ದುಬೈ: ಏಷ್ಯಾಕಪ್ ಕ್ರಿಕೆಟ್ ಟೂರ್ನಿಯ ಸೂಪರ್ 4 ಹಂತದ ಇಂಡೊ ಪಾಕ್ ಕದನದಲ್ಲಿ ಪಾಕಿಸ್ತಾನ ಆಟಗಾರ ಫಾಖರ್ ಜಮಾನ್ ಔಟಾಗದಿದ್ರೂ, ಔಟ್ ನೀಡಿ ಕ್ಷಣ ಮಾತ್ರದಲ್ಲಿ ತಮ್ಮ ತಪ್ಪಿನ ಅರಿವಾಗಿ ನಿರ್ಧಾರ ಬದಲಾಯಸಿದರು.
ಭುವನೇಶ್ವರ್ ಕುಮಾರ್ ಬೌಲಿಂಗ್‍ನಲ್ಲಿ ಇಮಾಮ್-ಉಲ್-ಹಕ್ ಸ್ಟ್ರೈಕ್ ನಲ್ಲಿದ್ದರು, ಈ ವೇಲೆ ಬಾಲ್ ವೈಡ್ ಆಗುತ್ತಿದ್ದಂತೆ ಬ್ಯಾಟ್ಸ್ ಮನ್ ರನ್ ಕದಿಯಲು ಮುಂದಾದ್ರು. ಈ ವೇಳೆ ಟೀಂ ಇಂಡಿಯಾ ಆಟಗಾರರು ಫಾಖರ್ ಜಮಾನ್ ರನೌಟ್ ಮನವಿ ಮಾಡಿದರು. ಭಾರತ್ ಮನವಿಗೆ ಫೀಲ್ಡ್ ಅಂಪೈರ್ ರಿವ್ಯೂ ಪಡೆದರು. ಈ ವೇಳೆ ಫಾಖರ್ ಜಮಾನ್ ಸೇಫ್ ಆಗಿ ಕ್ರಿಸ್ ಆಗಮಿಸಿದ್ದರು. ಆದರೆ ಮೂರನೇ ಅಂಪೈರ್ ಗ್ರೆಗೋರಿ ಬ್ರಾಥ್ವೈಟ್ ರಿವ್ಯೂ ನೋಡದೆ ಮೊದಲು ಔಟ್ ಎಂದು ತೀರ್ಪು ನೀಡಿದ್ದರು. ಬಳಿಕ ಕ್ಷಣ ಮಾತ್ರದಲ್ಲಿ ತಮ್ಮ ತೀರ್ಮಾನ ಬದಲಾಯಿಸಿ ನಾಟೌಟ್ ಎಂದು ತೀರ್ಪು ಬದಲಾಯಸಿದರು.
Advertisement
Advertisement
ಈ ವೇಳೆ ಪಂದ್ಯದ ಕಮೆಂಟ್ರಿ ಮಾಡುತ್ತಿದ್ದ ಹರ್ಭಜನ್ ಸಿಂಗ್ ನೇರ ಪ್ರಸಾರದಲ್ಲಿಯೇ ತಮ್ಮ ಮೃದುವಾದ ಮಾತುಗಳಿಂದ ಅಂಪೈರ್ ಕಾಲೆಳೆದಿದ್ದಾರೆ. ಭಾರತ-ಪಾಕಿಸ್ತಾನದ ನಡುವಿನ ಪಂದ್ಯ ರೋಚಕತೆ ಮತ್ತು ಕುತೂಹಲವನ್ನು ಒಳಗೊಂಡಿರೋದು ನಿಜ ಅಥವಾ ಇಷ್ಟೆಂದು ಒತ್ತಡ ಇರುತ್ತಾ…. ನಾಳೆ ದುಬೈನಲ್ಲಿ ವೀಕೆಂಡ್ ಇದ್ದು, ಇದು ತುಂಬಾನೇ ದೀರ್ಘ ರಾತ್ರಿ ಆಗಿದೆ ಎಂದು ಕಾಲೆಳೆದಿದ್ದಾರೆ.
Advertisement
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಪಾಕ್ ಶೋಯಿಬ್ ಮಲಿಕ್ 78 ರನ್ ಹಾಗೂ ಫಾಖರ್ ಜಮಾನ್ 44 ರನ್ ಜವಾಬ್ದಾರಿಯುತ ಅರ್ಧಶತಕದ ನೆರವಿನಿಂದ ಪಾಕಿಸ್ತಾ ಏಳು ವಿಕೆಟ್ ಕಳೆದುಕೊಂಡು 237 ರನ್ ಗಳಿಸಲು ಅಷ್ಟೇ ಶಕ್ತವಾಯಿತು. ಟೀಂ ಇಂಡಿಯಾ ಪರ ಕುಲ್‍ದೀಪ್ ಯಾದವ್, ಚಹಲ್, ಬುಮ್ರಾ ತಲಾ 2 ವಿಕೆಟ್ ಪಡೆದರು. ಬಾಂಗ್ಲಾ ವಿರುದ್ಧ ಕಮ್ ಬ್ಯಾಂಕ್ ಪಂದ್ಯದಲ್ಲಿ ಮಿಂಚಿದ್ದ ಜಡೇಜಾ 9 ಓವರ್ ಎಸೆದು 50 ರನ್ ನೀಡಿ ವಿಕೆಟ್ ಪಡೆಯದೆ ದುಬಾರಿಯಾದರು.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
https://twitter.com/StarManjeet1/status/1043840312257499136
Pakistan score 237 in 50 overs#TeamIndia require 238 to win
The chase in a bit #INDvPAK #AsiaCup pic.twitter.com/jPx3BQ4YY1
— BCCI (@BCCI) September 23, 2018