ಬೆಂಗಳೂರು: ವಿಧಾನಸಭೆಯಲ್ಲಿ ಆರ್‌ಎಸ್‌ಎಸ್ ಗೀತೆ ಹಾಡಿ ಕುತೂಹಲ ಮೂಡಿಸಿದ್ದ ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ಈಗ ಮತ್ತೊಂದು ಡೈಲಾಗ್ ಮೂಲಕ ಸುದ್ದಿಯಲ್ಲಿದ್ದಾರೆ.
ಬಸವನಗುಡಿ ಗಣೇಶೋತ್ಸವ ಕಾರ್ಯಕ್ರಮದಲ್ಲಿ ಡಿಕೆಶಿ ವೇದಿಕೆಗೆ ಹೋದಾಗ ಮೋದಿ ಮೋದಿ (Modi) ಎಂದು ಕೆಲವರು ಕೂಗಿದ್ದಾರೆ. ಆಗ ನಕ್ಕ ಡಿಕೆಶಿ, ಮೋದಿ ಮೋದಿ ಅಂತಿದ್ದೀರಾ ಬಹಳ ಸಂತೋಷ. ಆದ್ರೆ ಮೋದಿ ಕೇಳಿ ಅವರು ಡಿಕೆ.. ಡಿಕೆ ಅಂತಾರೆ ಅಂತ ಟಾಂಗ್ ಕೊಟ್ಟಿದ್ದಾರೆ.
It’s great that you are all shouting Modi Modi, but your Modi is shouting DK DK : D K Shivakumar.
This is a direct warning to the Congress high command & Siddaramaiah.
Something is happening, something will happen.😂pic.twitter.com/JaSSo42Y9C
— 🇮🇳 Madhukumar.V.P🇮🇳 (@MadhukumarVP1) September 4, 2025
ಸಾಮಾಜಿಕ ಜಾಲತಾಣದಲ್ಲಿ ಡಿಕೆಶಿ ಆಡಿರುವ ಮಾತುಗಳು ತುಂಬಾ ವೈರಲ್ ಆಗಿದೆ. ಡಿಕೆಶಿ ಮಾತಿನ ಒಳ ಅರ್ಥ ಏನು ಎಂಬ ಚರ್ಚೆಗಳು ಆಗುತ್ತಿವೆ. ಇದನ್ನೂ ಓದಿ: ಡಿ.ಕೆ ಶಿವಕುಮಾರ್ ದೇಶದ ಎರಡನೇ ಶ್ರೀಮಂತ ಸಚಿವ – ಒಟ್ಟು ಆಸ್ತಿ ಎಷ್ಟು?
ಪವರ್ ಶೇರಿಂಗ್ ಹೇಳಿಕೆಯಿಂದ ಆರಂಭದಿಂದ ಹಿಡಿದು ಆರ್‌ಎಸ್‌ಎಸ್ ಗೀತೆ, ಮೈಸೂರು ಚಾಮುಂಡಿ ಬೆಟ್ಟ..ಹೀಗೆ ಒಂದಿಲ್ಲೊಂದು ವಿಷಯದಲ್ಲಿ ಡಿಕೆ ಈಗ ಚರ್ಚೆಯಾಗುತ್ತಿದ್ದಾರೆ.