ದುಬೈ: ಏಷ್ಯಾಕಪ್ ಕ್ರಿಕೆಟ್ ಟೂರ್ನಿಯ ಸೂಪರ್ 4 ಹಂತದಲ್ಲಿ ಬಾಂಗ್ಲಾ ವಿರುದ್ಧ ನಡೆದ ಪಂದ್ಯದಲ್ಲಿ ಶಿಖರ್ ಧವನ್ 4 ಕ್ಯಾಚ್ ಪಡೆಯುವ ಅಪರೂಪದ ಸಾಧನೆ ಮಾಡಿದ್ದು, ಏಕದಿನ ಕ್ರಿಕೆಟ್ ಪಂದ್ಯವೊಂದರಲ್ಲಿ ಅತೀ ಹೆಚ್ಚು ಕ್ಯಾಚ್ ಪಡೆದಿದ್ದ ದ್ರಾವಿಡ್, ಸಚಿನ್ ಸಾಲಿಗೆ ಸೇರ್ಪಡೆಯಾಗಿದ್ದಾರೆ.
ಏಷ್ಯಾಕಪ್ ಟೂರ್ನಿಯಲ್ಲಿ ಉತ್ತಮವಾಗಿ ಬ್ಯಾಟಿಂಗ್ ನಡೆಸುವ ಮೂಲಕ ಫಾರ್ಮ್ ಗೆ ಮರಳಿರುವ ಧವನ್ ಬಾಂಗ್ಲಾ ವಿರುದ್ಧದ ಪಂದ್ಯದಲ್ಲಿ ಫೀಲ್ಡಿಂಗ್‍ನಲ್ಲೂ ಮಿಂಚಿದ್ದಾರೆ. ಬಾಂಗ್ಲಾ ತಂಡದ ಸಜ್ಮುಲ್ ಹುಸೇನ್, ಶಕೀಬ್ ಅಲ್ ಹಸನ್, ಮುಸ್ತಫಿಜುರ್ ರಹಿಮಾನ್, ಮೆಹಿರ್ ಹಸನ್ ಕ್ಯಾಚ್ ಪಡೆಯುವ ಮೂಲಕ ಈ ಸಾಧನೆ ಮಾಡಿದರು. ದಾಖಲೆಯ ಪಟ್ಟಿಯಲ್ಲಿ ಟೀಂ ಇಂಡಿಯಾ ಮಾಜಿ ನಾಯಕ ಸುನಿಲ್ ಗವ್ಕಾಸರ್, ಮೊಹಮ್ಮದ್ ಅಜರುದ್ದೀನ್, ಮೊಹಮ್ಮದ್ ಕೈಫ್, ವಿವಿಎಸ್ ಲಕ್ಷ್ಮಣ್ ರಂತಹ ದಿಗ್ಗಜರು ಸ್ಥಾನ ಪಡೆದಿದ್ದಾರೆ. ಉಳಿದಂತೆ ವಿಶ್ವ ಕ್ರಿಕೆಟ್‍ನಲ್ಲಿ ದಕ್ಷಿಣ ಆಫ್ರಿಕಾ ಆಟಗಾರ ಜಾಂಟಿ ರೋಡ್ಸ್ 1993 ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ನಡೆದ ಪಂದ್ಯದಲ್ಲಿ 5 ಕ್ಯಾಚ್ ಪಡೆದು ಮೊದಲ ಸ್ಥಾನದಲ್ಲಿದ್ದಾರೆ.
Advertisement
Advertisement
ಇಂಗ್ಲೆಂಡ್ ವಿರುದ್ಧ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ನೀಡುವಲ್ಲಿ ಧವನ್ ವಿಫಲವಾಗಿದ್ದರೂ, ಏಷ್ಯಾಕಪ್ ಟೂರ್ನಿಯಲ್ಲಿ ಹಾಂಕಾಂಗ್, ಪಾಕಿಸ್ತಾನ ಹಾಗೂ ಬಾಂಗ್ಲಾದೇಶ ವಿರುದ್ಧ ಕ್ರಮವಾಗಿ 127, 46, 40 ರನ್ ಸಿಡಿಸಿ ಮಿಂಚಿದ್ದಾರೆ. ಒಟ್ಟಾರೆ ಟೂರ್ನಿಯಲ್ಲಿ 96.38 ಸರಾಸರಿಯಲ್ಲಿ 213 ರನ್ ಸಿಡಿಸಿದ್ದಾರೆ. ಅಲ್ಲದೇ ನಾಯಕ ರೋಹಿತ್ ಶರ್ಮಾ ರೊಂದಿಗೆ ಸೇರಿ ತಂಡಕ್ಕೆ ಉತ್ತಮ ಆರಂಭ ನೀಡುತ್ತಿದ್ದಾರೆ.
Advertisement
ಟೂರ್ನಿಯಲ್ಲಿ ಟೀಂ ಇಂಡಿಯಾ ಹಾಂಕಾಂಗ್, ಪಾಕಿಸ್ತಾನ ಹಾಗೂ ಬಾಂಗ್ಲಾ ವಿರುದ್ಧ ಆಡಿರುವ 3 ಪಂದ್ಯಗಳಲ್ಲಿ ಜಯಗಳಿಸಿದ್ದು, ಸೂಪರ್ 4 ಹಂತದಲ್ಲಿ ಭಾನುವಾರ ಮತ್ತೊಮ್ಮೆ ಪಾಕ್ ತಂಡವನ್ನು ಎದುರಿಸಲಿದೆ.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
Had a good slip catch practice session with an innovate drill setup by @coach_rsridhar to improve reaction time.
Pro-tip to everyone watching this video: Stay low and keep soft hands to not miss those tough slip catches. #teamindia #practice #catcheswinmatches pic.twitter.com/CjpyQlOdoI
— Shikhar Dhawan (@SDhawan25) August 28, 2018