ಹ್ಯಾಂಗ್‌ಝೌ: ಇಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್‌ನ ಶಾಟ್‌ಪುಟ್ (ಗುಂಡು ಎಸೆತ) (Shotput) ಸ್ಪರ್ಧೆಯಲ್ಲಿ ಭಾರತದ ತಜೀಂದರ್‌ಪಾಲ್ ಸಿಂಗ್ ತೂರ್ (Tajinderpal Singh Toor) ಚಿನ್ನದ ಪದಕ ಬೇಟೆಯಾಡಿದ್ದಾರೆ. ಇದರೊಂದಿಗೆ ಭಾರತ 8ನೇ ದಿನವಾದ ಭಾನುವಾರ ಒಂದೇ ದಿನ 15 ಪದಕ ಬಾಚಿಕೊಂಡಿದೆ.
Advertisement
7ನೇ ದಿನವಾದ ಶನಿವಾರ 10 ಚಿನ್ನ, 14 ಬೆಳ್ಳಿ ಮತ್ತು 14 ಕಂಚಿನೊಂದಿಗೆ 38 ಪದಕಗಳನ್ನು ಭಾರತ ತನ್ನದಾಗಿಸಿಕೊಂಡಿತ್ತು. 8ನೇ ದಿನವಾದ ಭಾನುವಾರ ಒಂದೇ ದಿನ 3 ಚಿನ್ನ, 7 ಬೆಳ್ಳಿ ಹಾಗೂ 5 ಕಂಚಿನ ಪದಕಗಳನ್ನ ಬಾಚಿಕೊಂಡಿದೆ. ಇದರಿಂದ ಒಟ್ಟು 13 ಚಿನ್ನ (Gold Medal), 21 ಬೆಳ್ಳಿ ಹಾಗೂ 19 ಕಂಚಿನ ಪದಕಗಳು ಸೇರಿ 53 ಪದಕಗಳು ಭಾರತದ ಪಾಲಾಗಿದ್ದು, ರ‍್ಯಾಂಕಿಂಗ್ ಪಟ್ಟಿಯಲ್ಲಿ 4ನೇ ಸ್ಥಾನ ಭದ್ರಪಡಿಸಿಕೊಂಡಿದೆ. ಇದನ್ನೂ ಓದಿ: Asian Games 2023: 3000 ಮೀ. ಸ್ಟೀಪಲ್ ಚೇಸ್‌ನಲ್ಲಿ ದಾಖಲೆಯೊಂದಿಗೆ ಬಂಗಾರಕ್ಕೆ ಮುತ್ತಿಟ್ಟ ಅವಿನಾಶ್
Advertisement
ಶಾಟ್‌ಪುಟ್ ಸ್ಪರ್ಧೆಯಲ್ಲಿ ಅರೇಬಿಯಾದ ಪ್ರತಿಸ್ಪರ್ಧಿ ಮೊಹಮದ್ ದೌಡಾ ಟೋಲೋ ಅವರನ್ನು ಎದುರಿಸುವ ಮೂಲಕ ಕೊನೇ ಪ್ರಯತ್ನದಲ್ಲಿ ಸಿಕ್ಕ ಅವಕಾಶ ಬಳಸಿಕೊಂಡು ಚಿನ್ನಕ್ಕೆ ಕೊರಳೊಡ್ಡಿದ್ದಾರೆ.
Advertisement
Advertisement
ತಜೀಂದರ್ ತಮ್ಮ 3ನೇ ಪ್ರಯತ್ನದಲ್ಲಿ 19.51 ಮೀಟರ್, 4ನೇ ಪ್ರಯತ್ನದಲ್ಲಿ 20.06 ಮೀಟರ್ ಗುಂಡು ಎಸೆದು ಗೆಲುವಿನ ಆತ್ಮವಿಶ್ವಾಸದಲ್ಲಿದ್ದರು. ಈ ವೇಳೆ ಪ್ರತಿಸ್ಪರ್ಧಿ ಮೊಹಮದ್ ದೌಡಾ ಟೊಲೊ ತಮ್ಮ 4ನೇ ಪ್ರಯತ್ನದಲ್ಲಿ 20.18 ಮೀಟರ್ ದೂರ ಗುಂಡು ಎಸೆದು ಕಠಿಣ ಸವಾಲು ನೀಡಿದ್ದರು. ಆದ್ರೆ ತಜೀಂದರ್ ತಮ್ಮ 5ನೇ ಪ್ರಯತ್ನದಲ್ಲಿ ಈ ದೂರವನ್ನು ಮೀರಿ ಎಸೆಯಲು ಮುಂದಾಗಿ ಫೌಲ್ ಮಾಡಿಕೊಂಡಿದ್ದರಿಂದ ಒಂದು ಅವಕಾಶ ಕೈತಪ್ಪಿತ್ತು. ಇದನ್ನೂ ಓದಿ: Asian Games 2023- ಪುರುಷರ ಟ್ರ್ಯಾಪ್ ಶೂಟಿಂಗ್‌ನಲ್ಲಿ ಭಾರತಕ್ಕೆ ಚಿನ್ನ
ತಜೀಂದರ್‌ಗೆ ಒಂದೇ ಒಂದು ಅವಕಾಶ ಮಾತ್ರ ಬಾಕಿಯಿತ್ತು. ಕೊನೆಗೆ ತಮ್ಮ 6ನೇ ಹಾಗೂ ಕೊನೆಯ ಪ್ರಯತ್ನದಲ್ಲಿ ತಜೀಂದರ್ 20.36 ಮೀಟರ್‌ಗಳ ಪ್ರಬಲ ಎಸೆತದೊಂದಿಗೆ ಗೆಲುವಿನ ನಗೆ ಬೀರಿದರು. ಅಷ್ಟೇ ಅಲ್ಲದೇ ಪುರುಷರ ಶಾಟ್‌ಪುಟ್ ವಿಭಾಗದಲ್ಲಿ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಂಡು ಚಿನ್ನದ ಪಕದ ಗೆದ್ದ 4ನೇ ಆಟಗಾರ ಎಂಬ ಸಾಧನೆಗೂ ಭಾಜನರಾದರು. 1954 ಮತ್ತು 1958ರಲ್ಲಿ ಪರ್ದುಮಾನ್ ಸಿಂಗ್ ಬ್ರಾರ್, 1966 ಮತ್ತು 1970ರಲ್ಲಿ ಜೋಗಿಂದರ್ ಸಿಂಗ್ ಹಾಗೂ 1978 ಮತ್ತು 1982ರಲ್ಲಿ ಬಹದ್ದೂರ್ ಸಿಂಗ್ ಚೌಹಾನ್ ಈ ಸಾಧನೆ ಮಾಡಿದ್ದರು. ಇದನ್ನೂ ಓದಿ: ವಿಶ್ವಕಪ್ ಕ್ರಿಕೆಟ್ – ಸೂಪರ್ ಓವರ್ ಟೈ ಆದ್ರೆ ಬೌಂಡರಿಯನ್ನು ಪರಿಗಣಿಸಲಾಗುತ್ತಾ? 2019ರಲ್ಲಿ ಏನಾಗಿತ್ತು?
ಬೆಳ್ಳಿ ಪಡೆದು ಮಿಂಚಿದ ಪುರುಷರ ಬ್ಯಾಡ್ಮಿಂಟನ್ ತಂಡ: ಏಷ್ಯನ್ ಗೇಮ್ಸ್ 2023ರ ಫೈನಲ್ನಲ್ಲಿ ಚೀನಾ ವಿರುದ್ಧ 2-3 ಅಂತರದಿಂದ ವೀರೋಚಿತ ಸೋಲನ್ನು ಅನುಭವಿಸಿ ಭಾರತೀಯ ಪುರುಷರ ಬ್ಯಾಡ್ಮಿಂಟನ್ ತಂಡವು ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟುಕೊಂಡಿತು. ಕಾಂಟಿನೆಂಟಲ್ ಈವೆಂಟ್‌ನಲ್ಲಿ ಭಾರತ ಬೆಳ್ಳಿ ಗೆದ್ದಿರುವುದು ಇದೇ ಮೊದಲು. ಹೀಗಾಗಿ ಭಾರತದ ಪಾಲಿಗೆ ಏಷ್ಯನ್ ಗೇಮ್ಸ್ ಇತಿಹಾಸದಲ್ಲಿ ವಿನೂತನ ಸಾಧನೆಯಾಗಿದೆ. ಭಾರತ 2-0 ಮುನ್ನಡೆ ಸಾಧಿಸುವುದರೊಂದಿಗೆ ಫೈನಲ್ ಪಂದ್ಯ ಪ್ರಾರಂಭವಾಯಿತು. ಆದರೆ ಸಿಡಿದೆದ್ದ ಚೀನಾ ಚಿನ್ನದ ಪದಕ ತನ್ನದಾಗಿಸಿಕೊಂಡಿತು.
Web Stories