Asian Games 2023: 5000 ಮೀ. ಓಟದಲ್ಲಿ ಪಾರುಲ್‌ ಪ್ರಚಂಡ ಗೆಲುವು – ವನಿತೆಯರ ಬಂಗಾರದ ಬೇಟೆ

Public TV
2 Min Read
Gold 1

ಹ್ಯಾಂಗ್‌ಝೌ: ಇಲ್ಲಿ ನಡೆಯುತ್ತಿರುವ ಏಷ್ಯನ್‌ ಗೇಮ್ಸ್‌ನ (Asian Games) 10ನೇ ದಿನವಾದ ಮಂಗಳವಾರ ಭಾರತೀಯ ಕ್ರೀಡಾಪಟುಗಳ ಪದಕ ಬೇಟೆ ಮುಂದುವರಿದಿದೆ. ಅಥ್ಲಿಟ್‌ ವಿಭಾಗದಲ್ಲಿ ಮಹಿಳೆಯರೇ ಎರಡು ಚಿನ್ನದ ಪದಕಗಳನ್ನ (Gold Medal) ಬೇಟೆಯಾಡಿದ್ದಾರೆ.

ಮಂಗಳವಾರ (ಇಂದು) ನಡೆದ ಏಷ್ಯನ್‌ ಗೇಮ್ಸ್‌ನಲ್ಲಿ ಮಹಿಳೆಯರ 5,000 ಮೀಟರ್‌ ಓಟದಲ್ಲಿ ಪಾರುಲ್‌ ಚೌಧರಿ (Parul Chaudhary) ಚಿನ್ನದ ಪದಕ ಗೆದ್ದು ಬೀಗಿದ್ದಾರೆ. ಇದರ ಬೆನ್ನಲ್ಲೇ ಮಹಿಳೆಯರ ಜಾವೆಲಿನ್‌ ಥ್ರೋ ವಿಭಾಗದಲ್ಲಿ ಅನ್ನು ರಾಣಿ (Annu Rani) ಚಿನ್ನದ ಪದಕ ಗೆದ್ದು ಬೀಗಿದ್ದಾರೆ. ಇದನ್ನೂ ಓದಿ: Asian Games 2023 ನೇಪಾಳ ವಿರುದ್ಧ 23 ರನ್‌ಗಳ ಜಯ – ಸೆಮಿಫೈನಲ್‌ಗೆ ಭಾರತ 

5,000 ಮೀಟರ್‌ ಓಟದಲ್ಲಿ ಸದೃಢ ಸಾಮರ್ಥ್ಯ ಪ್ರದರ್ಶಿಸಿದ 28ರ ಹರೆಯದ ಪಾರುಲ್‌ 15:14:75 ನಿಮಿಷಗಳಲ್ಲಿ ಜಪಾನಿನ ಪ್ರತಿಸ್ಪರ್ಧಿ ರಿರಿಕಾ ಹಿರೋನಾಕಾ ಅವರನ್ನು ಹಿಂದಿಕ್ಕುವ ಮೂಲಕ ಪ್ರಚಂಡ ಗೆಲುವು ಸಾಧಿಸಿದ್ದಾರೆ. ಇತ್ತ ಭಾರತದ ಅನ್ನು ರಾಣಿ 62.92 ಮೀಟರ್‌ ಜಾವೆಲಿನ್‌ ಎಸೆಯುವ ಮೂಲಕ ಚಿನ್ನದ ಪದಕಕ್ಕೆ ಕೊರಳೊಡ್ಡಿದ್ದಾರೆ. ಇದನ್ನೂ ಓದಿ: Asian Games 2023: ಚೊಚ್ಚಲ ಅಂತಾರಾಷ್ಟ್ರೀಯ T20 ಶತಕ ಸಿಡಿಸಿ ಗಿಲ್‌ ದಾಖಲೆ ಮುರಿದ ಯಶಸ್ವಿ

ಇನ್ನೂ ಪುರುಷರ 800 ಮೀಟರ್‌ ಓಟದಲ್ಲಿ ಮೊಹಮ್ಮದ್‌ ಅಫ್ಜಲ್‌ ಪುಳಿಕ್ಕಲಕತ್‌ 1:48:43 ನಿಮಿಷಗಳಲ್ಲಿ ಗುರಿ ತಲುಪುವ ಮೂಲಕ ಬೆಳ್ಳಿ ಪದಕ ಬಾಚಿಕೊಂಡಿದ್ದಾರೆ. 9ನೇ ದಿನವಾದ ಸೋಮವಾರ ಪಾರುಲ್‌ ಮಹಿಳೆಯರ 3000 ಮೀ. ಸ್ಟೀಪಲ್‌ ಚೇಸ್‌ನಲ್ಲಿ ಬೆಳ್ಳಿ ಪದಕ ಬಾಚಿಕೊಂಡ ನಂತರ ಕಾಂಟಿನೆಂಟಲ್‌ ಚಾಂಪಿಯನ್‌ಶಿಪ್‌ನಲ್ಲಿ ಇದು 2ನೇ ಪದಕವಾಗಿದೆ. ಇದಕ್ಕೂ ಮುನ್ನ ನಡೆದ ಮಹಿಳೆಯರ 400 ಮೀಟರ್‌ ಹರ್ಡಲ್ಸ್‌ನಲ್ಲಿ 25 ವರ್ಷದ ವಿತ್ಯಾ ರಾಮರಾಜ್‌ 55.68 ಸೆಕೆಂಡ್‌ಗಳಲ್ಲಿ ಗುರಿ ತಲುಪಿ ಕಂಚಿನ ಪದಕ ಗೆದ್ದು ಬೀಗಿದರು.

ಈಗಾಗಲೇ ಒಟ್ಟು 296 ಪದಕಗಳನ್ನು (161 ಚಿನ್ನ, 89 ಬೆಳ್ಳಿ, 46 ಕಂಚು) ಗೆದ್ದಿರುವ ಚೀನಾ ಆರಂಭದಿಂದಲೂ ಮೊದಲ ಸ್ಥಾನದಲ್ಲೇ ಮುಂದುವರಿದಿದೆ. 130 ಪದಕಗಳನ್ನು (33 ಚಿನ್ನ, 47 ಬೆಳ್ಳಿ, 50 ಕಂಚು) ಗೆದ್ದಿರುವ ಜಪಾನ್‌ 2ನೇ ಸ್ಥಾನದಲ್ಲಿದೆ. ರಿಪಬ್ಲಿಕ್‌ ಕೊರಿಯಾ 139 ಪದಕಗಳನ್ನ (32 ಚಿನ್ನ, 42 ಬೆಳ್ಳಿ, 65 ಕಂಚು) ಗೆದ್ದು 3ನೇ ಸ್ಥಾನದಲ್ಲಿದೆ. ಈವರೆಗೆ ಭಾರತ 15 ಚಿನ್ನ, 26 ಬೆಳ್ಳಿ ಹಾಗೂ 28 ಕಂಚು ಸೇರಿದಂತೆ ಒಟ್ಟು 69 ಪದಕಗಳನ್ನ ಬಾಚಿಕೊಂಡಿರುವ ಭಾರತ 4ನೇ ಸ್ಥಾನವನ್ನು ಭದ್ರಪಡಿಸಿಕೊಂಡಿದೆ.

Web Stories

Share This Article