ಮುಂಬೈ: ಇದೇ ಆಗಸ್ಟ್ 30 ರಿಂದ ಆರಂಭವಾಗಲಿರುವ ಏಕದಿನ ಏಷ್ಯಾಕಪ್ (AsiaCup) ಟೂರ್ನಿಗೆ ನಿನ್ನೆಯಷ್ಟೇ ಭಾರತ ಬಲಿಷ್ಠ ತಂಡವನ್ನ ಪ್ರಕಟಿಸಿದೆ. ಸೆಪ್ಟೆಂಬರ್ 17ರಂದು ಫೈನಲ್ ಪಂದ್ಯ ನಡೆಯಲಿದೆ. ಆದರೆ ಈ ಟೂರ್ನಿಗೆ ಮತ್ತಷ್ಟು ರಂಗು ಕೊಡಲು ನಿರೂಪಕರು ಸಜ್ಜಾಗಿದ್ದು, ಕಾರ್ಯಕ್ರಮ ನಿರೂಪಣೆಗೆ ಸುಂದರ ನಿರೂಪಕಿಯರನ್ನೂ ಆಯ್ಕೆ ಮಾಡಿದೆ. ಅವರ ಪಟ್ಟಿ ಹೀಗಿದೆ.
Introducing the charismatic presenters for the #AsiaCup2023! ???? Get ready for the perfect blend of cricketing insight and entertainment! ????????
Tune-in to #AsiaCupOnStar Aug 30 | 2 PM | Star Sports Network #Cricket pic.twitter.com/mgXoNmN583
— Star Sports (@StarSportsIndia) August 20, 2023
Advertisement
ಭಾರತದ ಪ್ರಸಿದ್ಧ ಟಿವಿ ನಿರೂಪಕಿ ಮಾಯಂತಿ ಲ್ಯಾಂಗರ್ (Mayanti Langer) ಏಷ್ಯಾಕಪ್ ಟೂರ್ನಿಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಸ್ಟಾರ್ ಸ್ಪೋರ್ಟ್ಸ್ನಲ್ಲಿ 2023ರ ಏಷ್ಯಾಕಪ್ ಟೂರ್ನಿಯಲ್ಲಿ ಭಾರತದ ಅಭಿಮಾನಿಗಳನ್ನು ತಮ್ಮ ಅಂದ-ಚಂದದ ಮಾತಿನ ಮೂಲಕ ರಂಜಿಸಲಿದ್ದಾರೆ. ಕರ್ನಾಟಕದ ರೋಜರ್ ಬಿನ್ನಿ ಅವರ ಮಗ, ಮಾಜಿ ಕ್ರಿಕೆಟಿಗನೂ ಆಗಿರುವ ಸ್ಟುವರ್ಟ್ ಬಿನ್ನಿ ಅವರ ಪತ್ನಿ. ಮಾಯಂತಿ ಸಾಮಾಜಿಕ ಜಾಲತಾಣಗಳಲ್ಲಿ ತುಂಬಾ ಸಕ್ರಿಯರಾಗಿದ್ದು, ಇನ್ಸ್ಟಾಗ್ರಾಂನಲ್ಲಿ (Instagram) 7.5 ಲಕ್ಷಕ್ಕೂ ಹೆಚ್ಚು ಫಾಲೋವರ್ಸ್ ಅನ್ನು ಹೊಂದಿದ್ದಾರೆ. ಇದನ್ನೂ ಓದಿ: Asia Cup 2023: ಭಾರತ ತಂಡ ಪ್ರಕಟ – ಕೆ.ಎಲ್.ರಾಹುಲ್, ಅಯ್ಯರ್ ವಾಪಸ್
Advertisement
Advertisement
ಪಾಕಿಸ್ತಾನಿ ಟಿವಿ ನಿರೂಪಕಿ ಜೈನಾಬ್ ಅಬ್ಬಾಸ್ ಕೂಡ ಸ್ಟಾರ್ ಸ್ಫೋಟ್ಸ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಜೈನಾಬ್ ಐಸಿಸಿ, ಪಿಸಿಬಿ, ಸ್ಕೈ ಸ್ಪೋರ್ಟ್ಸ್, ಸೋನಿ, ಸ್ಟಾರ್ ಸ್ಪೋರ್ಟ್ಸ್ ಸೇರಿದಂತೆ ಹಲವು ಕಡೆ ನಿರೂಪಕಿಯಾಗಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಜೈನಾಬ್ ಸಾಮಾಜಿಕ ಜಾಲತಾಣಗಳಲ್ಲಿ ತುಂಬಾ ಸಕ್ರಿಯರಾಗಿದ್ದು, ಇನ್ಸ್ಟಾಗ್ರಾಮ್‌ನಲ್ಲಿ 8.5 ಲಕ್ಷಕ್ಕೂ ಹೆಚ್ಚು ಫಾಲೋವರ್ಸ್‌ಗಳನ್ನ ಹೊಂದಿದ್ದಾರೆ. ಈ ಬಾರಿ ಏಷ್ಯಾಕಪ್ ಮೂಲಕ ಅಭಿಮಾನಿಗಳನ್ನು ಮತ್ತಷ್ಟು ರಂಜಿಸಲಿದ್ದಾರೆ.
Advertisement
ಭಾರತದ ನಟಿಯೂ ಆಗಿರುವ ಜೈತಿ ಖೇರಾ (Jaiti Khera) ಕೋಟಾ ಫ್ಯಾಕ್ಟರಿ ಸೀಸನ್ 2 ಮತ್ತು ದೆಹಲಿ ಕ್ರೈಮ್ ಸೀಸನ್-1ರಲ್ಲಿ ಕಾಣಿಸಿಕೊಂಡಿದ್ದಾರೆ. ಜೈತಿ ಐಪಿಎಲ್‌ನಲ್ಲಿ ನಿರೂಪಕರಾಗಿಯೂ ಕೆಲಸ ಮಾಡಿದ್ದಾರೆ. ಆಗಾಗ್ಗೆ ತಮ್ಮ ಅಭಿಮಾನಿಗಳಿಗಾಗಿ ಫೋಟೋಗಳು ಮತ್ತು ವಿಡಿಯೋಗಳನ್ನು ಹಂಚಿಕೊಂಡು ರಂಜಿಸುತ್ತಾರೆ. ಇದನ್ನೂ ಓದಿ: ಬ್ಯಾಕಪ್ ಪಟ್ಟಿ ಸೇರಿದ ಟೀಂ ಇಂಡಿಯಾ ಸ್ಟಾರ್ – ವಿಶ್ವಕಪ್ ಆಡುವ ಸಂಜು ಸ್ಯಾಮ್ಸನ್ ಕನಸು ಭಗ್ನ?
Web Stories