ ಆಸ್ಪತ್ರೆಯಲ್ಲಿ ಸಾಕಷ್ಟು ಔಷಧಿಗಳು ಲಭ್ಯವಿರುವುದಾಗಿ ತಿಳಿಸಿದರು.
Advertisement
5 ಶಿಶುಗಳ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು, ಅದರಿಂದ ಮೃತಪಟ್ಟಿವೆ. ಇದು ಯಾವುದೇ ವೈದ್ಯರ ನಿರ್ಲಕ್ಷ್ಮದಿಂದ ಸಂಭವಿಸಿಲ್ಲ. ನಾನು ಕಾಳಜಿಯಿಂದ ವೈದ್ಯರನ್ನು ವಿಚಾರಿಸಿದ್ದೇನೆ. ಅವರು ಶಿಶುಗಳನ್ನು ಹೆಚ್ಚಿನ ಆರೈಕೆ ಮಾಡಿದ್ದಾರೆ. ಆದರೂ ಉಳಿಸಿಕೊಳ್ಳಲು ಸಾಧ್ಯವಾಗಿಲ್ಲ ಎಂದು ಹೇಳಿದರು.
Advertisement
ಇನ್ನೂ ಮೂರು ಮಕ್ಕಳು ಹುಟ್ಟಿದ ತಕ್ಷಣ ಉಸಿರುಗಟ್ಟಿದೆ, ಮೆದುಳು ಮತ್ತು ಇತರೆ ಅಂಗಾಂಗಳಿಗೆ ಸಾಕಾಗುವಷ್ಟು ಆಮ್ಲಜನಕ ದೊರೆತಿಲ್ಲ ಆದ್ದರಿಂದ ಮೃತಪಟ್ಟಿವೆ ಎಂದು ಆಸ್ಪತ್ರೆಯ ಮುಖ್ಯಸ್ಥ ದಿಲೀಪ್ ದತ್ತಾ ಅವರು ಮಾಧ್ಯಮಗಳಿಗೆ ತಿಳಿಸಿದ್ದಾರೆ.
Advertisement
ಮಕ್ಕಳು ಜನಿಸಿದಾಗಲೇ ಕಡಿಮೆ ತೂಕವನ್ನು ಹೊಂದಿದ್ದವು. ಅಷ್ಟೇ ಅಲ್ಲದೇ ತೀವ್ರ ಗಂಭೀರವಾದ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಿಸಿದ್ದರು. ನಾವು ಮಾಡುವ ಪ್ರಯತ್ನವನ್ನು ಮಾಡಿದೆವು ಆದರೂ ಮಕ್ಕಳನ್ನು ಉಳಿಸಿಕೊಳ್ಳಲು ಸಾಧ್ಯವಾಗಿಲ್ಲ. ಮೃತಪಟ್ಟ ಶಿಶುಗಳಲ್ಲಿ 7 ಗಂಡು ಹಾಗೂ ಒಂದು ಹೆಣ್ಣು ಮಗು ಎಂದು ದತ್ತಾ ಹೇಳಿದರು.