ಹ್ಯಾಂಗ್‍ಝೌ: ಏಷ್ಯನ್ ಗೇಮ್ಸ್ ನ (Asian Games) ಮಹಿಳೆಯರ 60 ಕೆ.ಜಿ ವುಶು (Wushu) ಫೈನಲ್‍ನಲ್ಲಿ ಭಾರತದ ರೋಶಿಬಿನಾ ದೇವಿ ನವೋರೆಮ್ ಅವರು ಬೆಳ್ಳಿ ಪದಕ ಗೆದ್ದಿದ್ದಾರೆ.
#WATCH | Roshibina Devi Naorem wins Silver medal in the Wushu women’s 60 kg category at the 19th Asian Games in Hangzhou
"I am feeling good about winning the silver medal but I am also a little sad about not being able to bag a gold medal," she says. pic.twitter.com/jMDFHvo5tK
— ANI (@ANI) September 28, 2023
Advertisement
ರೋಶಿಬಿನಾ ದೇವಿ (Roshibina Devi) ಅವರು ಚೀನಾದ ಹೆವಿವೇಟ್ ವು ಕ್ಸಿಯಾವೊಯ್ (Wu Xiaowei of China) ವಿರುದ್ಧ 0-2 ಅಂತರದ ಸೋಲಿನ ನಂತರ ಬೆಳ್ಳಿ ಪದಕಕ್ಕೆ ಮುತ್ತಿಟ್ಟಿದ್ದಾರೆ. ಹಾಲಿ ಚಾಂಪಿಯನ್ ಆಗಿರುವ ವು ಕ್ಸಿಯಾವೊಯಿ ವಿರುದ್ಧ ರೋಶಿಬಿನಾ ಕಠಿಣ ಸೆಣಸಾಟ ನಡೆಸಿದರು. ಈ ಮೂಲಕ ಚೀನಾದ ಆಟಗಾರ್ತಿಗೆ ಬಲವಾದ ಆರಂಭವನ್ನು ಪಡೆಯಲು ಅವಕಾಶ ಮಾಡಿಕೊಟ್ಟರು.
Advertisement
Advertisement
ಎರಡು ಸುತ್ತುಗಳ ನಂತರ ತೀರ್ಪುಗಾರರು ವು ಕ್ಸಿಯಾವೊಯಿ ಅವರನ್ನು ವಿಜೇತರೆಂದು ಘೋಷಿಸಿದರು. ಮೊದಲ ಸುತ್ತಿನಲ್ಲಿ ಭಾರೀ ಪೈಪೋಟಿ ನಡೆಯಿತು. ರೋಶಿಬಿನಾ ಅವರನ್ನು ತಡೆಯಲು ವು ಕ್ಸಿಯಾವೊಯಿ ಪ್ರಾರಂಭಿಸಿದ್ದು, 1-0 ಮುನ್ನಡೆ ಸಾಧಿಸಿದರು. ಇನ್ನು ಎರಡನೇ ಸುತ್ತಿನಲ್ಲಿ ರೋಶಿಬಿನಾ ದೇವಿಯ ಮೇಲೆ ವು ಕ್ಸಿಯಾವೊಯಿ ದಾಳಿ ಮಾಡುವ ಮೂಲಕ ಚಿನ್ನ ಗಳಿಸಿದರು.
Advertisement
ಜಕಾರ್ತದಲ್ಲಿ ನಡೆದ 2018ರ ಆವೃತ್ತಿಯಲ್ಲಿ ಕಂಚು ಗೆದ್ದಿದ್ದ ರೋಶಿಬಿನಾ ಅವರು ಇದೀಗ ಬೆಳ್ಳಿಯ ಪದಕಕ್ಕೆ ಕೊರಳೊಡ್ಡಿದ್ದಾರೆ.
Web Stories