Asian Games 2023 ನೇಪಾಳ ವಿರುದ್ಧ 23 ರನ್‌ಗಳ ಜಯ – ಸೆಮಿಫೈನಲ್‌ಗೆ ಭಾರತ

Public TV
1 Min Read
yashasvi jaiswal

ಹ್ಯಾಂಗ್‌ಝೋ: ಚೀನಾದಲ್ಲಿ (China) ನಡೆಯುತ್ತಿರುವ ಏಷ್ಯನ್‌ ಗೇಮ್ಸ್‌ (Asian Games) ಕ್ರೀಡಾಕೂಟದ ಕ್ವಾರ್ಟರ್‌ ಫೈನಲಿನಲ್ಲಿ ಭಾರತ (Team India) ನೇಪಾಳ (Nepal) ವಿರುದ್ಧ 23 ರನ್‌ಗಳ ಜಯ ಸಾಧಿಸಿ ಸೆಮಿಫೈನಲ್‌ (Semi Final) ಪ್ರವೇಶಿಸಿದೆ.

ಟಾಸ್‌ ಗೆದ್ದು ಮೊದಲು ಬ್ಯಾಟ್‌ ಮಾಡಿದ ಭಾರತ 20 ಓವರ್‌ಗಳಲ್ಲಿ 4 ವಿಕೆಟ್‌ ನಷ್ಟಕ್ಕೆ 202 ರನ್‌ ಗಳಿಸಿತು. ನಂತರ ಬ್ಯಾಟ್‌ ಮಾಡಿದ ನೇಪಾಳ 20 ಓವರ್‌ಗಳಲ್ಲಿ 9 ವಿಕೆಟ್‌ ನಷ್ಟಕ್ಕೆ 179 ರನ್‌ ಗಳಿಸಿ ಸೋಲೊಪ್ಪಿಕೊಂಡಿತು.

ಯಶಸ್ವಿ ಜೈಸ್ವಾಲ್‌ (Yashasvi Jaiswal) ಮತ್ತು ಋತುರಾಜ್‌ ಗಾಯಕ್ವಾಡ್‌ (Ruturaj Gaikwad) ಮೊದಲ ವಿಕೆಟಿಗೆ 59 ಎಸೆತಗಳಲ್ಲಿ 103 ರನ್‌ ಜೊತೆಯಾಟವಾಡಿದರು. ಗಾಯಕ್ವಾಡ್‌ 25 ರನ್‌ ಗಳಿಸಿ ಔಟಾದರು. ತಿಲಕ್‌ ವರ್ಮಾ, ಜಿತೇಶ್‌ ಶರ್ಮಾ ಔಟಾದರೂ ಜೈಸ್ವಾಲ್‌ ಸ್ಫೋಟಕ ಶತಕ ಸಿಡಿಸಿದರು. 49 ಎಸೆತಗಳಲ್ಲಿ 100 ರನ್‌ (8 ಬೌಂಡರಿ, 7 ಸಿಕ್ಸರ್‌) ಹೊಡೆದು ಕ್ಯಾಚ್‌ ನೀಡಿ ಹೊರ ನಡೆದರು. ಕೊನೆಯಲ್ಲಿ ಶಿವಂ ದುಬೆ ಔಟಾಗದೇ 25 ರನ್‌(19 ಎಸೆತ, 2 ಬೌಂಡರಿ, 1 ಸಿಕ್ಸರ್‌) ಹೊಡೆದರೆ ರಿಂಕು ಸಿಂಗ್‌ ಔಟಾಗದೇ 37 ರನ್‌(15 ಎಸೆತ, 2 ಬೌಂಡರಿ, 4 ಸಿಕ್ಸರ್‌) ಹೊಡೆದರು. ಮೂಲಕ ತಂಡದ ಮೊತ್ತ 200 ರನ್‌ ಗಳ ಗಡಿ ದಾಟಿತು.  ಇದನ್ನೂ ಓದಿ: Asian Games 2023: ಕೊನೇ ಪ್ರಯತ್ನದಲ್ಲಿ ಗುಂಡು ಎಸೆದು ಚಿನ್ನ ಗೆದ್ದ ಗಂಡುಗಲಿ – ಭಾರತಕ್ಕೆ ಒಂದೇ ದಿನ 15 ಪದಕ

ನೇಪಾಳ ಪರ ದೀಪೇಂದ್ರ ಸಿಂಗ್‌ 32 ರನ್‌ (15 ಎಸೆತ, 4 ಬೌಂಡರಿ), ಸಂದೀಪ್‌ ಜೋರಾ 29 ರನ್‌ (12 ಎಸೆತ, 1 ಬೌಂಡರಿ, 3 ಸಿಕ್ಸರ್‌), ಕುಶಾಲ್ ಭುರ್ಟೆಲ್ 28 ರನ್‌, ಕುಶಾಲ್‌ ಮಲ್ಲ 29 ರನ್‌ ಹೊಡೆದು ಔಟಾದರು.


Web Stories

Share This Article