ಇಸ್ಲಾಮಾಬಾದ್: ನಾಯಕ ಬಾಬರ್ ಆಜಂ (Babar Azam), ಇಫ್ತಿಕಾರ್ ಅಹ್ಮದ್ (Iftikhar Ahmed) ಶತಕದ ಬ್ಯಾಟಿಂಗ್ ಹಾಗೂ ಶಾದಾಬ್ ಖಾನ್ ಸ್ಪಿನ್ ಬೌಲಿಂಗ್ ದಾಳಿ ನೆರವಿನಿಂದ ಪಾಕಿಸ್ತಾನ ತಂಡ ನೇಪಾಳ ವಿರುದ್ಧ 238 ರನ್‌ಗಳ ಭರ್ಜರಿ ಜಯ ಸಾಧಿಸಿದೆ. ಈ ಮೂಲಕ 2023ರ ಏಷ್ಯಾಕಪ್ (AsiaCup 2023) ಟೂರ್ನಿಯ ಉದ್ಘಾಟನಾ ಆವೃತ್ತಿಯಲ್ಲಿ ಪಾಕಿಸ್ತಾನ ಗೆಲುವಿನ ಶುಭಾರಂಭ ಕಂಡಿದೆ.
Asia Cup campaign begins in style! ????
4️⃣ wickets for @76Shadabkhan as Pakistan achieve their third-highest margin of victory in ODIs ✨#PAKvNEP | #AsiaCup2023 pic.twitter.com/GmTk0tKCbp
— Pakistan Cricket (@TheRealPCB) August 30, 2023
Advertisement
ಇಲ್ಲಿನ ಮುಲ್ತಾನ್ ಕ್ರೀಡಾಂಗಣದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಪಾಕ್ ತಂಡ ನಿಗದಿತ ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 342 ರನ್ ಪೇರಿಸಿತ್ತು. 343 ರನ್‌ಗಳ ಬೃಹತ್ ಮೊತ್ತದ ಗುರಿ ಬೆನ್ನತ್ತಿದ್ದ ನೇಪಾಳ ತಂಡ (Nepal Team) 23.4 ಓವರ್‌ಗಳಲ್ಲೇ 104 ರನ್‌ಗಳ ಸರ್ವಪತನ ಕಂಡಿತು. ಇದನ್ನೂ ಓದಿ: AsiaCup 2023: ಉದ್ಘಾಟನೆಗೆ ರಂಗು ತುಂಬಿದ ಬಿಳಿ ಸೀರೆಯ ಸುಂದರಿ – ಈಕೆ ಯಾರು ಗೊತ್ತಾ?
Advertisement
ಬೃಹತ್ ಮೊತ್ತದ ಗುರಿ ಬೆನ್ನತ್ತಿದ ನೇಪಾಳ ತಂಡ ಪಾಕ್ ಬೌಲರ್‌ಗಳ ದಾಳಿಗೆ ಸಂಪೂರ್ಣ ತತ್ತರಿಸಿದರು. ಮಧ್ಯಮ ಕ್ರಮಾಂಕದಲ್ಲಿ ಆರಿಫ್ ಶೇಖ್ 26 ರನ್, ಸೋಂಪಾಲ್ ಕಾಮಿ 28 ರನ್ ಗಳಿಸಿದ್ದು ಬಿಟ್ಟರೆ ಉಳಿದ ಯಾರೊಬ್ಬರೋ ಕ್ರೀಸ್‌ನಲ್ಲಿ ಉಳಿಯದ ಕಾರಣ ಪಾಕ್ ತಂಡಕ್ಕೆ ಗೆಲುವು ಸುಲಭ ತುತ್ತಾಯಿತು.
Advertisement
Advertisement
ಪಾಕ್ ಪರ ಸ್ಪಿನ್ ದಾಳಿ ನಡೆಸಿದ ಶಾದಾಬ್ ಖಾನ್ 6.4 ಓವರ್‌ಗಳಲ್ಲಿ 27 ರನ್ ಬಿಟ್ಟುಕೊಟ್ಟು ಪ್ರಮುಖ 4 ವಿಕೆಟ್‌ಗಳನ್ನು ಕಿತ್ತರೆ, ಶಾಹೀನ್ ಶಾ ಅಫ್ರಿದಿ ಹಾಗೂ ಹ್ಯಾರಿಸ್ ರೌಫ್ ತಲಾ 2 ವಿಕೆಟ್ ಪಡೆದರು. ನಸೀಮ್ ಶಾಹಾಗೂ ಮೊಹಮ್ಮದ್ ನವಾಜ್ ತಲಾ ಒಂದೊಂದು ವಿಕೆಟ್ ಪಡೆದು ತಂಡಕ್ಕೆ ಗೆಲುವು ತಂದುಕೊಡುವಲ್ಲಿ ಯಶಸ್ವಿಯಾದರು.
ಇದಕ್ಕೂ ಮುನ್ನ ಬ್ಯಾಟಿಂಗ್ ಮಾಡಿದ ಪಾಕ್ 6 ವಿಕೆಟ್ ಕಳೆದುಕೊಂಡು 342 ರನ್ ಕಲೆಹಾಕಿತು. ನಾಯಕ ಬಾಬರ್ ಅಜಂ ಹಾಗೂ ಇಫ್ತಿಕಾರ್ ಅಹ್ಮದ್ ಅಮೋಘ ಶತಕ ಸಿಡಿಸಿ ಅಬ್ಬರಿಸಿದರು. ಇದನ್ನೂ ಓದಿ: AsiaCup ಟೂರ್ನಿಯಲ್ಲಿ ಭಾರತದ್ದೇ ಮೇಲುಗೈ – ಗೆದ್ದವರು, ಬಿದ್ದವರ ಕಥೆ
ಆರಂಭಿಕರಾಗಿ ಕಣಕ್ಕಿಳಿದ ಪಖಾರ್ ಜಮಾನ್ ಹಾಗೂ ಇಮಾಮ್ ಉಲ್ ಹಕ್ ಉತ್ತಮ ಆರಂಭ ನೀಡುವಲ್ಲಿ ವಿಫಲವಾದರು ಮೂರನೇ ಕ್ರಮಾಂಕದಲ್ಲಿ ಬಂದ ಬಾಬರ್ ಆಜಂ, ಮಧ್ಯಮ ಕ್ರಮಾಂಕದಲ್ಲಿ ಕ್ರೀಸ್‌ಗಿಳಿದ, ಇಫ್ತಿಕಾರ್ ಅಹಮದ್ ಹಾಗೂ ಮೊಹಮದ್ ರಿಜ್ವಾನ್ ಭರ್ಜರಿ ಬ್ಯಾಟಿಂಗ್ ನೆರವಿಂದ ಉತ್ತಮ ರನ್ ಗಳಿಸುವಲ್ಲಿ ಯಶಸ್ವಿಯಾಯಿತು.
ಬಾಬರ್ ಅಜಂ 131 ಎಸೆಗಳಲ್ಲಿ 151 ರನ್ (14 ಬೌಂಡರಿ, 4 ಸಿಕ್ಸರ್) ಬಾರಿಸಿದರೆ, ಏಕದಿನ ಕ್ರಿಕೆಟ್‌ನಲ್ಲಿ ತಮ್ಮ ಚೊಚ್ಚಲ ಶತಕ ದಾಖಲಿಸಿದ ಇಫ್ತಿಕಾರ್ ಅಹ್ಮದ್ 71 ಎಸೆತಗಳಲ್ಲಿ ಸ್ಫೋಟಕ 109 ರನ್ (11 ಬೌಂಡರಿ, 4 ಸಿಕ್ಸರ್) ಚಚ್ಚಿದರು. ಇದರೊಂದಿಗೆ ಮೊಹಮ್ಮದ್ ರಿಜ್ವಾನ್ 50 ಎಸೆತಗಳಲ್ಲಿ 6 ಬೌಂಡರಿಗಳೊಂದಿಗೆ 44 ರನ್ ಕೊಡುಗೆ ನೀಡಿದರು.
ನೇಪಾಳ ತಂಡದ ಪರ ಸಂಪಾಲ್ ಕಾಮಿ 2 ವಿಕೆಟ್ ಪಡೆದರೆ, ಕೆ.ಸಿ ಕರನ್, ಸಂದೀಪ್ ಲಮಿಚಾನೆ ತಲಾ ಒಂದೊಂದು ವಿಕೆಟ್ ಪಡೆದರು.
Web Stories