ಏಷ್ಯನ್ ಮ್ಯಾರಥಾನ್ ಚಾಂಪಿಯನ್‌ಶಿಪ್‌ – ಭಾರತ ಪ್ರತಿನಿಧಿಸಲಿದ್ದಾರೆ ಕರ್ನಾಟಕದ ಬೆಳ್ಳಿಯಪ್ಪ

Public TV
1 Min Read
Belliyappa

ಮಡಿಕೇರಿ: ಹಾಂಗ್‌ಕಾಂಗ್‌ನಲ್ಲಿ ಇದೇ ಜನವರಿ 21ರಂದು ನಡೆಯಲಿರುವ 19ನೇ ಏಷ್ಯನ್ ಮ್ಯಾರಥಾನ್ ಚಾಂಪಿಯನ್‌ಶಿಪ್‌ನಲ್ಲಿ (Asian Marathon Championships) ಭಾರತವನ್ನು ಕೊಡಗಿನ‌ ಟಿ. ಶೆಟ್ಟಿಗೇರಿಯ ಬಿ.ಬೆಳ್ಳಿಯಪ್ಪ ಅವರು ಪ್ರತಿನಿಧಿಸಲಿದ್ದಾರೆ.

ಪುರುಷರ ವಿಭಾಗದಲ್ಲಿ ಇಬ್ಬರು ಸ್ಪರ್ಧಿಗಳು ಭಾರತವನ್ನು ಪ್ರತಿನಿಧಿಸುತ್ತಿದ್ದು, ಕರ್ನಾಟಕದ ಬೆಳ್ಳಿಯಪ್ಪ ಅವರೊಂದಿಗೆ ಉತ್ತರಾಖಂಡದವರು ಸೇರಿದ್ದಾರೆ. ಇದನ್ನೂ ಓದಿ: ಜಾಗದಿಂದ ಒಕ್ಕಲೆಬ್ಬಿಸಲು ಗ್ರಾಮಸ್ಥರಿಂದ ಕಿರುಕುಳ ಆರೋಪ- ದಯಾಮರಣ ಕೋರಿ ಬಡಕುಟುಂಬ ಅರ್ಜಿ

ಕಳೆದ ವರ್ಷ ದೆಹಲಿಯಲ್ಲಿ ನಡೆದ ರಾಷ್ಟ್ರೀಯ ಮ್ಯಾರಥಾನ್‌ನಲ್ಲಿ (National Marathon) ಬೆಳ್ಳಿಯಪ್ಪ ಬೆಳ್ಳಿ ಪದಕ ಪಡೆದು ಏಷ್ಯನ್ ಮ್ಯಾರಥಾನ್ ಚಾಂಪಿಯನ್‌ ಷಿಪ್‌ನಲ್ಲಿ ಭಾಗವಹಿಸಲು ಅರ್ಹತೆ ಪಡೆದುಕೊಂಡಿದ್ದರು.‌ ಭಾರತೀಯ ಸೇನೆಯಲ್ಲಿರುವ ಈವರು ಸ್ಪೋರ್ಟ್ಸ್‌ ಇನ್‌ಸ್ಟಿಟ್ಯೂಟ್‌ನಲ್ಲಿದ್ದು ಊಟಿಯಲ್ಲಿ ತರಬೇತಿ ಪಡೆಯುತ್ತಿದ್ದಾರೆ.

ಬೆಳ್ಳಿಯಪ್ಪ ಮೂಲತಃ ಕೊಡಗು ಜಿಲ್ಲೆಯ ಪೊನ್ನಂಪೇಟೆ ತಾಲ್ಲೂಕಿನ ಟಿ.ಶೆಟ್ಟಿಗೇರಿ ಗ್ರಾಮದ ಬೋಪಯ್ಯ ಹಾಗೂ ರೋಜಾ ದಂಪತಿ ಪುತ್ರರಾಗಿದ್ದಾರೆ. ಇದನ್ನೂ ಓದಿ: ಆಹ್ವಾನ ಬಂದಿದ್ದು, ಜ.22 ರ ಬಳಿಕ ರಾಮಮಂದಿರಕ್ಕೆ ಭೇಟಿ ನೀಡುತ್ತೇನೆ: ಅಖಿಲೇಶ್‌ ಯಾದವ್‌ 

Share This Article