ದುಬೈ: ಇಲ್ಲಿನ ಅಂತರಾಷ್ಟೀಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಏಷ್ಯಾಕಪ್ ಕ್ರಿಕೆಟ್ ಸೂಪರ್ 4ರ ಹಂತದ ಇಂಡೊ-ಪಾಕ್ ಕದನದಲ್ಲಿ ಶೋಯಿಬ್ ಮಲಿಕ್‍ರ ಅರ್ಧಶತಕದ ನೆರವಿನಿಂದ ಪಾಕಿಸ್ತಾನ ಸ್ಪರ್ಧಾತ್ಮಕ ಮೊತ್ತ ದಾಖಲಿಸಿದ್ದು, ಟೀಂ ಇಂಡಿಯಾಗೆ 238 ರನ್ ಗುರಿ ನೀಡಿದೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಪಾಕ್ ಆರಂಭಿಕರಾದ ಫಾಖರ್ ಜಮಾನ್ ಹಾಗೂ ಇಮಾಮ್ ಉಲ್ ಹಕ್ ಜೋಡಿ ಮೊದಲ ವಿಕೆಟ್‍ಗೆ ಉತ್ತಮ ಆರಂಭ ನಿರೀಕ್ಷೆ ಮೂಡಿದರು. ಆದರೆ ಈ ವೇಳೆ ದಾಳಿಗಿಳಿದ ಚಹಲ್ 10 ರನ್ ಗಳಿಸಿದ್ದ ಇಮಾಮ್ ಉಲ್ ಹಕ್ ವಿಕೆಟ್ ಪಡೆದು ಇಬ್ಬರ ಜೋಡಿಯನ್ನ ಬೇರ್ಪಡಿಸಿದರು. ಬಳಿಕವೂ ಪಾಕ್ ಎಚ್ಚರಿಕೆ ಆಟವಾಡಲು ಯತ್ನಿಸಿದರು ಟೀಂ ಇಂಡಿಯಾ ಬೌಲರ್ ಗಳು 55 ರನ್ ಗಳಿಸುವ ವೇಳೆಗೆ 3 ವಿಕೆಟ್ ಪಡೆದು ಪಾಕ್ ತಂಡವನ್ನು ಸಂಕಷ್ಟಕ್ಕೆ ಸಿಲುಕುವಂತೆ ಮಾಡಿದರು.
Advertisement
Pakistan finish their innings on 237/7 with @realshoaibmalik top-scoring with 78.
Will India chase it down? #PAKvIND
FOLLOW LIVE????????https://t.co/0SqS4ClLWD pic.twitter.com/5MwnoG363o
— ICC (@ICC) September 23, 2018
Advertisement
ಈ ಹಂತದಲ್ಲಿ ಜೊತೆಗೂಡಿದ ನಾಯಕ ಸರ್ಫರಾಜ್ ಅಹ್ಮದ್ ಹಾಗೂ ಮಾಜಿ ನಾಯಕ ಶೋಯಿಬ್ ಮಲಿಕ್ ಜೋಡಿ 107 ರನ್ ಗಳಿಸಿ ಶತಕ ಜೊತೆಯಾಟ ನೀಡಿ ತಂಡ ಮೊತ್ತ 150ರ ಗಡಿ ದಾಟುವಂತೆ ಮಾಡಿದರು.
Advertisement
ಕಳೆದ ಪಂದ್ಯದಲ್ಲೂ ಟೀಂ ಇಂಡಿಯಾ ಬೌಲರ್ ಗಳನ್ನು ಕಾಡಿದ್ದ ಮಲಿಕ್ 90 ಎಸೆತಗಳಲ್ಲಿ 78 ರನ್ (4 ಬೌಂಡರಿ, 2 ವಿಕೆಟ್) ಸಿಡಿಸಿದರು. ಈ ವೇಳೆ ದಾಳಿಗಳಿದ ಕುಲ್‍ದೀಪ್ ಯಾದವ್ ಅರ್ಧ ಶತಕದ ಅಂಚಿನಲ್ಲಿದ್ದ (44 ರನ್) ಸರ್ಫರಾಜ್ ಖಾನ್ ವಿಕೆಟ್ ಪಡೆದರು. ಬಿರುಸಿನ ಆಟಕ್ಕೆ ಮುಂದಾದ ಮಲಿಕ್, ಬುಮ್ರಾ ಬೌಲಿಂಗ್‍ನಲ್ಲಿ ಧೋನಿಗೆ ಕ್ಯಾಚ್ ನೀಡಿ ನಿರ್ಗಮಿಸಿದರು. ಇದರ ಬೆನ್ನಲ್ಲೇ ಚಹಲ್ ಆಸಿಫ್ ಅಲಿ ವಿಕೆಟ್ ಪಡೆದರು. ಅಂತಿಮವಾಗಿ ಪಾಕ್ 7 ವಿಕೆಟ್ ನಷ್ಟಕ್ಕೆ 237 ರನ್ ಗಳಿಸಿದರು.
Advertisement
ಟೀಂ ಇಂಡಿಯಾ ಪರ ಕುಲ್‍ದೀಪ್ ಯಾದವ್, ಚಹಲ್, ಬುಮ್ರಾ ತಲಾ 2 ವಿಕೆಟ್ ಪಡೆದರು. ಬಾಂಗ್ಲಾ ವಿರುದ್ಧ ಕಮ್ ಬ್ಯಾಕ್ ಪಂದ್ಯದಲ್ಲಿ ಮಿಂಚಿದ್ದ ಜಡೇಜಾ 9 ಓವರ್ ಎಸೆದು 50 ರನ್ ನೀಡಿ ವಿಕೆಟ್ ಪಡೆಯದೆ ದುಬಾರಿಯಾದರು.
Massive wicket for India!
Shoaib Malik nicks it to MS Dhoni behind the stumps and is gone for 78! Bumrah with the wicket.
Pakistan 205/5 off 44 overs. #PAKvIND
FOLLOW LIVE ????????https://t.co/0SqS4ClLWD pic.twitter.com/TqP9ThjF7t
— ICC (@ICC) September 23, 2018
Pakistan are recovering well through Shoaib Malik and Sarfraz Ahmed.
They are now 131/3 after 31 overs. How many will they up with?#PAKvIND FOLLOW LIVE????????https://t.co/0SqS4ClLWD pic.twitter.com/24bn6mnEte
— ICC (@ICC) September 23, 2018