ಗುವಾಹಟಿ: ವಿಷಪೂರಿತ ಕಾಡು ಅಣಬೆಯನ್ನು ತಿಂದು ಕಳೆದ 2 ದಿನಗಳಲ್ಲಿ 13 ಜನ ಸಾವನ್ನಪ್ಪಿದ ಘಟನೆ ಅಸ್ಸಾಂ ರಾಜ್ಯದ 4 ಜಿಲ್ಲೆಗಳಲ್ಲಿ ನಡೆದಿದೆ.
ಅಸ್ಸಾಂನ 4 ಜಿಲ್ಲೆಗಳಲ್ಲಿ ಈ ಘಟನೆ ನಡೆದಿದೆ. ವಿಷಕಾರಿ ಅಣಬೆಯನ್ನು ಸೇವಿಸಿದ್ದವರು ಅಸ್ಸಾಂ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಅದರಲ್ಲಿ 39 ಜನರು ಅಸ್ವಸ್ಥರಾಗಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೇ 13 ಜನರು ಸಾವನ್ನಪ್ಪಿದ್ದಾರೆ ಎಂದು ಆಸ್ಪತ್ರೆಯ ಮೇಲ್ವಿಚಾರಕ ಡಾ. ಪ್ರಶಾಂತ್ ದಿಹಿಂಗಿಯಾ ತಿಳಿಸಿದರು.
ಕಳೆದ ಐದು ದಿನಗಳಲ್ಲಿ ಅಸ್ಸಾಂನ ಚರೈಡಿಯೊ, ದಿಬ್ರುಗಢ, ಶಿವಸಾಗರ್ ಮತ್ತು ತಿನ್ಸುಕಿಯಾ ಜಿಲ್ಲೆಗಳಲ್ಲಿ ವಿಷಕಾರಿ ಅಣಬೆಯನ್ನು ತಿಂದಿದ್ದ 40ಕ್ಕೂ ಅಧಿಕ ಜನರು ದಾಖಲಾಗಿದ್ದು, ಈ ಪೈಕಿ ಕಳೆದ ಎರಡು ದಿನಗಳಲ್ಲಿ 13 ಜನರು ಸಾವನ್ನಪ್ಪಿದ್ದಾರೆ. ಇದನ್ನೂ ಓದಿ: ಲಡ್ಡು ತಿನ್ನಿಸುವ ಮೂಲಕ ವೈವಾಹಿಕ ವಿವಾದ ಕೊನೆಗೊಳಿಸಿದ 70ರ ಹರೆಯ ದಂಪತಿ
ಇವರೆಲ್ಲರೂ ತಮ್ಮ ಮನೆಯ ಹತ್ತಿರ ಇರುವ ಕಾಡಿನಲ್ಲಿ ಬೆಳೆಯುವ ವಿಷಕಾರಿ ಅಣಬೆಗಳನ್ನು ತಿಂದಿದ್ದರು. ಇದನ್ನು ತಿಂದ ನಂತರ ಅವರು ತೀವ್ರವಾಗಿ ಅಸ್ವಸ್ತರಾದರು. ಸಾವನ್ನಪ್ಪಿದ್ದವರಲ್ಲಿ ಒಂದು ಮಗು ಸೇರಿದಂತೆ ಏಳು ಮಂದಿ ಚರೈಡಿಯೊ ಜಿಲ್ಲೆಯ ಸೊನಾರಿ ಪ್ರದೇಶದಿಂದ, ಐದು ಮಂದಿ ದಿಬ್ರುಗಢ್ ಜಿಲ್ಲೆಯ ಬಾರ್ಬರುವಾ ಪ್ರದೇಶದಿಂದ ಮತ್ತು ಶಿವಸಾಗರ್ ಜಿಲ್ಲೆಯ ಒಬ್ಬರು ಸಾವನ್ನಪ್ಪಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್ ವಿರೋಧದ ನಡುವೆಯೂ ಗುತ್ತಿಗೆದಾರ ಸಂತೋಷ್ ಪಾಟೀಲ್ ಅಂತ್ಯಕ್ರಿಯೆ